ಅಪಘಾತ
ಪ್ರಕರಣ:
ಹೆಚ್ಚುವರಿ
ಸಂಚಾರಿ ಪೊಲೀಸ್ ಠಾಣೆ : ಕು|| ಭಾಗ್ಯಾಶ್ರೀ ತಂದೆ ವೀರುಪಾಕ್ಷಪ್ಪಾ ತಡಕಲ್ ಸಾ; ಶಿವ ಶಕ್ತಿ ನಗರ ಸೈಯದ ಚಿಂಚೋಳಿ ರಸ್ತೆ
ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳತಿಯರು ಕುಡಿಕೊಂಡು ದಿನಾಂಕ: 11-07-2012 ರಂದು ಬೆಳಿಗ್ಗೆ 11-00 ಗಂಟೆಗೆ ಮಹಾದೇವಿ ಕನ್ಯಾ ಪ್ರೌಢ ಶಾಲೆಗೆ ಹೋಗುವ ಕುರಿತು ಅಟೋರಿಕ್ಷಾ ನಂ: ಕೆಎ
32 -8808 ನೆದ್ದರಲ್ಲಿ ಕುಳಿತು ಹೋಗುತ್ತಿದ್ದಾಗ ಅಗ್ನಿ ಶಾಮಕ ದಳ ಠಾಣೆ ಎದುರು ರೋಡಿನ ಮೇಲೆ ಅಟೋರೀಕ್ಷಾ
ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ
ಲಾಲಗೇರಿ ಕಡಯಿಂದ ಬರುತ್ತಿರುವ ಮೋಟಾರ ಸೈಕಲ್ ನಂ: ಕೆಎ 33 ಜೆ 1410 ನೇದ್ದಕ್ಕೆ ಡಿಕ್ಕಿ ಪಡಿಸಿ
ಅಟೋ ಪಲ್ಟಿಮಾಡಿ ನನಗೆ ಭಾರಿ ಗಾಯಗೊಳಿಸಿದ್ದು, ಮತ್ತು ಅಟೋ ಚಾಲಕ
ಮತ್ತು ಮೋಟಾರ ಸೈಕಲ್ ಸವಾರನಿಗೂ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ: 75/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಸೇಡಂ
ಪೊಲೀಸ ಠಾಣೆ:ಶ್ರೀ ಪ್ರಕಾಶ ತಂದೆ ಮಹಾದೇವಪ್ಪ ಹಾಬಳ ಸಾ:ಬಿಬ್ಬಳ್ಳಿ ಗ್ರಾಮ,
ತಾ||ಸೇಡಂ ರವರು ನಮಗೂ ಮತ್ತು ನಮ್ಮ ಮಾವನ ಮಕ್ಕಳಾದ ಸೋಮಶೇಖರ ಹೊಸಮನಿ, ಭೀಮಾಶಂಕರ ಹೊಸಮನಿ ಮಲ್ಲಪ್ಪ ಹೊಸಮನಿ
ಮತ್ತು ಚಂದ್ರಶೇಖರ ಹೊಸಮನಿ ಇವರಿಗೂ ಹೊಲ ಸರ್ವೆ ನಂ-38 ನೇದ್ದರ 26 ಎಕ್ಕರೆ 20 ಗುಂಟೆ ಜಮೀನಿನ
ಸಲುವಾಗಿ ತಕರಾರು ನಡೆದಿರುತ್ತದೆ. ಹೋದವರ್ಷ, ಇದೇ ಹೊಲದ ವಿಷಯದಲ್ಲಿ ಸೊಮಶೇಖರ ಹಾಗೂ ಇತರರ
ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ವರ್ಷ ನಾವು ಮೀನಹಾಬಾಳ
ಗ್ರಾಮದ ಮಾಳಪ್ಪ ತಂದೆ ನಾಗಣ್ಣ ಪುಜಾರಿ ಹಾಗೂ ವೀರಭದ್ರಯ್ಯ ತಂದೆ ರೇವಯ್ಯ ಮಠಪತಿ ಇವರಿಗೆ 5
ಲಕ್ಷ ರೂಪಾಯಿಗಳಿಗೆ ಎರಡು ವರ್ಷ ಕಡತಿ ಹಾಕಿದ್ದು ಅವರೇ ಈ ವರ್ಷ ಹೊಲ ಸಾಗುವಳಿ ಮಾಡಿದ್ದು
ಇರುತ್ತದೆ. ದಿನಾಂಕ:12-07-2012 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ ಹೊಲ ಬಿತ್ತಲು ನಾನು ಮತ್ತು ನಮ್ಮ ಅಣ್ಣನಾದ ಜಗನ್ನಾಥ
ತಂಗಿಯ ಗಂಡನಾದ ಕ್ರಿಷ್ಣಾ ಜಟ್ಟೂರ ಹಾಗೂ ದೊಡ್ಡಪ್ಪನಾದ ರೇವಣಸಿದ್ದಪ್ಪ ಹಾಬಳ ಮತ್ತು ನಮ್ಮ
ಹೆಣ್ಣು ಮಕ್ಕಳಾದ ಜಗದೇವಿ, ನಾಗಮ್ಮ ಮತ್ತು ಮೀನಹಾಬಾಳದಲ್ಲಿರುವ ದೊಡ್ಡಪ್ಪನ ಮಗನಾದ ನಾಗೇಶ
ಕೂಡಿಕೊಂಡು ಮಾಳಪ್ಪ ಪೂಜಾರಿ, ವೀರಭದ್ರಯ್ಯ ಮಠಪತಿ ಇವರೊಂದಿಗೆ ಟ್ರಾಕ್ಟರ್ ದಲ್ಲಿ ಕುಳಿತು
ಹೊಲಕ್ಕೆ ಬಂದು ಟ್ರಾಕ್ಟರ್ ದಿಂದ ರೋಡಿನ ಮೇಲೆ ಇಳಿಯುತ್ತಿದ್ದಾಗ ಸೇಡಂ
ಕಡೆಯಿಂದ ಸೋಮಶೇಖರ ತಂದೆ ಗುಂಡಪ್ಪ ಹೊಸಮನಿ, ಮತ್ತು ಇತರರು ಕೂಡಿಕೊಂಡು ಬಂದು ಟ್ರಾಕ್ಟರದಲ್ಲಿದ್ದ
ಬಡಿಗೆಗಳನ್ನು ತೆಗೆದುಕೊಂಡು ಬಿತ್ತಲು ಬಂದಿರುವ ನನಗೆ ಹಾಗೂ ನನ್ನೊಂದಿಗೆ ಬಂದಿದ್ದ ಎಲ್ಲರಿಗೂ
ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 145/2012
ಕಲಂ, 143, 147, 148, 307, 324, 323, 504, 506, 427 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment