ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಸಿದ್ರಾಮಪ್ಪಾ ತಂದೆ ಶರಣಪ್ಪಾ ಸಜ್ಜನ ಶೇಟ್ಟಿ ವ: 74 ಉ: ನಿವೃತ್ತ ನೌಕರ ಸಾ; ಆನಂದ ನಗರ ಗುಲಬರ್ಗಾರವರು ನಾನು ದಿನಾಂಕ:02-07-12 ರಂದು ಜಗತ ಸರ್ಕಲ್ ನಲ್ಲಿ ನಿಂತಿರುವಾಗ ಮೋಟಾರ ಸೈಕಲ್ ನಂ: ಕೆಎ 32 ವಿ 8950 ನೇದ್ದರ ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಒಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 71/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮವ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ಶ್ರೀ ಅನಂತ ತಂದೆ ಕಸ್ತೂರಚಂದ ತೊನ್ನಶೇಟ್ಟಿ ಸಾ|| ಸಿಂದಗಿ ರೋಡ ಭಾರತ ಪೆಟ್ರೋಲ್ ಬಂಕ ಹಿಂದುಗಡೆ ಇಂಡಿ ರವರು ನಾನು ಶಿರವಾಳ ಗ್ರಾಮದ ಅಳ್ಳಗಿ ಮಠದಲ್ಲಿ 32 ಕಿ.ಮಿ. ದ 9,912 ಕೆ ಜಿ ವಿಧ್ಯುತ್ತ ಅಲ್ಯೂಮಿನಿಯಂ ರಾಬೀಟ್ ವಾಯರ ಅ||ಕಿ|| 8,00,000/- ರೂ,ಹಾರಿಜಂಟಲ್ 145 ಅ||ಕಿ|| 20,000/- ರೂ,ಇನ್ಸೂಲೇಟರ ಬಾಕ್ಸ ಅ||ಕಿ|| 20,000/- ರೂ ಹೀಗೆ ಒಟ್ಟು 8,40,000/- ರೂಪಾಯಿಗಳ ಮೌಲ್ಯದ್ದು ಇಟ್ಟಿರುತ್ತೆನೆ. ನಾನು ನನ್ನ ಊರಿಗೆ ಹೋಗಿ ಮರಳಿ ದಿನಾಂಕ 29.05.12 ರಂದು ಬೆಳಿಗ್ಗೆ 7 ಗಂಟೆಗೆ ಬಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿದಿರುತ್ತದೆ .ಸದರಿ ಆಲ್ಯೂಮಿನಿಯಂ ವೈರ್ ನ್ನು ಮಹಾಂತೇಶ ಬಡಿಗೇರ, ಸುನೀಲ ಗೊಳಸಂಗಿ ಎನ್ನುವವರು ಗೂಡ್ಸ ವಾಹನದಲ್ಲಿ ಹಾಕಿಕೊಂಡು ಹೋಗಿರುತ್ತಾರೆ. ಅಂತಾ ತಿಳಿದು ಬಂದಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ 117/12 ಕಲಂ 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment