ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಅಮ್ಜದಖಾನ ತಂದೆ ಜಫರುಲ್ಲಾಖಾನ ಸಾ:ಇಸ್ಲಾಮಾಬಾದ ಕಾಲೋನಿ ಗುಲಬರ್ಗಾರವರು ನಾನು ದಿನಾಂಕ:19-6-2012 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂ ಕೆಎ:32-ಎಕ್ಸ:4221 ನೇದ್ದು, ಲಾಲಗೇರಿ ಕ್ರಾಸ್ ಹತ್ತಿರ ಇರುವ ಅರವಿಂದ ಮೆಡಿಕಲ್ ಅಂಗಡಿಯ ಮುಂದೆ ನಿಲ್ಲಿಸಿ ಚಹಾ ಕುಡಿಯುತ್ತಿದ್ದಾಗ ಟಾಟಾ ಎ.ಸಿ ವಾಹನ ನಂ ಕೆಎ:32- ಬಿ:5187 ನೇದ್ದರ ಚಾಲಕನು ತನ್ನ ವಾಹನವನ್ನು ಶರಣಬಸವೇಶ್ವರ ಗುಡಿಯ ಕಡೆಯಿಂದ ಅತೀವೇಗ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕಕ್ಕೆ ನಿಲ್ಲಿಸಿದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:34/2012 ಕಲಂ 279,ಐ.ಪಿ.ಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತೆನೆ.
ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಜಿತೇಂದ್ರ ತಂದೆ ಯಾದಯ್ಯ ಗುತ್ತೆದಾರ ಮು: ಅಂಬಲಗಾ ಗ್ರಾಮ ತಾ:ಆಳಂದ ಜಿಲ್ಲಾ ಗುಲಬರ್ಗಾರವರು ನನ್ನ ತಮ್ಮ ಮಿಥನ ಈತನಿಗೆ ಯಾರೋ ದುಷ್ಕರ್ಮಿಗಳು ದಿನಾಂಕ 17-06-12 ರಂದು ಬೆಳಿಗ್ಗೆ 8-00 ಗಂಟೆಯಿಂದ ದಿನಾಂಕ 19-06-2012 ಸಾಯಂಕಾಲ 6-00 ಗಂಟೆಯ ಮಧ್ಯದ ಅವಧಿಯಲ್ಲಿ ತಾವರಗೇರಾ ಕ್ರಾಸ ಹತ್ತಿರವಿರುವ ಬಸವಣ್ಣನ ಗುಡಿಯ ಹತ್ತಿರ ಯಾವದೋ ದುರುದ್ದೇಶದಿಂದ ಹರಿತವಾದ ಆಯುಧದಿಂದ ನಡು ತಲೆಯಲ್ಲಿ ಹಾಗೂ ಎಡ ತಲೆಗೆ ಮತ್ತು ಬಲ ಹುಬ್ಬಿನ ಮೇಲೆ ಹೊಡೆದು ಕೊಲೆ ಮಾಡಿರುತ್ತಾರೆ. ಕೊಲೆ ಮಾಡಿದವರ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:210/2012 ಕಲಂ 302 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment