ಜೂಜಾಟ ಪ್ರಕರಣ:
ಗುಲಬರ್ಗಾ
ಗ್ರಾಮೀಣ ಠಾಣೆ : ದಿನಾಂಕ 29-07-12 ರಂದು ಸಾಯಂಕಾಲ
5-15 ಗಂಟೆ ಸುಮಾರಿಗೆ ರಾಜು ತಂದೆ ಬಸವರಾಜ ಎಕಶೇಟ್ಟಿ, ಸಂತೋಷ ಕುಮಾರ ತಂದೆ
ವಿಜಯಕಜುಮಾರ ಪರೀಟ್, ವೀರೇಶ ತಂದೆ ಗುಂಡಪ್ಪಾ ಮಾಶೇಟ್ಟಿ, ಗಿರೀಶ ತಂದೆ ದತ್ತಾತ್ರಯ ನಂದಲೇ,
ಬಸವರಾಜ ತಂದೆ ಮಾಣಿಕರಾವ, ಮತ್ತು ಅಬ್ದುಲ ರಜಾಕ ತಂದೆ ಗೋರಬೈ ಸಾ|| ಎಲ್ಲರೂ ಗುಲಬರ್ಗಾ ರವರು ಡಬರಾಬಾದ ಈದ್ಗಾ ಹತ್ತಿರುವ
ಒಂದು ಬೇವಿನ ಗಿಡದ ಕೆಳಗಡೆ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿರುವಾಗ ಮಾನ್ಯ ಡಿ.ಎಸ್.ಪಿ. ಗ್ರಾಮಾಂತರ್ರ
ರವರ ಮಾರ್ಗದರ್ಶನ ಮೇರೆಗೆ ಮತ್ತು ಸಿಪಿಐ
ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ
ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ, ಇಸ್ಪೇಟ ಎಲೆಗಳು ಜಪ್ತ
ಮಾಡಿಕೊಂಡಿದ್ದರಿಂದ ಸರಕಾರಿ ತರ್ಪೆಯಾಗಿ ಶ್ರೀ ಆನಂದರಾವ ಎಸ್.ಎನ್. ಪಿಎಸ್ಐ ಗ್ರಾಮೀಣ ಪೊಲೀಸ ಠಾಣೆರವರು ಠಾಣೆ ಗುನ್ನೆ ನಂ: 247/2012 ಕಲಂ 87 ಕೆ.ಪಿ ಆಕ್ಟ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚರಂಡಿಯಲ್ಲಿ
ಬಿದ್ದು ಒಂದು ಮಗು ಸಾವು:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ದತ್ತಪ್ಪಾ ಅಪಗೊಂಡಿ ಹಟಗಾರ್ ಸಾ|| ಮರಗಮ್ಮನ ಗುಡಿಯ
ಹತ್ತಿರ ಇಂದಿರಾನಗರ ಗುಲಬರ್ಗಾರವರು ನನಗೆ ನನಗೆ ಎರಡು ಜನ ಮಕ್ಕಳಿದ್ದು ಪೂಜಾ 5 ವರ್ಷ
ಎರಡನೆಯವನು ಅಭೀಷೆಕ 3 ವರ್ಷ 6 ತಿಂಗಳು ದಿನಾಂಕ.29-07-2012 ರಂದು ಬೆಳಿಗ್ಗೆ 10.00 ಗಂಟೆಗೆ
ದಿನ ನಿತ್ಯದಂತೆ ನಾನು ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 1.30 ಗಂಟೆಗೆ ನನ್ನ ತಾಯಿ
ಬಂಗಾರೆಮ್ಮ ಇವಳು ನನಗೆ ಪೋನ್ ಮಾಡಿ ನನಗೆ ತಿಳಿಸಿದ್ದೆನಂದರೆ, ನಿನ್ನ ಮಗ ಅಭೀಷೆಕ ಈತನು ನಮ್ಮ
ಮನೆಯ ಮುಂದಿರುವ ಚರಂಡಿಯಲ್ಲಿ ಬಿದ್ದಿದ್ದು ಅವನನ್ನು ಮೇಲೆ ಎತ್ತಿದ್ದೆವೆ ಅವನಿಗೆ ಆಸ್ಪತ್ರೆಗೆ ಕರೆದುಕೊಂಡು
ಹೋಗುವದಿದೆ ಬೇಗ
ಬಾ ಅಂತಾ ತಿಳಿಸಿದ್ದರಿಂದ ನಾನು ಬಂದು ನನ್ನ ತಾಯಿಯನ್ನು ವಿಚಾರಿಸಲಾಗಿ ಅಭಿಷೆಕ ಈತನು ಆಟ ಆಡಲು
ಹೋಗಿ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಬಿದ್ದಿದ್ದು ನಾವು ಎಲ್ಲಾ ಕಡೆ ಹುಡುಕಾಡಿದ್ದು
ಎಲ್ಲಿ ಸಿಗದ ಕಾರಣ ವಾಪಸ್ಸು ಮನೆಗೆ ಬರುವಾಗ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಅಭಿಷೆಕ
ಈತನು ಬಿದ್ದಿದ್ದು ನೋಡಿ ನಾನು ಮತ್ತು ನಮ್ಮ ಒಣಿಯವರು ಚರಂಡಿಯಲ್ಲಿ ಬಿದ್ದಿರುವ ಅಭಿಷೆಕನನ್ನು
ಮೇಲೆ ಎತ್ತಿರುತ್ತೇವೆ. ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗೊಣ ಅಂತಾ ತಿಳಿಸಿದ್ದರಿಂದ ಡಾ|| ಸೂರ್ಯಕಾಂತ ಪಾವಲೆ ಮಕ್ಕಳ ತಜ್ಞರು ಇನರ ಆಸ್ಪತ್ರೆಗೆ ತಗೆದುಕೊಂಡು ಹೋಗಿ
ತೊರಿಸಿದ್ದು ಅಲ್ಲಿಯ ವೈದ್ಯರು ನನ್ನ ಮಗನನ್ನು ಪರಿಕ್ಷಿಸಿ ಸದರಿ ಹುಡುಗನು
ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು.
ಕಾರಣ ನಮ್ಮ
ಒಣಿಯ ಮುಂದಿರುವ ಚರಂಡಿಯು ತೆರೆದ ಚರಂಡಿಯಾಗಿದ್ದು ಎರಡು ಮೂರು ತಿಂಗಳ ಹಿಂದೆ ಮಹಾನಗರ
ಪಾಲಿಕೆಯವರು ಚರಂಡಿಯಲ್ಲಿರುವ ಹೂಳ ತೆಗೆಯುವ ಕೆಲಸ ಕೈಗೊಂಡಿದ್ದು, ಸದರಿ ಮಹಾ
ನಗರ ಪಾಲಿಕೆ ಅಧಿಕಾರಿಗಳಿಗೆ ಓಣಿಯ ಪ್ರಮುಖರಾದ ಶಾಂತಪ್ಪ. ಹಡಪದ ಮತ್ತು
ಶಿವಶರಣಪ್ಪ.ಸಜ್ಜನಶೆಟ್ಟಿ ರವರು ಹಲವಾರು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅಲ್ಲಲ್ಲಿ
ಎರಡರಿಂದ ಮೂರು ಅಡಿ ನೀರು ನಿಲ್ಲುತ್ತಿದ್ದು ಅದು ಮಕ್ಕಳ ಪ್ರಾಣಕ್ಕೆ ಅಪಾಯ ಇದೆ ಕೆಲಸ ಸರಿಯಾಗಿ ನಿರ್ವಹಿಸುವಂತೆ
ವಿನಂತಿಸಿಕೊಂಡಿದ್ದರು ಸಹ ಮಹಾನಗರ ಪಾಲಿಕೆಯ
ಅಧಿಕಾರಿಗಳು ಕೆಲಸ ಮಾಡದೇ ನಿರ್ಲಕ್ಷ್ಯತನ ಮತ್ತು ಬೇಜವಬ್ದಾರಿ ತೋರಿಸಿದರಿಂದ ನನ್ನ ಮಗನು
ಚರಂಡಿಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಕಾರಣ ನನ್ನ ಮಗನ ಸಾವಿಗೆ ಕಾರಣರಾದ ಮಹಾನಗರ ಪಾಲಿಕೆಯ ಆಯುಕ್ತರಾದ
1) ಶ್ರೀ.ಸಿ.ನಾಗಯ್ಯ 2) ವಿಜಯಕುಮಾರ್ ಎಕ್ಸೂಕೂಟಿವ ಇಂಜಿನಿಯರ್ 3). ಮಹ್ಮದ್ ಶಮಶೊದ್ದಿನ್ ವಲಯ ನಂಬರ್ 01 ಆಯುಕ್ತರು, 4). ಬಸವರಾಜ.ಪಾಟೀಲ್ ಸೆನೆಟರಿ
ಇನ್ಸಪೆಕ್ಟರ್ ಹಾಗೂ ಗೋಪಾಲ್ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ 149, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment