ಕೊಲೆ ಪ್ರಕರಣ:
ರಟಕಲ ಪೊಲೀಸ ಠಾಣೆ:ಶ್ರೀ ರುದ್ರಪ್ಪಾ ತಂದೆ ಗುಂಡಪ್ಪಾ ಸೀಗಿ ಸಾ|| ರಟಕಲ್ ರವರು ನನ್ನ ಮಗನಾದ ತಿಪ್ಪಣ್ಣಾ @
ರಾಜಶೇಖರ ಇತನು ದಿನಾಂಕ:04-07-2012 ರಂದು ಮನೆಯಿಂದ ಹೋದವನು ಮರಳಿ ಮನೆ ಬಂದ್ದಿದಿಲ್ಲ. ಎಲ್ಲಾ
ಕಡೆ ಹುಡಕಾಡಿದರೂ ಪತ್ತೆಯಾಗಿರಲಿಲ್ಲ. ದಿನಾಂಕ: 09-07=2012 ರಂದು ಮುಕರುಂಭಾ ಗ್ರಾಮಕ್ಕೆ
ಹೋಗುವ ದಾರಿಯಲ್ಲಿ ಸುಭಾಶ್ಚಂದ್ರ ತಂದೆ ನಿಂಗನಶೇಟ್ಟಿ ಸೂಗುರ ಇವರ ಹೊಲದ ಬಾವಿಯಲ್ಲಿ ಒಂದು ಬಿಳಿ
ಚೀಲದಲ್ಲಿ ಕಟ್ಟಿ ಹಾಕಿದ ಹೆಣ ತೆಲುತ್ತಿದೆ ಅಂತಾ ವಿಷಯ ತಿಳಿದುಕೊಂಡು ನಾನು ಹೋಗಿ ನೊಡಲು, ನನ್ನ
ಮಗನ ಪ್ಯಾಂಟ ಗುರುತಿಸಿ ನೋಡಲು, ನನ್ನ ಮಗ ತಿಪ್ಪಣ್ಣಾ ಇತನಿಗೆ ಯಾರೋ ದೋತಿಯಿಂದ ಕುತ್ತಿಗಿಗೆ
ಬಿಗಿದು ಕೋಲೆ ಮಾಡಿ ಅದೆ ದೋತಿಯಲ್ಲಿ ಮಡಚಿ ಮುಖ ಗುರುತು ಸಿಗದಂತೆ ಪ್ಲಾಸ್ಟಿಕ ಗೊಬ್ಬರ
ಚೀಲವನ್ನು ಮುಖಕ್ಕೆ ಮುಚ್ಚಿ ಪ್ಲಾಸ್ಟಿಕ ವೈರದಿಂದ ಕಟ್ಟಿ ಅದಕ್ಕೆ ಒಂದು ದಪ್ಪನೆಯ ಕಲ್ಲು ಕಟ್ಟಿ
ಬಾವಿಯೊಳಗೆ ಹಾಕಿದ್ದು ಕಂಡು ಬಂದಿರುತ್ತದೆ. ನನ್ನ ಮಗನನ್ನು ಯಾರೋ ಕೊಲೆ ಮಾಡಿ ಸಾಕ್ಷಿ ನಾಶ
ಪಡಿಸುವ ಉದ್ದೇಶದಿಂದ ಹಗ್ಗ ಕಟ್ಟಿ ಬಾವಿಯಲ್ಲಿ ಹಾಕಿರುತ್ತಾರೆ ನನ್ನ ಮಗನನ್ನು ಕೊಲೆ
ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ: 35/2012 ಕಲಂ, 302, 2012 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment