ಪತ್ರಿಕಾ ಪ್ರಕಟಣೆ
ಕೊಪ್ಪಳ ಜಿಲ್ಲೆಯ ಘೋರ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಒಳ್ಳೆಯ
ರೀತಿಯಿಂದ ತನಿಖೆಯನ್ನು ನಡೆಯಿಸಿ ಆರೋಪಿತರಿಗೆ ಶಿಕ್ಷೆ ಆಗುವಂತೆ ಮಾಡಿರುವ ಬಗ್ಗೆ.
ದಿನಾಂಕ:06-12-2011 ರಂದು ಗಂಗಾವತಿ ತಾಲೂಕಿನ ಮರಕುಂಬಿ ಎಂಬ ಗ್ರಾಮದಲ್ಲಿ ಬೆಳಗಿನ ಜಾವ
ಮೊಹರಂ ಹಬ್ಬದ ಆಚರಣೆಯ ಸಮಯದಲ್ಲಿ ಆರೋಪಿತನಾದ ದುರ್ಗಪ್ಪಾ ತಂದೆ ದುರ್ಗಮ್ಮಾ ಗುಡಿಸಾಲಿನ, ವ:35 ವರ್ಷ ಇದ್ದು, ಅದೇ ಊರಿನ ಶ್ರೀಮತಿ ಮರಿಯಮ್ಮ ಇವರನ್ನು ಬಲತ್ಕಾರ ಮಾಡಿ
ಕೊಲೆ ಮಾಡಿರುವದರ ಮೇಲಿಂದ ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ:318/2011 ಕಲಂ 376, 302, 201
ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ
ಪತ್ರವನ್ನು ಸಲ್ಲಿಸಿದ್ದು, ಇದರಲ್ಲಿ
ಮಾನ್ಯ ನ್ಯಾಯಾಲಯುವು ಆರೋಪಿತನಿಗೆ 8 ವರ್ಷ ಕಠಿಣ ಶಿಕ್ಷೆ ಮತ್ತು ರೂ.15,000/-ಗಳ ದಂಡ, ತಪ್ಪಿದ್ದಲ್ಲಿ ಒಂದು ವರ್ಷ ಆರು ತಿಂಗಳು ಸಾದಾ ಶಿಕ್ಷೆ
ವಿಧಿಸಿರುತ್ತಾರೆ.
ದಿನಾಂಕ
07-01-2011 ರಂದು ನಂದಿಹಾಳ ಸಿದ್ದಾಪೂರ ರಸ್ತೆಯ ಶಲಿಗಾನೂರ ಕ್ರಾಸ ಹತ್ತಿರ ಆರೋಪಿತನಾದ ಮಹೇಬೂಬ
ಬಾಷಾ @ ಮಹಿಬೂಬ ತಂದೆ ಬಾಬುಸಾಬ ಸಾ: ಶಾಲಿಗನೂರ ತಾ: ಗಂಗಾವತಿ
ಇತನು ತನ್ನ ಎರಡನೇ ಹೆಂಡತಿಯನ್ನು ಕೊಲೆ ಮಾಡಿರುವುದರ ಮೇಲಿಂದ ಕಾರಟಗಿ ಠಾಣೆ ಗುನ್ನೆ ನಂ:05/2012
ಕಲಂ 302 ಐಪಿಸಿ ನೇದ್ದರ ಪ್ರಕರಣ ದಾಖಲಿಸಿಕೊಂಡು ತನಿಖೆಯಯನ್ನು ಪೂರೈಸಿ ನ್ಯಾಯಾಲಯಕ್ಕೆ
ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದು, ಇದರಲ್ಲಿ
ಮಾನ್ಯ ನ್ಯಾಯಾಲಯವು ಆರೋಪಿತರಿಗೆ ತ್ವರಿತ
ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಮತ್ತು ರೂ.10,000/- ಗಳ ದಂಡ, ತಪ್ಪಿದ್ದಲ್ಲಿ
ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿರುತ್ತಾರೆ.
ಮಾರ್ಗದರ್ಶಕರಾದ ಶ್ರೀ. ಬಿ.ಎಸ್.ಪ್ರಕಾಶ, ಎಸ್.ಪಿ ಕೊಪ್ಪಳ ಹಾಗೂ ಶ್ರೀ. ಡಿ.ಎಲ್.ಹಣಗಿ
ಡಿವೈ.ಎಸ್.ಪಿ ಗಂಗಾವತಿ ಉಪವಿಭಾಗ ರವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಶ್ರೀ
ಆರ್.ಎಸ್.ಉಜ್ಜನಿಕೊಪ್ಪ ಸಿ.ಪಿ.ಐ ಗಂಗಾವತಿ ಗ್ರಾಮೀಣ ಮತ್ತು ಶ್ರೀ ಬಿ.ಅಮರೇಶ ಪಿ.ಎಸ್.ಐ
ಗಂಗಾವತಿ ಗ್ರಾಮೀಣ ಠಾಣೆರವರು ಪ್ರಾಮಾಣೀಕ ತನಿಖೆ ಮಾಡಿ ಸದರಿ ಪ್ರಕರಣದಲ್ಲಿ ಆರೋಪಿತರಿಗೆ
ತ್ವರಿತ ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ಮಾಡಿರುತ್ತಾರೆ.
ದಿನಾಂಕ:26-06-2011 ರಂದು ಕೊಪ್ಪಳ ತಾಲೂಕಿನ ವಟಪರ್ವಿ
ಗ್ರಾಮದಲ್ಲಿ ಆರೋಪಿತನಾದ ಅಣ್ಣಪ್ಪಾ ಇತನು ಪಿರ್ಯಾದಿ ಮಗಳಾದ ಕುಮಾರಿ ಭೀಮವ್ವಾ ವಯ:6 ವರ್ಷ
ಈಕೆಯನ್ನು ಸೈಕಲ ಮೇಲೆ ಕರೆದುಕೊಂಡು ಹೋಗಿ ಅವಳಿಗೆ ಹೋಡಿಬಡಿ ಮಾಡಿ ಬಲತ್ಕಾರ ಹಟ ಸಂಭೋಗ ಮಾಡಿದರ
ಮೇಲಿಂದ ಬೇವೂರ ಠಾಣೆ ಗುನ್ನೆ ನಂ:49/2011 ಕಲಂ 323, 324, 325, 376 ಐಪಿಸಿ ನೇದ್ದರ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆಯಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು
ಸಲ್ಲಿಸಿದ್ದು, ಇದರಲ್ಲಿ
ಮಾನ್ಯ ನ್ಯಾಯಾಲಯವು ಆರೋಪಿತನಿಗೆ 11 ವರ್ಷ 6
ತಿಂಗಳು ಕಠಿಣ ಶಿಕ್ಷೆ ಮತ್ತು ರೂ.15,000/-ಗಳ ದಂಡ, ತಪ್ಪಿದ್ದಲ್ಲಿ
9 ತಿಂಗಳು ಸಾದಾ ಶಿಕ್ಷೆ ಹಾಗೂ ನೊಂದವರ ಶಿಕ್ಷಣ ವೆಚ್ಚ ಭರಿಸಲು ದಂಡದ ಮೊತ್ತ ನೀಡುವಂತೆ ತೀರ್ಪು
ಆಗಿರುತ್ತದೆ.
ಮಾರ್ಗದರ್ಶಕರಾದ ಶ್ರೀ. ಬಿ.ಎಸ್.ಪ್ರಕಾಶ, ಎಸ್.ಪಿ ಕೊಪ್ಪಳರವರು ಹಾಗೂ ಶ್ರೀ ಈಶ್ವರಚಂದ್ರ
ವಿದ್ಯಾಸಾಗರ, ಎಸ್.ಪಿ
ಕೊಪ್ಪಳರವರು ಹಾಗೂ ಶ್ರೀ. ವಿಜಯ.ಜಿ.ಡಂಬಳ ಡಿವೈ.ಎಸ್.ಪಿ ಕೊಪ್ಪಳ ಉಪವಿಭಾಗ ರವರ ನೇತೃತ್ವದಲ್ಲಿ
ತನಿಖಾಧಿಕಾರಿಗಳಾದ ಶ್ರೀ ಬಸವರಾಜ ಬಜಂತ್ರಿ ಸಿ.ಪಿ.ಐ ಯಲಬುರ್ಗಾ ವೃತ್ತ ಮತ್ತು ಶ್ರೀ
ಡಿ.ದುರ್ಗಪ್ಪಾ ಪಿ.ಎಸ್.ಐ ಬೇವೂರ ಠಾಣೆರವರು ಪ್ರಾಮಾಣೀಕ ತನಿಖೆ ಮಾಡಿ ಸದರಿ ಪ್ರಕರಣದಲ್ಲಿ
ಆರೋಪಿತರಿಗೆ ತ್ವರಿತ ನ್ಯಾಯಾಲಯದಲ್ಲಿ ಶಿಕಷೆ ಆಗುವಂತೆ ಮಾಡಿರುತ್ತಾರೆ. ಕೊಪ್ಪಳ ಜಿಲ್ಲೆಯ ಈ
ಮೇಲ್ಕಂಡ ಪ್ರಕರಣಗಳಲ್ಲಿ ಪೊಲೀಸ್ ಆಧಿಕಾರಿ ಹಾಗೂ ಸಿಬ್ಬಂದಿಯವರು ಉತ್ಕೃಷ್ಟ ಸೇವೆ ಸಲ್ಲಿಸಿ
ಪ್ರಾಮಾಣಿಕ ತನಿಖೆ ಮಾಡುವಲ್ಲಿ ಸಫಲರಾಗಿರುವದರಿಂದ ಇವರಿಗೆ ಇಲಾಖೆ ವತಿಯಿಂದ ಸೂಕ್ತವಾಗಿ
ಪುರಸ್ಕರಿಸಲಾಗುವುದು.
ಗೆ,
ಎಲ್ಲಾ ಪತ್ರಿಕೆಗಳ ಸಂಪಾದಕರಿಗೆ.
ದರೋಡೆ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:ಶ್ರೀಮತಿ, ಅನ್ನಪೂರ್ಣ ಗಂಡ ರಾಜೇಂದ್ರ ಬಿರಾದಾರ ಸಾ|| ಭಾಗ್ಯವಂತಿ ನಗರ ಗುಲಬರ್ಗಾ ರವರ ನಾನು ದಿನಾಂಕ 26/07/2012 ರಂದು 6-15 ಎ.ಎಂ.ಕ್ಕೆ ಮನೆಯಿಂದ ವಾಕಿಂಗ ಕುರಿತು ಹೊರಟು ರಸ್ತೆಯ ಮುಖಾಂತರ ರಾಮ ಮಂದಿರ ಶ್ರೀ ಗುರು ಕಾಲೇಜವರೆಗೆ ವಾಕಿಂಗ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ರಸ್ತೆಯ ಎಡಭಾಗದ ವೆಂಕಟೇಶ ಸರ್ವಿಸ್ ಸೆಂಟರ ಹತ್ತಿರದಲ್ಲಿ 7-15 ಎ.ಎಂ.ಕ್ಕೆ ನನ್ನ ಹಿಂದುಗಡೆಯಿಂದ ಒಬ್ಬ ವ್ಯಕ್ತಿ ಮೋಟಾರ ಸೈಕಲ್ ಬಂದವನೆ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿ ಇದ್ದ ಗಂಟಣ ಮಂಗಳಸೂತ್ರ ಎರಡು ಎಳೆಯದ್ದು ದಪ್ಪ ಕರಿಮಣಿ ಹವಳು ಎರಡು ತಾಳಿ ಇದ್ದ ಗುಂಡುಗಳು 6 ಇದ್ದ ಒಟ್ಟು 5,1/2 ತೊಲೆ ಬಂಗಾರದ ಮಂಗಳಸೂತ್ರ ಕೈ ಹಾಕಿ ಕಿತ್ತುಕೊಂಡಿದ್ದು, ನನ್ನ ಕುತ್ತಿಗೆಯ ಹತ್ತಿರ ತರಚಿದ ಗಾಯವಾಗಿರುತ್ತದೆ. ಸದರಿ ಮಂಗಳಸೂತ್ರ ಸುಮಾರು 1,50,000/- ರೂ ಬೇಲೆ ಬಾಳುವದಿದ್ದು, ಮೋಟಾರ ಸೈಕಲ್ ಮೇಲೆ ಇದ್ದ ವ್ಯಕ್ತಿ ರೇನಕೋಟ ತಲೆಗೆ ಟೋಪಿ ಹಾಕಿದ್ದು ಸುಮಾರು 30 ರಿಂದ 35 ವರ್ಷ ವಯಸ್ಸಿನಿರುತ್ತಾನೆ. ಸುಮಾರು 5,1/2 ತೊಲೆ ಇದ್ದು ಸುಮಾರು 1,50,000/- ರೂ ಬೇಲೆ ಬಾಳುವ ಮಂಗಳಸೂತ್ರ ಪತ್ತೆ ಹಚ್ಚಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.58/2012 ಕಲಂ.392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ವಿಶ್ವರಾಧ್ಯ ತಂದೆ ಲಿಂಗಣ್ಣ ಸತ್ಯಂಪೇಠ ವ|| 43, ಉ|| ಪತ್ರಕರ್ತ ಸಾ|| ಸತ್ಯಂಪೇಠ, ಹಾ|| ವ|| ಶಹಾಪೂರ, ಜಿಲ್ಲಾ|| ಯಾದಗಿರಿ ರವರು ನಮ್ಮ ತಂದೆಯಾದ ಲಿಂಗಣ್ಣ ಇವರಿಗೆ ಶ್ರಾವಣ ಮಾಸದ ನಿಮಿತ್ಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮವಿರುವದರಿಂದ ಅದರಲ್ಲಿ ಭಾಗವಹಿಸುವ ಕುರಿತು ದಿನಾಂಕ:25-07-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಶಹಾಪೂರ ದಿಂದ ಗುಲಬರ್ಗಾ ಬರುವ ಬಸ್ಸಿನಲ್ಲಿ ನನ್ನ ತಮ್ಮನಾದ ಸಂತೋಷನು ಇತನು ನಮ್ಮ ತಂದೆಗೆ ಕೂಡ್ರಿಸಿ ಕಳುಹಿಸಿದ್ದು, ರಾತ್ರಿ 8 ಗಂಟೆಯವರೆಗೆ ಗುಲಬರ್ಗಾಕ್ಕೆ ಬರದೇ ಇದ್ದುದ್ದರಿಂದ ಎಸ.ಬಿ ಕಾಲೇಜಿನ ಉಪನ್ಯಾಸಕರು ನನಗೆ ಫೋನ್ ಮಾಡಿ ನಿಮ್ಮ ತಂದೆಯವರು ಸದರಿ ಕಾರ್ಯಕ್ರಮಕ್ಕೆ ಬಂದಿರುವದಿಲ್ಲಾ ಅಂತ ತಿಳಿಸಿದರು. ನಾನು ನನ್ನ ತಂದೆಯ ಮೊಬೈಲ್ ನಂ 9480148016 ಮತ್ತು 7899148789 ನೇದ್ದವುಗಳಿಗೆ ಫೋನ್ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿತು. ಆದರೆ ಯಾರೂ ಮಾತಾಡಲಿಲ್ಲಾ. ಪುನಃ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ದಿನಾಂಕ 26-07-2012 ರಂದು ಮದ್ಯಾಹ್ನ 12 ಗಂಟೆಗೆ ನಾನು ಗುಲಬರ್ಗಾ ನಗರದ ಸೂಪರ್ ಮಾರ್ಕೆಟನಲ್ಲಿರುವಾಗ ನನ್ನ ತಮ್ಮ ಶಿವರಂಜನ್ ಈತನು ಫೋನ್ ಮಾಡಿ ತಂದೆಯವರು ಶರಣಬಸವೇಶ್ವರ ದೇವಸ್ಥಾನದ ನಾಲೆಯಲ್ಲಿ ಬಿದ್ದಿದ್ದು, ನೀನು ತಕ್ಷಣ ಬರಬೇಕು ಅಂತ ತಿಳಿಸಿದಾಗ, ನಾನು ಸ್ಥಳಕ್ಕೆ ಹೋಗಿ ನೋಡಲು, ಯಾರೋ ದುಷ್ಕರ್ಮಿಗಳು ನಮ್ಮ ತಂದೆ ಲಿಂಗಣ್ಣ ತಂದೆ ಗುರಪ್ಪ ಸತ್ಯಂಪೇಠ ಇವರಿಗೆ ಕೊಲೆ ಮಾಡಿ ಗುರುತು ಸಿಗದ ಹಾಗೆ ನಾಲೆಯಲ್ಲಿ ಬಿಸಾಕಿದ್ದು ಇರುತ್ತದೆ. ಮೃತನು ಪತ್ರಕರ್ತನಾಗಿದ್ದು, ಆತನ ಬರವಣಿಗೆ ಚಾಟಿ ಏಟಿನಿಂದ ತಾಳದೇ ಮತಾಂದರು ಈ ಕೃತ್ಯ ಮಾಡಿರಬಹುದು ಅವರುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 55/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment