Jai Bhavani Internet Café ರವರು On-Line ಮುಖಾಂತರ ನಾಗರೀಕರ ಪಡಿತರ ಚೀಟಿಯಲ್ಲಿ ವಂಚನೆ ಮಾಡಿದ ಬಗ್ಗೆ:
ರೋಜಾ ಪೊಲೀಸ್ ಠಾಣೆ: ಗುಲಬರ್ಗಾ ನಗರದಲ್ಲಿ ಆನಲೈನ್ ಮುಖಾಂತರ ಪಡಿತರ ಚೀಟಿ ವಿತರಣೆ
ನೀಡುವದಕ್ಕೆ ಪಡಿತರ ಚೀಟಿಗೆ ಅವಶ್ಯಕತೆ ಇರುವ ಭಾವಚಿತ್ರ ಮತ್ತು ಜೀವ ಮಾಪಕ ಸೆರೆ ಹಿಡಿಯುವದಕ್ಕಾಗಿ
ಗುಲಬರ್ಗಾ ನಗರದ ವಾರ್ಡ ನಂ.5 ರಿಂದ ವಾರ್ಡ
ನಂ 8 ರಲ್ಲಿ ವಾಸವಾಗಿರುವ ನಾಗರೀಕರ ಪಡಿತರ ಚೀಟಿ ಭಾವಚಿತ್ರ ಹಾಗೂ ಜೀವ
ಮಾಪಕ ಸೆರೆ ಹಿಡಿಯುವುದಕ್ಕಾಗಿ ಶ್ರೀ ಆನಂದ ಪೂಜಾರಿ ಜೈಭವಾನಿ ಇಂಟರನೆಟ್ ಕೆಫೆ ಗುಲಬರ್ಗಾ ರವರಿಗೆ
ಹಕ್ಕನ್ನು [ಪ್ರಾಂಚೈಸಿ] ಕೊಡಲಾಗಿತ್ತು.
ಶ್ರೀ ಸೈಯ್ಯದ ಮುಸ್ತಖ ಪಾರೂಕ ಸಾ:ಮಹಡಿ ಮೊಹಲ್ಲಾ ಮೋಮಿನಪೂರ
ಗುಲಬರ್ಗಾ ಇತನು ಆನ್ ಲೈನ್ ಮುಖಾಂತರ ಪಡಿತರ ಚೀಟಿಗಾಗಿ ಅರ್ಜಿ ಸಂ.164008 ದಿನಾಂಕ:22/11/2011 ರ ಪ್ರಕಾರ ಸಲ್ಲಿಸಿದ ಆನ ಲೈನ್ ಅರ್ಜಿಯ
ಮೇಲೆ ತಿದ್ದುಪಡಿ ಮಾಡಿ ಡಾ:ಅಜೀತಸಿಂಗ ಠಾಕೂರ ಸಾ:ಮಕ್ತಾಂಪೂರ ಗುಲಬರ್ಗಾ ರವರಿಂದ ಹೆಚ್ಚಿನ ಹಣ ಪಡೆದು, ಅವರ ಕುಟುಂಬದವರ ವಿವರಗಳನ್ನು ನಮೂದಿಸಿ
ಅವರುಗಳ ಭಾವ ಚಿತ್ರ ತೆಗೆದಿರುತ್ತಾರೆ. ಶ್ರೀ ಆನಂದ ಪೂಜಾರಿ ಮಾಲೀಕರು ಶ್ರೀ
ಜೈ ಭವಾನಿ ಇಂಟರನೆಟ್ ಕೆಫೆ ನೇಹರು ಗಂಜ ಗುಲಬರ್ಗಾ ರವರು ಸರಕಾರಕ್ಕೂ ಮತ್ತು ಸೈಯ್ಯದ ಮುಸ್ತಫಾ ಫಾರೂಕ
ಇವರಿಗೆ ವಂಚನೆ ಮಾಡಿ ಸೈಬರ ಅಪರಾಧ ಮಾಡಿರುತ್ತಾರೆ.
ಸದರಿಯವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು
ಅರ್ಜಿ ಸಂ.164008 ಸೈಯ್ಯದ
ಮುಸ್ತಖ ಫಾರೂಕ ಸಾ:ಮಹಡಿ ಮೊಹಲ್ಲಾ ಗುಲಬರ್ಗಾ ರವರು ಸದರಿ ಅರ್ಜಿ ಸಂಖ್ಯೆ
ಮೇಲೆ ಡಾ:ಅಜೀತಸಿಂಗ ಠಾಕೂರ ಇವರ ಹೆಸರು ಸೇರಿಸಿದ ದಾಖಲೆಯ ಪ್ರತಿಗಳು ಹಾಗೂ
ಶ್ರೀ ಆನಂದ ಪೂಜಾರಿಯವರಿಗೆ ಆನಲೈನ್ ಮುಖಾಂತರ ಪಡಿತರ ಚೀಟಿ ಭಾವಚಿತ್ರ ಸೆರೆ ಹಿಡಿಯಲು ನೀಡಲಾದ ಹಕ್ಕಿನ
ಆದೇಶದ ಪ್ರತಿ ಇದರೊಂದಿಗೆ ಲಗತ್ತಿಟ್ಟು ಶ್ರೀಮತಿ ಪ್ರೇಮಿಲಾಬಾಯಿ ಗಂಡ ದಿ:ಲಕ್ಷ್ಮಣ ಗುಜ್ಜಾರಿ ಆಹಾರ ನೀರಿಕ್ಷಕರು
ವಾರ್ಡ ನಂ.5 ರಿಂದ 8 ಗುಲಬರ್ಗಾ ರವರು ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:50/2012
ಕಲಂ.420,468,ಐಪಿಸಿ ಮತ್ತು ಕಲಂ.66, 66[ಡಿ] IT Act 2000 ನೇದ್ದರ ಪ್ರಕಾರ
ಪ್ರಕರಣ ದಾಖಲ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ
ಪ್ರಕರಣ:
ರಾಘವೇಂದ್ರ ನಗರ
ಪೊಲೀಸ್ ಠಾಣೆ : ಶ್ರೀ ಸೂರ್ಯಕಾಂತ ತಂದೆ ಲಕ್ಷ್ಮಣ ಕಟಬಾ ಉ|| ಸರ್ಕಾರಿ ನೌಕರ, ಸಾ||
ದೇವಿ ನಗರ ಅಳಂದ ರೋಡ ಗುಲಬರ್ಗಾ ರವರು ನನ್ನ ಹೀರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬರ ಕೆಎ-32/ವಾಯ್-3880
ನೇದ್ದನ್ನು ಖರೀದಿಸಿದ್ದು, ದಿನಾಂಕ 31-05-2012 ರಂದು ನನ್ನ ಕರ್ತವ್ಯ ಮುಗಿಸಿಕೊಂಡು ರಾತ್ರಿ 9-00
ಗಂಟೆಗೆ ಮನೆಗೆ ಬಂದು ಮೊಟಾರ್ ಸೈಕಲ್ ಮನೆಯ
ಮುಂದೆ ನಿಲ್ಲಿಸಿದ್ದು, ದಿನಾಂಕ 01-06-2012 ರಂದು ಬೆಳಿಗ್ಗೆ ಎದ್ದು ನೋಡಲು ಮನೆಯ ಮುಂದೆ ನಿಲ್ಲಿಸಿದ
ಮೊಟಾರ್ ಸೈಕಲ್ ಇರಲಿಲ್ಲಾ, ಯಾರೋ ಕಳ್ಳರು ನನ್ನ ಮೋಟಾರ
ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ 38/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment