Police Bhavan Kalaburagi

Police Bhavan Kalaburagi

Monday, June 25, 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಮುಧೋಳ  ಪೊಲೀಸ್ ಠಾಣೆ: ಶ್ರೀ ವೆಂಕಟೇಶ ತಂದೆ ಮಲ್ಲಪ್ಪಾ ಧನಗಾರ ಸಾ|| ಮುಧೋಳ ಗ್ರಾಮ ರವರು ನಾನು ಮತ್ತು ನನ್ನ ಪರಿಚಯದವರು ದಿನಾಂಕ:25-06-2012 ರಂದು ಕೋಲಕುಂದಾ ಗ್ರಾಮದಿಂದ ಮುಧೋಳ ಗ್ರಾಮಕ್ಕೆ ಜೀಪ ನಂ. ಕೆಎ-32, ಎಮ್-1674 ನೇದ್ದರಲ್ಲಿ ಕುಳಿತು ಬರುತ್ತಿದ್ದಾಗ,ಜೀಪ ಚಾಲಕ ಸಿದ್ದು @ ಸಿದ್ರಾಮ ಈತನು ತನ್ನ ಜೀಪನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಸುತ್ತಾ ಮದನಾ ಗ್ರಾಮ ದಾಟಿದ ನಂತರ ಬಸಣ್ಣಾ ಕುಂಬಾರ ಇವರ ಹೊಲದ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹೊಲದಲ್ಲಿ ಜೀಪ ಪಲ್ಟಿ ಮಾಡಿರುತ್ತಾನೆ.  ವಾಹನದಲ್ಲಿ ಕುಳಿತಿದ್ದ ಗಣೇಶ ತಂದೆ ಶಿವರಾಮ ಮದಿರೆ ಸಾ||ಕೋಲಕುಂದಾ,ಉಶಾಬಾಯಿ ಗಂಡ ಶ್ರೀನಿವಾಸ ಧರ್ಮ ಕಾಂಬಳೆ ಸಾ|| ಕೋಲಕುಂದಾ,  ಇವರಿಬ್ಬರು ಭಾರಿ ಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಕಾಶಿಬಾಯಿ ಗಂಡ ಬಾಲ್ಯಾನಾಯಕ ಜಾಧವ ಸಾ|| ಜಾಕನಪಲ್ಲಿ ತಾಂಡಾ,ಯಲ್ಲಮ್ಮಾ ಗಂಡ ಭೀಮಪ್ಪಾ ಬೋಯಿ ಸಾ|| ಕೋನಾಪೂರ ಗ್ರಾಮ,ಪಾಪಯ್ಯಾ ತಂದೆ ಸಿದ್ದಪ್ಪಾ ಬುರುಕಲ ಸಾ|| ಆಡಿಕಿ ಗ್ರಾಮ,ಚಂದ್ರಪ್ಪಾ ತಂದೆ ನರಸಪ್ಪಾ ಹರಿಜನ ಸಾ|| ಮಲ್ಲಾಬಾದ,ಬಾಲಮ್ಮಾ ಗಂಡ ಬಾಲಪ್ಪಾ ಹರಿಜನ ಸಾ|| ಮುಧೋಳ ರವರಿಗೆ ರಕ್ತಗಾಯಗಳಾಗಿರುತ್ತವೆ.  ಜೀಪ ಚಾಲಕನು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 70/2012 ಕಲಂ, 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ. ಆಕ್ಟ.  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ,ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ರಾಧಾಬಾಯಿ ಪ್ರಭಾರ ಅಧೀಕ್ಷಕರು ಸಾ|| ರಾಜ್ಯ ಮಹಿಳಾ ನಿಲಯ ಆಳಂದ ರೋಡ ಗುಲಬರ್ಗಾರವರು ನಮ್ಮ ರಾಜ್ಯ ಮಹಿಳಾ ನಿಲಯದ ಅನಾಥ ಹೆಣ್ಣು ಮಗಳಾದ ಲಕ್ಷ್ಮಮ್ಮ ಗಂಡ ಶಂಭುಲಿಂಗಪ್ಪಾ ವ || 35 ವರ್ಷ ಇವರು ಕಳೆದ 2-3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಬಹಳಷ್ಟು ಸಲ ಉಪಚಾರ ಕುರಿತು ಕರೆದುಕೊಂಡು ಹೋಗಿ ಉಪಚಾರ ಕೊಡಿಸಿದ್ದು, ಇವರು ಗುಣಮುಖವಾಗದೇ ಇರುವದೆ ಇರುವದರಿಂದ ದಿನಾಂಕ 24-06-2012 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಯು.ಡಿ.ಆರ್ ನಂ 6/12 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

No comments: