Police Bhavan Kalaburagi

Police Bhavan Kalaburagi

Sunday, July 15, 2012

GULBARGA DIST REPORTED CRIMES



ಅಪಘಾತ ಪ್ರಕರಣ:
ಪರತಬಾದ ಪೊಲೀಸ್ ಠಾಣೆ: ಶ್ರೀಮತಿ ಲಕ್ಷ್ಮಿಬಾಯಿ ಗಂಡ ಯಂಕಪ್ಪಾ ಬಂಡಿವಡ್ಡರ ಸಾ|| ಮಾಡ್ಯಾಳ  ತಾ|| ಆಳಂದ ಜಿ||ಗುಲಬರ್ಗಾ ರವರು  ನನ್ನ ತವರು ಮನೆಯ ಸಿರನೂರ ಗ್ರಾಮವಿದ್ದು ನನ್ನ ತಮ್ಮ ಅತ್ತಿಗೆ ಮಾತಾನಾಡುವ ಕುರಿತು ದಿನಾಂಕ:12/7/2012 ರಂದು ನಾನು ಮತ್ತು ನನ್ನ ಗಂಡ ಯಂಕಪ್ಪಾ ಕೂಡಿಕೊಂಡು ಸಿರನೂರ ಗ್ರಾಮಕ್ಕೆ ಬಂದಿರುತ್ತೇವೆ.ದಿನಾಂಕ: 15-7-2012 ರಂದು ಬೆಳಗ್ಗೆ 8 ಗಂಟೆಗೆ ಸುಮಾರಿಗೆ ನ್ನ ಗಂಡ ಯಂಕಪ್ಪಾ ಇವರು ಮನೆಯಿಂದ ಸಂಡಾಸಕ್ಕೆಂದು ಹೋಗಿರುತ್ತಾರೆ. ನನ್ನ ತಮ್ಮನಾದ ಯಲ್ಲಪ್ಪ ಹಾಗೂ ತಿಮ್ಮಯ್ಯ ರವರು ಮನೆಗೆ ಫೊನ ಮಾಡಿ ತಿಳಿಸಿದೇನೆಂದರೆ, ನಮ್ಮ ಮಾವ ಯಂಕಪ್ಪ ಇವರು ಸಂಡಾಸದಿಮದ ಮನೆಗೆ ಬರುವ ಕುರಿತು ರಾಷ್ಟ್ರೀಯ ಹೆದ್ಸಾರಿ 218 ರಸ್ತೆ ನಮ್ಮೂರ ಕ್ರಾಸ ಹತ್ತಿರ ದಾಟುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಬ್ಬ ಲಾರಿ ನಂ: ಕೆಎ-39 / 5436 ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ತಲೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ ಅಂತಾ ತಿಳಿಸಿದ್ದರಿಂದ ನಾನು ಸಿರನೂರ ಕ್ರಾಸಿಗೆ ಬಂದು ನೋಡಲಾಗಿ ನನ್ನ ಗಂಡನಿಗೆ ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 96/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಸಂತೋಷ ತಂದೆ ಶಿಕರಪ್ಪ ಕಾಂಬಳೆ ಸಾ|| ದೇವಂತಗಿ ಗ್ರಾಮರವರು ನಾನು ದಿನಾಂಕ: 14/07/2012 ರಂದು ಮಧ್ಯಾಹ್ನ 12-00 ಗಂಟೆಗೆ ನಮ್ಮ ಗ್ರಾಮದ ವಿಠ್ಠಲ ದೊಡಮನಿ ಇವರ ಹೊಲದಲ್ಲಿ ಗಳೆ ಹೊಡೆಯುತ್ತಿರುವಾಗ ಗ್ರಾಮದ ಕುರುಬ ಜನಾಂಗದವರಾದ ಲಗಮ್ಮಣ್ಣಾ ಹಾಗೂ ಇನ್ನೂ 4 ಜನರು ಕೂಡಿ ನನಗೆ ಹೊಡೆಯಲು ಬಂದಾಗ ನನ್ನ ಮತ್ತು ಅವರ ಮಧ್ಯೆ ವಾದ ವಿವಾದವಾಗಿರುತ್ತದೆ. ನನ್ನ ತಂದೆಯಾದ ಶಿಕರಪ್ಪ ಇವರು ಲಗಮಣ್ಣ ಈತನು ಬರಗಾಲಿ ಮಾಶಾಳ ಇವರ ಹಿಟ್ಟಿನ ಗಿರಣಿ ಹತ್ತಿರ ನಿಂತಾಗ ಮಲ್ಲಪ್ಪ ತಂದೆ ಮೈಲಾರಿ ಪ್ಯಾಟಿ ಹಾಗೂ ಇನ್ನು 15 ಜನರು ಎಲ್ಲರೂ ಕುರುಬ ಜನಾಂಗದವರು ಕೂಡಿ ನನಗೆ ಮತ್ತು ನಮ್ಮವರಿಗೆ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು ಹೊಡೆ ಮಾಡಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2012 ಕಲಂ 143, 147, 148, 323, 324, 504, 506, 149 ಐಪಿಸಿ ಮತ್ತು 3(1)(10) ಎಸ್.ಸಿ/ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: