ಗುಲಬರ್ಗಾ ಜಿಲ್ಲಾ ಪೊಲೀಸ್ ರ
ಕಾರ್ಯಚರಣೆ
ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯ
2010 ನೇ ಸಾಲಿನ ಜೊಡಿ ಕೊಲೆ ಪ್ರಕರಣ ಪತ್ತೆ, ಎರಡು ಜನ ಆರೋಪಿತರ ಬಂದನ:
ದಿನಾಂಕ:27/11/10
ರಂದು ಬೆಳಿಗ್ಗೆ 11-00 ಗಂಟೆಗೆ ಶ್ರೀಮತಿ ಶಶಿಕಲಾ ಗಂಡ ರಾಮಣ್ಣ ಹಲೊಗೆನವರ ಸಾ:ಚಿಂತಕೋಟಿ
ಹಾವ:ಸೇಡಂ ರವರು ಸೇಡಂ ಪೊಲೀಸ್ ಠಾಣೆಗೆ ಹೋಗಿ ಪಿರ್ಯಾದಿ ನೀಡಿದ್ದೆನೆಂದರೆ, ತಾನು ಮತ್ತು ತನ್ನ
ಗಂಡ ರಾಮಣ್ಣ @ ರಾಮಚಂದ್ರ ಹಲಗ್ಯಾನವರ ಸಾ:ಚಿಂತಕೋಟಿ
ಹಾ:ವ:ವೆಂಕಟರೆಡ್ಡಿಯವರ ಹೋಲದಲ್ಲಿರುವ ಮನೆಯಲ್ಲಿ ಇಬ್ಬರೂ ಕೂಡಿ ವೆಂಕಟರೆಡ್ಡಿ ವಕೀಲರು
ಸೇಡಂ ಇವರ ಹತ್ತಿರ ಮೂರು ತಿಂಗಳಿಂದ ಕುರಿಗಳು ಕಾಯುತ್ತಾ
ತೋಟದ ಮನೆಯಲ್ಲಿ ವಾಸವಾಗಿದ್ದು, ವೆಂಕಟರೆಡ್ಡಿಯವರ ಹತ್ತಿರ ನಮಗಿಂತ ಮೊದಲು ಲಕ್ಷ್ಮಿ ಗಂಡ
ಚಂದ್ರಕಾಂತ ಸಾ:ಚಿಮ್ಮನಚೋಡ ಇವಳು ಕುರಿ ಕಾಯುವ ಕೆಲಸ ಮಾಡುತ್ತಿದ್ದಳು, ಲಕ್ಷ್ಮಿ ಇವಳು ತನ್ನ
ಗಂಡ ಸತ್ತಿದ್ದರಿಂದ ಅಲ್ಲಿ ಕೆಲಸ ಮಾಡುವುದು ಬಿಟ್ಟು ಹೋಗಿದ್ದು, ನಾವು ಇಲ್ಲಿ ಕೆಲಸಕ್ಕೆ ಬಂದ
ಮೇಲೆ ನಮ್ಮ ಹತ್ತಿರ ಲಕ್ಷ್ಮಿ ಆಗಾಗ ಬಂದು ಹೋಗಿದ್ದು ಲಕ್ಷ್ಮಿ ಇವಳ ಪರಿಚಯ ನಮಗೆ ಇರುತ್ತದೆ.
ದಿ:26/11/10 ರಂದು
ರಾತ್ರಿ 8 ಗಂಟೆಗೆ ನಮ್ಮ ಮನೆಗೆ ಲಕ್ಷ್ಮಿಯು ಇಬ್ಬರ ಗಂಡಸರೊಂದಿಗೆ ಬಂದು ವಕೀಲರಿಗೆ ಭೇಟಿ
ಆಗುತ್ತೆನೆ. ರಾತ್ರಿ ಇಲ್ಲಿಯೇ ಉಳಿದುಕೊಳ್ಳುತ್ತೆನೆಂದು ತನ್ನ ಜೋತೆ ಬಂದ ಇಬ್ಬರು ಗಂಡಸರೊಂದಿಗೆ ಉಳಿದು ಕೊಂಡಿದ್ದು, ಮದ್ಯ ರಾತ್ರಿ 12-00 ಗಂಟೆಯ
ಸುಮಾರಿಗೆ ಲಕ್ಷ್ಮಿ ಹಾಗೂ ಅವಳ ಜೊತೆ ಬಂದವರು ಮನೆಯ ಒಳಗಡೆ ಜಗಳ ಮಾಡಿ ಕೊಳ್ಳುತ್ತಿದ್ದರು, ಆಗ
ನಾನು ಮತ್ತು ನನ್ನ ಗಂಡ ಯಾಕೇ ಜಗಳ ಮಾಡುತ್ತಿದ್ದಿರಿ, ಜಗಳ ಮಾಡುವುದಾದರೆ ಇಲ್ಲಿ ಇರಬೇಡಿರಿ
ಅಂತಾ ಹೇಳಿದಕ್ಕೆ ಇಬ್ಬರು ಗಂಡಸರು ನಮಗೆ ಚಾಕುವಿನಿಂದ ಹೊಡೆಯಲು ಬಂದರು, ನಾನು ನನ್ನ ಎಡಗೈಯಿಂದ
ತಡೆಯಲು ಹೋದಾಗ ನನ್ನ ಎಡಗೈ ಬೆರಳಿಗೆ ಚಾಕು ತಗಲಿ ರಕ್ತಗಾಯವಾಗಿದ್ದು ಆಗ ನಾನು ಅಲ್ಲಿ ಹತ್ತಿರದ ಮನೆಯವರಿಗೆ ಕರೆದು ಕೊಂಡು ಬರುವಷ್ಟರಲ್ಲಿ ಆ
ಇಬ್ಬರು ಗಂಡಸರು ನನ್ನ ಗಂಡನಿಗೆ ಚಾಕುವಿನಿಂದ ಹೊಡೆದು ಕುತ್ತಿಗೆಗೆ ಭಾರಿ ಗಾಯಪಡಿಸಿ ಕೊಲೆ
ಮಾಡಿದ್ದು ಅಲ್ಲದೇ ಲಕ್ಷ್ಮಿ ಇವಳಿಗೆ ಅತ್ಯಾಚಾರಕ್ಕೆ ಪ್ರಯತ್ನಿಸಿ ಚಾಕುವಿನಿಂದ ಭಾರಿಗಾಯ ಪಡಿಸಿ
ಕೊಲೆ ಮಾಡಿರುತ್ತಾರೆ ಎಂದು ನೀಡಿದ್ದ ಪಿರ್ಯಾದಿಯೆಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ
ದಿನಾಂಕ: 27-11-2010 ರಂದು ದಾಖಲಾಗಿತ್ತು,
ಈ ಪ್ರಕರಣದ ತನಿಖೆಯನ್ನು
ವರದಿಯಾದಗಿನಿಂದ ಸೇಡಂ ವೃತ್ತ ನಿರೀಕ್ಷಕರು ತನಿಖೆ ನಿರ್ವಹಿಸಿದ್ದು, ಆದರೂ ಸಹಿತ ಈ ಪ್ರಕರಣ
ಪತ್ತೆಯಾಗಿರಲಿಲ್ಲ. ನಂತರ ಇತ್ತಿಚಿಗೆ ಸೇಡಂ ವೃತ್ತ ನಿರೀಕ್ಷಕರು, ಈ ಪ್ರಕರಣ ಪತ್ತೆಯಾಗದ
ಪ್ರಕರಣವೆಂದು ಸದ್ಯಕ್ಕೆ ತನಿಖೆ ಮುಕ್ತಾಯ ಮಾಡಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು
ಗುಲಬರ್ಗಾರವರಲ್ಲಿ ಕೋರಿದ್ದರು.
ಈ ಜೋಡಿ ಕೊಲೆ ಪ್ರಕರಣದ
ಗಂಭೀರತೆಯನ್ನು ಪರಿಗಣಿಸಿ, ಹೇಗಾದರೂ ಈ ಪ್ರಕರಣವನ್ನು ಸತತ ಪ್ರಯತ್ನ ಮಾಡಿ ಪತ್ತೆ ಹಚ್ಚಿ
ಬೆಳಕಿಗೆ ತರಬೇಕೆಂದು ಶ್ರೀ ಪ್ರವೀಣ ಮಧಕರ ಪವಾರ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ
ರವರು ತನ್ನ ಆಧಿನದಲ್ಲಿ ಬರುವ ಜಿಲ್ಲಾ ಅಪರಾದ ತನಿಖಾ ದಳದ ಶ್ರೀ ಬಿ.ಬಿ.ಪಟೇಲ್ ಪೊಲೀಸ್ ಇನ್ಸಪೇಕ್ಟರ
ಮತ್ತು ಅವರ ಸಿಬ್ಬಂದಿಯವರಾದ ಅಪ್ಪಾರಾವ ಹೆಚಸಿ, ಶಿವಯೋಗಿ ಹೆಚಸಿ, ಅಣ್ಣಪ್ಪಾ ಹೆಚಸಿ, ಬಸವರಾಜ
ಪಾಟೀಲ ಹೆಚಸಿ, ವಿಜಯಕುಮಾರ ಹೆಚಸಿ, ಮತ್ತು ಚನ್ನವೀರೇಶ, ವೀರಣ್ಣಾ ರವರನ್ನು ಒಳಗೊಂಡಂತೆ ಒಂದು ವಿಶೇಷ ತನಿಖಾ ತಂಡವನ್ನು
ರಚಿಸಿರುತ್ತಾರೆ.
ಈ ತನಿಖಾ ತಂಡವು ಅತೀ
ಚಾಕಚಕ್ಯತೆಯಿಂದ ಆಧುನಿಕ ತಂತ್ರಜ್ಷಾನವನ್ನು ಬಳಸಿಕೊಂಡು ತಮಗೆ ಸಿಕ್ಕ ಖಚಿತ ಭಾತ್ಮಿಯಂತೆ ಈ
ಪ್ರಕರಣವನ್ನು ಪತ್ತೆ ಹಚ್ಚಿ ಭೇದಿಸಲು ಯಶ್ವಸಿಯಾಗಿ ಈ ಪ್ರಕರಣದಲ್ಲಿ ಈಗಾಗಲೇ ಮೃತಳಾಗಿರುವ
ಶ್ರೀಮತಿ, ಲಕ್ಷ್ಮಿ ಇವಳನ್ನು ಹಟ ಸಂಭೋಗ ಮಾಡಲು ಪ್ರಯತ್ನಿಸಿ, ಲಕ್ಷ್ಮಿ ನಿರಾಕರಿಸಿದ್ದರಿಂದ
ಹಾಗು ಮೃತ ರಾಮಣ್ಣ ಅಡ್ಡಿ ಪಡಿಸಿದ್ದರಿಂದ ಇವರಿಬ್ಬರನ್ನು ಕೊಲೆ ಮಾಡಿ ಪರಾರಿಯಲ್ಲಿದ್ದ ಇಬ್ಬರು
ಆರೋಪಿತರಾದ 1. ಚಂದುಸಿಂಗ್ ತಂದೆ ಪಂಡರಿನಾಥ ಜಾ|| ರಜಪೂತ, ವ||25 ಉ|| ಕೂಲಿಕೆಲಸ ಸಾ||
ತೆಗಲತಿಪ್ಪಿ ಗ್ರಾಮ ತಾ|| ಚಿಂಚೋಳಿ, 2. ಭೀಮಾ @ ಭೀಮಾಶಂಕರ ತಂದೆ ಶಿವರಾಯ ಪೆಂಚನಹಳ್ಳಿ ಜಾ||
ಕಬ್ಬಲಿಗ ವ||24 ಸಾ|| ತೆಗಲತಿಪ್ಪಿ ತಾ||
ಚಿಂಚೋಳಿ ಇವರಿಬ್ಬರನ್ನು ಬಂದಿಸಿರುತ್ತಾರೆ.
ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ಪೊಲೀಸ್
ಅಧೀಕ್ಷಕರು ಗುಲಬರ್ಗಾ ರವರು ಈ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ ಈ ವಿಶೇಷ ತನಿಖಾ ತಂಡಕ್ಕೆ
10,000/- ರೂಪಾಯಿಗಳ ಬಹುಮಾನ ಘೋಷಿಸಿರುತ್ತಾರೆ.
No comments:
Post a Comment