ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 54/12 ಕಲಂ 457,380,427 ಐಪಿಸಿ :-
ದಿನಾಂಕ 29-07-2012 ರಂದು 1700 ಗಂಟೆಗೆ ಫಿರ್ಯಾದಿ ಶ್ರೀ. ನಾಗೇಶ ತಂದೆ ಮಲ್ಲಪ್ಪಾ ಧನಗರ ಸಾ, ಚಟ್ನಳ್ಳಿ ಸದ್ಯ ಸಂತಪೂರ ರವರು ಠಾಣೆಗೆ ಹಾಜರಾಗಿ ತನ್ನ ಒಂದು ತನ್ನ ಮೌಖಿಕ ಹೇಳಿಕೆ ಫಿಯರ್ಾದು ಕೊಟ್ಟಿದು ಸಾರಾಂಶವೆನೆಂದರೆ ದಿನಾಂಕ 27, 28/07/2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಬೋರ್ಗಾ ಗ್ರಾಮದ ಮೋನಪ್ಪಾ ಪಾಂಚಾಳ ರವರ ಹೋಲದಲ್ಲಿದ್ದ ಟಾಟಾ ಟಾವರ ಕೋಣೆಯ ಬೀಗ ಮುರಿದು ಅದರಲ್ಲಿದ್ದ ಸಾಮಗ್ರಿಗಳಾದ ಆಪರೆಟರ್ ಮಷೀನ್ ಅಂ.ಕಿ 12,000/-, ಬ್ಯಾಟರಿ ಅಂ.ಕಿ 2,500/- ಹೀಗೆ ಒಟ್ಟು 14,500/- ಕಿಮ್ಮತ್ತಿನ ಸಾಮಾನುಗಳು ಯಾರೋ ಅಪರಿಚಿತ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಹಾಗು ಇನ್ಸುಲೇಷನ್ ಟ್ರಾನ್ಸಫಾರಂ ನಲ್ಲಿರುವ ತಾಮ್ರದ ವೈರ ತೆಗೆದು ಬೀಸಾಡಿ ಅಂ.ಕಿ 20,000/- ನುಕ್ಸಾನ್ ಮಾಡಿರುತ್ತಾರೆ ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿಯ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 106/12 ಕಲಂ 87 ಕೆಪಿ ಕಾಯ್ದೆ :-
ದಿನಾಂಕ-29/07/2012 ರಂದು ಮಧ್ಯಾಹ್ನ ಗಂಟೆಗೆ ನಿಂಬುರ ಸಿವಾರದಲ್ಲಿರುವ ಬಿರಲಿಂಗೆಶ್ವರ ಮಂದಿರದ ಮುಂದೆ ಕಟ್ಟೆ ಮೇಲೆ ಸಾರ್ವಜನಿ ಸ್ಥಳದಲ್ಲಿ ಅಂದರ ಭಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ಅವರ ಮೇಲೆ ದಾಳಿ ಮಾಡಿ ಆರೋಪಿತರಾದ ಪರಮೇಶ್ವರ ತಂದೆ ಮಡಿವಾಳಪ್ಪಾ ನಾಗೂರೆ ವಯ-40 ವರ್ಷ ಮತ್ತು 5 ಜನರು ಎಲ್ಲರು ಸಾ-ನಿಂಬುರ ಗ್ರಾಮ ಇವರಲ್ಲಿ ಇಬ್ಬರನ್ನು ದಸ್ತಗಿರಿ ಮಾಡಿದ್ದು 4 ಜನರು ಓಡಿ ಹೋಗಿರುತ್ತಾರೆ ಆರೋಪಿತರ ವಶದಿಂದ ನಗದು ಹಣ 3260/- ರೂ 52 ಇಸ್ಪಿಟ್ ಎಲೆಗಳು 1 ಕಾರ್ಬನ್ ಮೂಬೈಲ್ 2 ದ್ವಿಚಕ್ರ ವಾಹನಗಳು ಎಲ್ಲಾ ಒಟ್ಟು ಅ ಕಿ-25760/- ರೂ ಬೆಲೆ ಬಾಳುವ ಮುದ್ದೆ ಮಾಲು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.
ಖಟಕ ಚಿಂಚೋಳಿ ಪೊಲೀಸ ಠಾಣೆ ಗುನ್ನೆ ನಂ. 61/2012 ಕಲಂ-279, 338 ಐಪಿ.ಸಿ :-
ದಿನಾಂಕ-29/7/12 ರಂದು 1700 ಗಂಟೆಯ ಸುಮಾರಿಗೆ ಫಿರ್ಯಾದಿ ವೈಜಿನಾಥ ತಂದೆ ಮಲ್ಲಿಕಾರ್ಜುನ ಡೊಂಗರೆಗೆ ಸಾ-ಡಾವರಗಾಂವ ಮತ್ತು ಆತನ ಜೋತೆ ಅಶೋಕ ಡೊಂಗರಗೆ ಮತ್ತು ಬಸವರಾಜ ಡೊಂಗರಗೆ ಎಲ್ಲರು ಕೂಡಿಕೊಂಡು ಡಾವರಗಾಂವ-ಮಾಸಿಮಾಡ ರೋಡಿನಿಂದ ಹೊಲಕ್ಕೆ ಹೋಗುತ್ತಿರುವಾಗ ಡಾವರಗಾಂವ ಗ್ರಾಮದಲ್ಲಿ ಹನುಮಾನ ವಾಡಿಯ ಹತ್ತಿರ ಆರೋಪಿತನಾದ ಅಲ್ಲಾವೋದ್ದಿನ ತಂದೆ ಭಾಷಾಸಾಬ ಮುಲ್ಲಾವಾಲೆ ಸಾ-ಡಾವರಗಾಂವ ಇತನು ತನ್ನ ಮೊಟಾರ ಸೈಕಲ ನಂ-ಕೆಎ-39/ಜ-6519 ನೇದನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಗೆ ರಕ್ತಗಾಯ ಮತ್ತು ಗುಪ್ತಗಾಯ ಹಾಗೂ ಬಾಯಿಗೆ ಹತ್ತಿ 3 ಹಲ್ಲುಗಳು ಬಿದ್ದು ಭಾರಿ ರಕ್ತಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿಯರ್ಾದಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ದಿನಾಂಕ: 29-07-2012 ರಂದು 2110 ಗಂಟೆಗೆ ಔರಾದ ಪಟ್ಟಣದ ಎಪಿಎಎಮ್ಸಿ ಮಾರ್ಕೇಟನಲ್ಲಿ ಆರೋಪಿತರಾದ ಶಿವಾನಂದ ತಂದೆ ಮಾದಪ್ಪಾ ಸಾ: ತೆಗಂಪೂರ ಹಾಗೂ ಇನ್ನೂ 3 ಜನರು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಎಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವರಲ್ಲಿ ಇಬ್ಬರನ್ನು ದಸ್ತಗಿರಿ ಮಾಡಿ ಅವರಿಂದ ನಗದು ಹಣ ರೂ. 3050/- ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಾಗಿದೆ.
No comments:
Post a Comment