Police Bhavan Kalaburagi

Police Bhavan Kalaburagi

Wednesday, August 8, 2012

GULBARGA DISTRICT REPORTED CRIME

ಮಹಿಳೆ ಕಾಣೆಯಾದ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಮಹ್ಮದ ಶಫೀಕ ತಂದೆ ನಬೀಸಾಬ ಬಿಯಾಬಾನಿ  ಸಾ|| ಭೀಮಳ್ಳಿ ತಾ|| ಜಿ|| ಗುಲಬರ್ಗಾ ರವರು ನಾನು ಮತ್ತು ನಮ್ಮ ತಂದೆ ನಬಿಸಾಬ  ದಿನಾಂಕ 01-08-2012 ರಂದು ಬೆಳಿಗ್ಗೆ 9-00 ಗಂಟೆಗೆ ಹೊಲಕ್ಕೆ ಹೋಗಿದ್ದು, ಮನೆಯಲ್ಲಿ ನನ್ನ ಹೆಂಡತಿ ಗೌಸಿಯಾಬೀ, ತಾಯಿಯಾದ  ಖೈರುನಬೀ ಮನೆಯಲ್ಲಿ ಇದ್ದರು. ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನನ್ನ ಹೆಂಡತಿ  ಗೌಸಿಯಾಬೀ ಇವಳು ಊರಲ್ಲಿ ಇರುವ ತನ್ನ ಅತ್ತೆ ಹಸೀನಾಬೀ ಇವರ ಮನೆಗೆ ಹೊಲಿಯುವ ಬಟ್ಟೆ ಕತ್ತರಿಸಿಕೊಂಡು ಬರುತ್ತೇನೆ. ಅಂತಾ ಹೇಳಿ ಮನೆಯಿಂದ ಹೋದವಳು ಮನೆಗೆ ಬಂದಿರುವುದಿಲ್ಲಾ. ಎಲ್ಲಾ ಕಡೆ ಹುಡಕಾಡಿದರು ಪತ್ತೆ ಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 257/2012 ಕಲಂ ಮಹಿಳೆ ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

No comments: