ಮೊಬಾಯಿಲ್ ಟವರ ಕೇಬಲ್ ವೈಯರ ಕಳ್ಳರ ಬಂಧನ, ಸುಮಾರು 4 ಲಕ್ಷ ರೂ ಮೌಲ್ಯದ ವಸ್ತುಗಳ ವಶ
ಗುಲಬರ್ಗಾ ನಗರದಲ್ಲಿ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗ ಸುಮಾರು ಒಂದು ವರ್ಷದಿಂದ ಘಟಿಸಿದ ಮೊಬಾಯಿಲ್ ಟವರಗಳ ಬ್ಯಾಟರಿ ಮತ್ತು ಕೇಬಲ್ ವಾಯರ ಕಳವು ಪ್ರಕರಣಗಳ ಆರೊಪಿತರ ಪತ್ತೆ ಕುರಿತು ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ
ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ
ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ
ಗುಲಬರ್ಗಾ ರವರ ನೇತೃತ್ವದಲ್ಲಿ 1) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 2)
ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 3) ಶ್ರೀ ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ 4) ಶ್ರೀ ಪ್ರದೀಪ ಕೊಳ್ಳಾ ಪಿ.ಎಸ್.ಐ (ಅವಿ)
ವಿವಿ ಠಾಣೆ, ಪ್ರಬೇಶನರ ಪಿ.ಎಸ್.ಐ
ರವರುಗಳಾದ ಬಾಳಪ್ಪ ಎಸ್ ತಳವಾರ ಮತ್ತು ಹಸೇನ ಭಾಷಾ ಮತ್ತು ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ ಹೆಚ್.ಸಿ, ದೇವಿಂದ್ರ ಪಿಸಿ,. ನಿಜಲಿಂಗಪ್ಪ ಪಿಸಿ, ಸುಬ್ಬುನಾಯಕ ಪಿಸಿ, ಅಶೋಕ ಪಿಸಿ, ಯಲ್ಲಪ್ಪ ಪಿಸಿ, ಪ್ರಭಾಕರ ಪಿಸಿ, ಅರ್ಜುನ ಪಿಸಿ, ಅಣ್ಣಪ್ಪ ಪಿಸಿ, ಶಂಕರ ಹೆಚ್.ಸಿ ರವರು ಖಚಿತ ಭಾತ್ಮಿ ಮೇರೆಗೆ ನಿನ್ನೆ ದಿನಾಂಕ6/7/2012 ರಂದು ರಾತ್ರಿ 9-00 ಗಂಟೆಗೆ ನದಿಸಿನ್ನೂರ
ಕ್ರಾಸ ಹತ್ತಿರ ಮಿಂಚಿನ ದಾಳಿ ಮಾಡಿ ಮೊಬಾಯಿಲ್ ಟಾವರನ ಬ್ಯಾಟರಿ ಮತ್ತು ಕೇಬಲ್ ವೈಯರದ ತಾಮ್ರದ ತಂತಿ ಕಳ್ಳತನ ಮಾಡುವ 1) ಮಹೇಶ ತಂದೆ ಸಂಗು ಪಾರದಿ ಸಾ// ಆಶ್ರಯ ಕಾಲೋನಿ
ಗುಲಬರ್ಗಾ 2) ವಿಜಯಸಿಂಗ ತಂದೆ
ಅಮರಸಿಂಗ ಸಿಕಲಗಾರ ಸಾ// ಆಶ್ರಯ ಕಾಲೋನಿ
ಗುಲಬರ್ಗಾ 3) ಜೀತಸಿಂಗ ತಂದೆ
ಚಂದುಸಿಂಗ ಸಿಕಲಗಾರ ಸಾ// ಆಶ್ರಯ ಕಾಲೋನಿ
ಗುಲಬರ್ಗಾ 4) ಕಿಶನ ತಂದೆ ಲಕ್ಷ್ಮಣ ರಾಠೋಡ ಸಾ// ಆಶ್ರಯ ಕಾಲೋನಿ ಗುಲಬರ್ಗಾ ಈ 4 ಜನರನ್ನು ಬಂಧಿಸಿರುತ್ತಾರೆ.
ಸದರಿ ಆರೊಪಿತರು ಇತ್ತಿಚಿಗೆ ಗುಲಬರ್ಗಾ
ನಗರದಲ್ಲಿ ಹಾಗು ಗುಲಬರ್ಗಾ ನಗರದ ಸುಮುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ ಮೊಬಾಯಿಲ ಟಾವರನ
ಬ್ಯಾಟರಿ ಹಾಗೂ ಕೇಬಲ್ ವಾಯರ ( ತಾಮ್ರದ ತಂತಿ ) ಕಳ್ಳತನ ಮಾಡಿ ಅವುಗಳನ್ನು ಸುಟ್ಟು ಅದರಲ್ಲಿನ
ತಾಮ್ರದ ತಂತಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ತಿಳಿದುಬಂದಿದ್ದು ಆರೊಪಿತರಿಂದ ಕಳವು ಮಾಡಲಾದ ಸುಮಾರು 13
ಪ್ರಕರಣಗಳಲ್ಲಿ ಸುಮಾರು 4 ಲಕ್ಷ ರೂಪಾಯಿ ಬೆಲೆ ಬಾಳುವ 6 ಕ್ವಿಂಟಲ್ ತಾಮ್ರದ ತಂತಿ, ಮೊಬಾಯಿಲ್ ಟವರನ ಬ್ಯಾಟರಿಗಳು, ಮೊಬಾಯಿಲ ಪೊನಗಳು, ಕಳವು ಮಾಡಲು ಬಳಸುತ್ತಿದ್ದ ಒಂದು ಅಟೋ ರೀಕ್ಷಾ
ನಂ ಕೆ.ಎ 32 3998, ತಾಮ್ರದ ಕೇಬಲ್ ಕಟ್ ಮಾಡಲು ಬಳಸುತ್ತಿದ್ದ
ಸಾಮಾನುಗಳು ಮತ್ತು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. ಈ ಪ್ರಕರಣದಲ್ಲಿ ಇನ್ನೂ 4
ಜನ ಆರೊಪಿತರು ಫರಾರಿ ಇದ್ದು ಫರಾರಿ ಇರುವ ಆರೊಪಿತರಾದ 1) ಗಣೇಶ ತಂದೆ ಧನು ಪಾರದಿ, 2) ರಘು ತಂದೆ ಅರ್ಜುನ ಪಾರದಿ 3) ಪದ್ಮು ತಂದೆ ಅರ್ಜುನ ಪಾರದಿ ಎಲ್ಲರೂ ಸಾ//
ದರ್ಗಾಶಿರೂರ 4) ಲಗಮು ತಂದೆ ಚಂದು ಪಾರದಿ ಸಾ// ಝಳಕಿ ಇವರ ದಸ್ತಗಿರಿಗಾಗಿ ಜಾಲ ಬಿಸಲಾಗಿದೆ. ಮತ್ತು ಮೊಬಾಯಿಲ್ ಟವರಗಳ ಬ್ಯಾಟರಿ ಹಾಗೂ
ಕಾಪರ ವೈಯರ ಕಳ್ಳತನ ಪ್ರಕರಣಗಳನ್ನು ಭೇಧಿಸಿದ
ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ
ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಮಾನ್ಯ ಎಸ್.ಪಿ ಸಾಹೇಬರು ಸೂಕ್ತ ಬಹುಮಾನವನ್ನು
ಘೋಷಿಸಿರುತ್ತಾರೆ.
No comments:
Post a Comment