Police Bhavan Kalaburagi

Police Bhavan Kalaburagi

Wednesday, July 11, 2012

GULBARGA DIST REPORTED CRIME


ಅಪಘಾತ ಪ್ರಕರಣ:
ಕಮಲಾಫೂರ ಪೊಲೀಸ ಠಾಣೆ: ಶ್ರೀ ರಾಜಕುಮಾರ ತಂದೆ ಅಂಬಾರಾವ ಪಾಟೀಲ ಸಾಃ ಮರಗುತ್ತಿ ತಾಃಜಿಃ ಗುಲಬರ್ಗಾ  ರವರು  ನಾನು ರಮೇಶ ತಂದೆ ಹಣಮಂತರಾಯ ಬಿರಾದಾರ ಇಬ್ಬರೂ ಕುಡಿಕೊಂಡು ದಿಃ 09/07/2012 ರಂದು ರಾತ್ರಿ 9-00 ಗಂಟೆಗೆ ಚಿಟಗುಪ್ಪಾಕ್ಕೆ ಹೋಗಿ ಮರಳಿ ಗುಲಬರ್ಗಾಕ್ಕೆ ಹುಮನಾಬಾದ ಗುಲಬರ್ಗಾ ಎನ್.ಹೆಚ್. 218 ನೇದ್ದರ ರೋಡಿನ ಮೇಲೆ ಬರುತ್ತಿದ್ದಾಗ ಮರುಗತ್ತಿ ಕ್ರಾಸ ಹತ್ತಿರ ಇರುವ ಕೆ.ಇ.ಬಿ ಆಫಿಸ್ ಮುಂದುಗಡೆ ರಮೇಶ ಇತನು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ. ಕೆಎ:22 ಡಬ್ಲೂ:4298 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಸ್ಕಿಡ್ ಆಗಿ ಬಿದ್ದರಿಂದ ನನಗೆ ಮತ್ತು ರಮೇಶ ಇತನಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂಧ ಠಾಣೆ ಗುನ್ನೆ ನಂ: 82/2012 ಕಲಂ 279,337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: