ಗುಲಬರ್ಗಾ ನಗರದಲ್ಲಿ ಕಳ್ಳತನ ವಾಗಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಜಪ್ತಿ ಮಾಡಿದ ಬಗ್ಗೆ:
ಮಾನ್ಯ ಪವಾರ ಪ್ರವೀಣ ಮಧುಕರ ಐ.ಪಿ.ಎಸ್ ಎಸ್.ಪಿ ಸಾಹೇಬ ಗುಲಬರ್ಗಾರವರು, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಸಾಹೇಬ ಗುಲಬರ್ಗಾರವರು, ಮಾನ್ಯ ಭೂಷಣ ಜಿ ಬೋರಸೆ ಐ.ಪಿ.ಎಸ್ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ ಠಾಣೆಯ ಶರಣಬಸವೇಶ್ವರ ಭಜಂತ್ರಿ ಪಿ.ಐ, ಡಿ.ಸಂತೋಷಕುಮಾರ ಪಿ.ಎಸ್.ಐ (ಅ.ವಿ), ಮಾರುತಿ ಎ.ಎಸ್.ಐ, ಹಾಗೂ (ಎ) ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ರಫೀಕ, ಶಿವಪ್ರಕಾಶ, ದೇವಿಂದ್ರ, ರಾಮು ಪವಾರ ರವರು ಒಂದು ತಂಡ ರಚಿಸಿ, ಗುಲಬರ್ಗಾ ನಗರದ ವೆಂಕಟೇಶ ನಿವಾಸ ಸುಂದರ ನಗರದಲ್ಲಿ ಶ್ರೀ.ವಿಜಯಕುಮಾರ ತಂದೆ ರುಕ್ಮಣ್ಣಾ ಗಾಜರೆ ಸಾ|| ಸುಂದರ ನಗರ ಗುಲಬರ್ಗಾ ಇವರ ಮನೆಯಲ್ಲಿ ದಿನಾಂಕ:27/05/2012 ರಂದು ಒಂದು ಸ್ಯಾಮಸಂಗ ಗುರು ಮೊಬೈಲ್, 5 ಗ್ರಾಂ ಬಂಗಾರದ, ಬೆಳ್ಳಿಯ ಉಂಗುರ ಹೀಗೆ ಒಟ್ಟು 15,500/- ರೂಪಾಯಿ ಬೆಲೆಬಾಳುವ ಮಾಲು ಕಳ್ಳತನವಾಗಿದ್ದ ಮಾಲು ಮತ್ತು ಆರೋಪಿ ಪತ್ತೆ ಮಾಡುವ ಕುರಿತು ತಂಡ ರಚಿಸಿದ್ದರು. ಕಳುವು ಮಾಡಿದ ಆರೋಪಿತಳ ಹೆಸರು ರಾಣಿ ತಂದೆ ದೇವದಾಸ ಉಪಾದ್ಯ, ವಯ|| 13 ವರ್ಷ, ಸಾ|| ಸುಂದರ ನಗರ ಗುಲಬರ್ಗಾ ಅಂತಾ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಸದರಿಯವಳು ಕಳವು ಮಾಡಿದ ಬಂಗಾರದ ಮತ್ತು ಬೆಳ್ಳಿಯ ಉಂಗುರಗಳು ಅಬ್ದುಲ ರೌಫ ತಂದೆ ಅಬ್ದುಲ ಹಮೀದ ಪಠಾಣ ವಯ|| 45, ಉ|| ಅಕ್ಕಸಾಲಿಗ, ಸಾ|| ಹಳ್ಳೀಖೇಡ ತಾ|| ಹುಮನಾಬಾದ ಜಿ|| ಬೀದರ ಇತನಿಗೆ ಮಾರಿರುತ್ತಾರೆ. ಈ ಪ್ರಕರಣ ಅಲ್ಲದೆ ಇನ್ನೂ ಹಲವಾರು ಪ್ರಕರಣಗಳಲ್ಲಿ ಕಳ್ಳತನವಾದ ಮಾಲು ತೆಗೆದುಕೊಂಡಿದ್ದು ತನಿಖೆಯಲ್ಲಿ ಒಪ್ಪಿಕೊಂಡಿರುತ್ತಾನೆ. ಸದರಿಯವನಿಂದ ಸುಮಾರು 2,00,000/- ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಜಪ್ತ ಮಾಡಿಕೊಂಡಿರುತ್ತಾರೆ.
No comments:
Post a Comment