Police Bhavan Kalaburagi

Police Bhavan Kalaburagi

Tuesday, June 19, 2012

GULBARGA DIST REPORTED CRIMES

ಕೊಲೆಗೆ ಪ್ರಯತ್ನ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ :ಶ್ರೀ.ಶರಣಬಸಪ್ಪ ತಂದೆ ಶಾಮರಾವ ಹೊಸಮನಿಸಾ||ನಂದಿಕೂರ ಗುಲಬರ್ಗಾ ರವರು ನನ್ನ ತಂದೆಯವರಾದ ಶಾಮರಾವ ಮತ್ತು ನನ್ನ ಚಿಕ್ಕಪ್ಪ ಶ್ರೀಮಂತ ಇಬ್ಬರು ಅಣ್ಣತಮ್ಮಂದಿರಿದ್ದು, ನಾವು ನಂ¢ಕೂರದಲ್ಲಿ ವಾಸವಾಗಿದ್ದು, ನನ್ನ ಕಾಕಾ ಗುಲಬರ್ಗಾದ ಸುಂದರ ನಗರದಲ್ಲಿ ವಾಸವಾಗಿರುತ್ತಾನೆ. ದಿನಾಂಕ: 18/06/2012 ರಂದು ನಮ್ಮ ಕಾಕಾನಾದ ಶ್ರೀಮಂತ ಇತನಿಗೆ ಅವನ ಮಗನಾದ ಭವಾನಿ ಇವನು ಜಗಳ ಮಾಡಿ ಹೊಡೆ ಬಡೆ ಮಾಡಿರುತ್ತಾನೆ ಅಂತಾ  ನಮಗೆ ತಿಳಿಸಿದ್ದರಿಂದ ನಾನು ಮತ್ತು ನನ್ನ ತಮ್ಮ ಅನೀಲ ಇಬ್ಬರೂ ನಂದಿಕೂರದಿಂದ ಸುಂದರ ನಗರಕ್ಕೆ ಬಂದಿರುತ್ತೆವೆ. ಮನೆಯಲ್ಲು ನನ್ನ ಚಿಕ್ಕಪ್ಪ ಮಾತ್ರ ಇದ್ದು, ಅವನ ಮಗ ಭವಾನಿ ಮನೆಯಲ್ಲಿ ಇರಲಿಲ್ಲ. ನನ್ನ ಚಿಕ್ಕಪ್ಪನನ್ನು ನಾನು ಮತ್ತು ನನ್ನ ತಮ್ಮ ಅನಿಲ ಇಬ್ಬರೂ ಕೂಡಿ ಉಪಚಾರಕ್ಕಾಗಿ ಕುಳಗೇರಿ ಕ್ರಾಸ ಮುಖಾಂತರ ಕೆ.ಬಿ.ಎನ್ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಕುಳಗೇರಿ ಕ್ರಾಸ ಹತ್ತಿರ ಸಾಯಂಕಾಲ 6:30 ರಿಂದ 7:00 ಗಂಟೆಯ ಸಮಯಕ್ಕೆ  ಭವಾನಿ ನಿಂತಿದ್ದನು, ಅವನಿಗೆ ನಾವು ತಂದೆಯ ಜೊತೆ ಜಗಳ ಮಾಡುವದು ಸರಿಯಲ್ಲ ಅಂತಾ ಬುದ್ದಿವಾದ ಹೇಳಿತಿದ್ದರಿಂದ, ನೀವು ನಮ್ಮ ಕುಟುಂಬದ ವಿಷಯದಲ್ಲಿ ಏಕೆ ಬರುತ್ತಿರಿ ಬೋಸಡಿ ಮಗನಾ ಅಂತಾ ಅವಾಚ್ಯ ಶಬ್ದಗಳಿಂದ ಬೈದುತನ್ನ ಹತ್ತಿರ ಇದ್ದ ಚಾಕುವನ್ನು ತೆಗೆದುಕೊಂಡು ನನ್ನ ಮೈಮೇಲೆ ಚುಚ್ಚಿ ರಕ್ತಗಾಯ ಪಡಿಸಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 81/2012 ಕಲಂ: 307504 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ಅಕ್ಕಮಹಾದೇವಿ ಗಂಡ ವಿಶ್ವನಾಥ ಸ್ವಾಮಿ ವಿಶಾಲ ವಿಶ್ವ ಕನ್ನಡ ದಿನಪತ್ರಿಕೆಯ ಉಪ-ಸಂಪಾದಕಿ ಶ್ರದ್ಧಾ ರೆಸಿಡೇನ್ಸಿ ವಿಶ್ವಸೇವಾ ಮಿಶನ್ ಕೊರ್ಟ ರೋಡ ಗುಲಬರ್ಗಾ ಇವರು  ನಾನು ಮತ್ತು ನನ್ನತಮ್ಮ ಕೊಟ್ರೇಶ್  ಇಬ್ಬರೂ ಕೂಡಿಕೊಂಡು ದಾವಣಗೇರಿ ಬಸ್ಸ ನಿಲ್ದಾಣದಿಂದ ಗುಲಬರ್ಗಾಕ್ಕೆ ಬರುವ ಕುರಿತು ದಿನಾಂಕ:13/06/2012 ರಂದು ಬಸ್ಸಿನಲ್ಲಿ ಬರುತ್ತಿರುವಾಗ ನಮ್ಮ ಲಗೇಜ ಇರುವ ಪೊಲೊ ಪ್ಯಾಶನ್ ವ್ಹಿಲ್ ಬ್ಯಾಗನಲ್ಲಿ ನನ್ನ ಬಂಗಾರದ ಆಭರಣಗಳು ಬ್ಯಾಗಿನಲ್ಲಿ ಇಟ್ಟು, ಬ್ಯಾಗ್ ಸಿಟಿನ ಮೇಲ್ಬಾಗದಲ್ಲಿಟ್ಟ್ಟು ಪ್ರಯಾಣ ಮಾಡುತ್ತಿದ್ದೆವು, ದಿನಾಂಕ:14/06/2012 ರಂದು ಗುಲಬರ್ಗಾದ ಬಸ್ ನಿಲ್ದಾಣಕ್ಕೆ ಬಂದು ಇಳಿದು ಬ್ಯಾಗ ನೋಡಿದಾಗ ಒಳಗಡೆಯ ಬಟ್ಟೆ ಕವರ ಹರಿದಿದ್ದು ಯಾರೋ ಕಳ್ಳರು ಪ್ರಯಾಣ ಮಾಡುತ್ತಿರುವಾಗ ಬ್ಯಾಗಿನ ಕವರ ಹರಿದು ಒಳಗಡೆ ಇಟ್ಟಿದ್ದ ಒಂದು ಬಂಗಾರದ ಉದ್ದ ಚೈನು 35 ಗ್ರಾಂ.ಎರಡು ಬಂಗಾರದ ಹವಳವುಳ್ಳ ಬಳೆಗಳು 28 ಗ್ರಾಂ.ಮೂರು ಜೊತೆ ಬಂಗಾರದ ಕಿವಿಯ ಹುವುಗಳು 10 ಗ್ರಾಂ.ಒಂದು ಹವಳದ ಆರ್ಟಿಫೀಶಿಯಲ್ ಸರ,ಒಂದು ನೊಕಿಯಾ 5233 ಮೊಬೈಲ ಐ.ಎಂ.ಇ.ಐ ನಂ. 3562644047440369 ಅದರಲ್ಲಿ ಏರಟೇಲ ಸಿಮ್  ಹೀಗೆ ಒಟ್ಟು 2,15,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು ಮೊಬೈಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

No comments: