Police Bhavan Kalaburagi

Police Bhavan Kalaburagi

Tuesday, August 7, 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶಿವಬಾಯಿ ಗಂಡ ಧರ್ಮಣ್ಣ ದೊಡ್ಡಮನಿ ಸಾ: ಜೇವರ್ಗಿ ರವರು ನಾನು  ಮತ್ತು ನನ್ನ ಮಗನಾದ ಬಸವರಾಜ, ಸೊಸೆಯಾದ ಭಾಗ್ಯಶ್ರೀ, ಮಗಳಾದ ಶ್ರೀದೇವಿ, ಹಾಗೂ ಅವಳ ಗಂಡನಾದ ಅಯ್ಯಣ್ಣ ತಂದೆ ಮರಗಪ್ಪ ಎಲ್ಲರೂ ಕೂಡಿ ಮನೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಶಹಾಬಾದ ಪಟ್ಟಣಕ್ಕೆ ದಿನಾಂಕ:01-08-2012 ರಂದು ರಕ್ಷಾ ಬಂದನ ಹುಣ್ಣಿಮೆ ಇದ್ದ  ಪ್ರಯುಕ್ತ ಹೋಗಿರುತ್ತೆವೆ. ನಾವೆಲ್ಲರೂ ಮರಳಿ ಜೇವರ್ಗಿಗೆ ಬಂದು ನೋಡಲಾಗಿ ಮನೆಯಲ್ಲಿದ್ದ ಆಲಮಾರಿಯಲ್ಲಿಟ್ಟಿದ್ದ ನಗದು ಹಣ 13,000/- ರೂ, 7 ಗ್ರಾಂ ಬಂಗಾರದ ಬೋರಾಮಳ ಸರ ಅಂ.ಕಿ. 18,000/- ರೂ, 5 ಗ್ರಾಂ ಬಂಗಾರದ ಜೀರಾಮಣಿ ಅ.ಕಿ:14,000/- ರೂ 5 ಗ್ರಾಂ ಬಂಗಾರದ ಲಾಕೇಟ ಅಕಿ|| 14,000/- ರೂ, 3 ಗ್ರಾಂ ಕಿವಿಯಲ್ಲಿನ ಹೂವು ಅಕಿ||5,000/- ರೂ ತಲಾ ಒಂದು ಗ್ರಾಮ್  5 ಬಂಗಾರದ ಉಂಗುರುಗಳು ಅಕಿ|| 14,000/- ರೂ ಮೌಲ್ಯದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 115/2012 ಕಲಂ 454, 457, 480 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: