7 ವರ್ಷದ ಹುಡಗಿಯ ಪತ್ತೆಯಾಗಿದ್ದು, ಸದರಿ ಹುಡಗಿಯ ಪೋಷಕರು ತಮ್ಮ ಮಡಿಲಿಗೆ ಕರೆದುಕೊಂಡು ಹೋಗುವ ಬಗ್ಗೆ:
ಶ್ರೀ ಗುಂಡಯ್ಯ ತಂದೆ ಘಾಳಯ್ಯ ಕಲಾಲ ಉ|| ಗಾಂದಿನಗರ ತಾಂಡಾದಲ್ಲಿ ಹೊಟೆಲ ಕೆಲಸ ಸಾ|| ಕೊರವಿ ರವರು ನಾನು ದಿನಾಂಕ:15-06-2012 ರಂದು ಬೆಳಿಗ್ಗೆ ಸುಲೇಪೇಟ ಸಂತೆಗೆ ಹೋಗಿ ಮರಳಿ ಸಾಯಂಕಾಲ ಟೆಂಪೊದಲ್ಲಿ ಹೊರಟು ಕೊರವಿ ಗಾಂದಿ ನಗರ ತಾಂಡಾ ಕ್ರಾಸಗೆ ಇಳಿದು ಹೊಟೆಲ ಕಡೆಗೆ ಹೋಗುತ್ತಿರುವಾಗ ಸುಮಾರು 7 ವರ್ಷದ ಹುಡುಗಿಯು ತನ್ನ ಬೆನ್ನು ಹತ್ತಿ ಬರುತ್ತಿದ್ದಳು, ಆ ಹುಡುಗಿಗೆ ಯಾರಮ್ಮ ನೀನು ಅಂತ ಕೇಳಲು ಹುಡುಗಿ ಮಾತನಾಡಲಿಲ್ಲ, ಹುಡುಗಿ ಮೂಗಿಯಾಗಿರುತ್ತಾಳೆ ಆಗ ಹುಡುಗಿಯ ಬಗ್ಗೆ ತಾಂಡಾದಲ್ಲಿ ವಿಚಾರಿಸಲಾಗಿ ಯಾರೂ ತಮಗೆ ಗೊತ್ತಿಲ್ಲ ಅಂತ ತಿಳಿಸಿದರು, ಸದರಿ ಹುಡುಗಿಯ ಪೊಷಕರನ್ನು ಪತ್ತೆ ಮಾಡಿ ಅವರಲ್ಲಿಗೆ ಒಪ್ಪಿಸುವಂತೆ ಠಾಣೆಗ ಕರೆದುಕೊಂಡು ಬಂದಿದ್ದರಿಂದ, ಮಕ್ಕಳ ಸಹಾಯವಾಣಿ (ಚೈಲ್ಡ ಲೈನ್) ಸಿಬ್ಬಂದಿಯವರಾದ ಶ್ರೀಮತಿ ಮರಳಮ್ಮ ಹಾಗು ಕು|| ಯಲ್ಲುಬಾಯಿ ರವರನ್ನು ಠಾಣೆಗೆ ಕರೆಯಿಸಿಕೊಂಡು ಸದರಿ ಹುಡುಗಿಯನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ. ಸದರಿ ಹುಡಗಿಯ ಬಗ್ಗೆ ಹೆಚ್ಚಿನ ವಿವರಗಳಿಗೆ ರಟಕಲ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08475-297833 ಅಥವಾ ಮಕ್ಕಳ ಸಹಾಯವಾಣಿ (ಚೈಲ್ಡ ಲೈನ್) ಕಛೇರಿ ದೂರವಾಣಿ ನಂಬರ: 1098 / ಶ್ರೀ ಆನಂದರಾವ (ಚೈಲ್ಡ ಲೈನ) ಮೊಬಾಯಿಲ್ ನಂ: 9449310489 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
No comments:
Post a Comment