ಅಪಘಾತ
ಪ್ರಕರಣ:
ಹೆಚ್ಚುವರಿ
ಸಂಚಾರಿ ಪೊಲೀಸ್ ಠಾಣೆ: ಮಹ್ಮದ ರಫೀಕ ತಂದೆ ಬಾಬುಮಿಯಾ ಸಾ; ಅಕ್ಬರ ಮಜೀದ ಹತ್ತಿರ ಖಮರ ಕಾಲೋನಿ ಗುಲಬರ್ಗಾರವರು ನಾನು ದಿನಾಂಕ 15-07-2012 ರಂದು 6-30 ಗಂಟೆಗೆ ಅರ.ಪಿ.ಸರ್ಕಲ್ ದಿಂದ ರಾಮ ಮಂದಿರ
ರಿಂಗ ರೋಡ ಮಧ್ಯದಲ್ಲಿ ಬರುವ ಚಿತ್ತಾರಿ ಅಡ್ಡಾ ಹತ್ತಿರ ನಾನು ರೋಡಿನ ಸೈಡಿನಲ್ಲಿ ನಿಂತಿರುವಾಗ ಮೋಟಾರ ಸೈಕಲ್ ನಂ: ಕೆಎ 32 ಆರ್
-5116 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ
ಸಾದಾಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ: 76/2012 ಕಲಂ, 279,
337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಜಬರಿ ಸಂಭೋಗಕ್ಕೆ ಪ್ರಯತ್ನ ಪ್ರಕರಣ:
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ: ದಿನಾಂಕ 15.07.2012 ರಂದು 0430
ಗಂಟೆಯಿಂದ 0630 ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯೊಳಗೆ ಅತಿಕ್ರಮ ಪ್ರವೇಶಮಾಡಿ
ಅಲಮಾರಿಯ ಮೇಲೆ ಇಟ್ಟ ಚಾವಿಯನ್ನು ತೆಗೆದುಕೊಂಡು ಅಲಮಾರಿಗಳನ್ನು ತೆರೆದು ಅವುಗಳಲ್ಲಿದ್ದ 11.5 ತೊಲೆ ಬಂಗಾರದ ಆಬರಣಗಳು ಅಃಕಿಃ 2,87,500
ರೂ, 12 ತೊಲೆ ಬೆಳ್ಳೆ ಸಾಮಾಗ್ರಿಗಳು ಅಃಕಿಃ 6000 ರೂ,ಎರಡು ಮೊಬೈಲಗಳು ಅಃಕಿಃ 1000 ರೂ,ನಗದು
ಹಣ 45,000 ರೂ. ಹೀಗೆ ಒಟ್ಟು 3,39,500
ರೂ. ನೇದ್ದವುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಶ್ರೀ ಸದಾಶಿವ ತಂದೆ ಲಕ್ಷ್ಮಣರಾವ ಕಲ್ಯಾಣಕರ ಸಾಃ ಸವೇರಾ ಹೊಟೇಲ ಹಿಂದುಗಡೆ ನೆಹರು ಗಂಜ
ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 116/2012 ಕಲಂ 457 380
ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ: ಶ್ರೀ ಶರಣಗೌಡ ತಂದೆ ಭೀಮರಾಯ ಪಾಟೀಲ ಮಂಗಾಣೆ ಸಾ:ಶಿವಾಜಿ ನಗರ ಗುಲ್ಬರ್ಗಾ ರವರು ನಾನು
ದಿನಾಂಕ:14-07-2012
ರಂದು 7-30 ಪಿ.ಎಮ್ ಕ್ಕೆ ನಾನು ಮತ್ತು ನಮ್ಮ ಆಫೀಸಿನ ಕ್ಯಾಶೀಯರ ವಿಶ್ವನಾಥ ಹಾಗೂ ಮಲ್ಲಿಕಾರ್ಜುನ, ಅಣ್ಣರಾವ, ಶರಣಬಸಪ್ಪ,ಎನ , ನೌಕರರು, ಕೂಡಿ ಮನೆಗೆ ಹೋಗುವ ಕಾಲಕ್ಕೆ ಆಫೀಸಿನ ಬೀಗವನ್ನು ಹಾಕಿಕೊಂಡು ಹೋಗಿದ್ದು, 15-07-2012 ರಂದು
ಬೆಳಿಗ್ಗೆ 9-30 ಗಂಟೆಗೆ ನಮ್ಮ ಆಫೀಸಿನ ಕ್ಯಾಶಿಯಾರ ವಿಶ್ವನಾಥ ಇವರು ದಿನ ನಿತ್ಯಾದಂತೆ ಅಫೀಸಿಗೆ ಬಂದು ಆಫೀಸಿನ ಕೀಲಿಯನ್ನು ಮುರಿದಿದ್ದ ನೋಡಿ ನನಗೆ ಫೋನ ಮಾಡಿ ತಿಳಿಸಿದರು ನಾನು ಬಂದು ನೋಡಲು ಆಲಮಾರಿಯಲ್ಲಿಟ್ಟಿದ್ದ ರೂ. 97,950/- ರೂಪಾಯಿಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ
ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 232/2012 ಕಲಂ 457, 380 ಐಪಿಸಿ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಕ್ರಿಷ್ಣಾಜಿ ತಂದೆ ಲಕ್ಷ್ಮಣರಾವ ಕಲ್ಯಾಣಕರ ರಾಮೇಶ್ವರ ನಗರ ಟಿ.ವ್ಹಿ ಸ್ಟೇಷನ ಹತ್ತಿರ ಗುಲಬರ್ಗಾರವರು
ನಾನು ದಿನಾಂಕ:15-07-2012 ರಂದು ಬೆಳಿಗ್ಗೆ 10-00 ಹುಮನಾಬಾದ ರೋಡಿನಲ್ಲಿರುವ ಸೆಂಟ್ರಲ್ ವ್ಹೇರ
ಹೌಸ ಹತ್ತಿರ ಮೇನ ರೋಡಿನಲ್ಲಿ ಕಾರ ನಂಬರ ಕೆಎ 32
ಎಮ್ 9010 ನೇದ್ದರ ಚಾಲಕ ಗೋವಿಂದ ಇತನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ನನ್ನ ಸೈಕಲಗೆ ಡಿಕ್ಕಿ ಪಡಿಸಿ ಅಫಘಾತಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ: 279, 338 ಐಪಿಸಿ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment