ಕಳ್ಳತನ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ಶ್ರೀ,ಸಿದ್ದಣ್ಣ ತಂದೆ ದುಂಡಪ್ಪ ಸುಂಬಡ ಸಾ|| ಮಂದೇವಾಲ ರವರು ನಾನು ದಿನಾಂಕ:22/07/2012 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಊಟ ಮಾಡಿ ಮನೆಯ ಮಾಳಿಗೆ ಮೇಲೆ ಮಲಗಿಕೊಂಡಿದ್ದು, ಮಧ್ಯರಾತ್ರಿ ಅಂದಾಜು 3:30 ಗಂಟೆ ಸುಮಾರಿಗೆ ನನಗೆ ಎಚ್ಚರವಾದಾಗ ನಮ್ಮ ಮನೆಯ ಬಾಗಿಲು ತೆರೆದಿತ್ತು, ನಾನು ಎದ್ದು ಬಂದು ನೋಡಲು ಅರ್ದತೋಲಿಯ ಬಂಗಾರದ ಬೋರಮಳ ಹಾಗೂ ರೇಸ್ಮೆ ಸೀರೆಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದರ ಕಿಮ್ಮತ್ತು ಅಂದಾಜ 22,400/- ರೂಪಾಯಿಗಳಾಗುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:99/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ ಸೋಮಲಿಂಗಪ್ಪ ತಂದೆ ಭೀಮಶ್ಯಾ ಸಲಗರೆ ಸಾ|| ಜಿರೋಳ್ಳಿ ಗ್ರಾಮ ತಾ||ಆಳಂದ ರವರು ನನ್ನ ಮಗ ಸಂತೋಷ ಹಾಗು ನನ್ನ ತಮ್ಮ ಪರಮೇಶ್ವರ ಇಬ್ಬರೂ ಕೂಡಿಕೊಂಡು ದಿನಾಂಕ:22-07-2012 ರಂದು ಮಧ್ಯಾಹ್ನ 12-05 ಗಂಟೆಗೆ ಮೋಟಾರ ಸೈಕಲ್ ನಂ. ಕೆಎ-32 ವ್ಹಾಯ-816 ನೇದ್ದರ ಮೇಲೆ ಜೆರೋಳ್ಳಿಯಿಂದ ಎ.ಪಿ.ಎಮ್.ಸಿ. ಆಳಂದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿರುವಾಗ ಎದುರಗಡೆಯಿಂದ ಜೀಪ್ ನಂ.ಕೆಎ-32 ಎಮ್.ಎ-1048 ನೇದ್ದರ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ನನ್ನ ಮಗನಿಗೆ ಹಾಗೂ ನನ್ನ ತಮ್ಮನಿಗೆ ಭಾರಿ ಗಾಯವಾಗಿತ್ತು, ಉಪಚಾರ ಕುರಿತು ಆಳಂದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ನನ್ನ ತಮ್ಮ ಪರಮೇಶ್ವರ ಇತನು ಮೃತಪಟ್ಟಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:151/2012 ಕಲಂ 279,338,304(ಎ) ಐ.ಪಿ.ಸಿ. ಸಂ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment