Police Bhavan Kalaburagi

Police Bhavan Kalaburagi

Tuesday, August 7, 2012

GULBARGA DISTRICT

ಮನೆಗಳ್ಳನ ಬಂದನ,
2.5 ಲಕ್ಷ ರೂಪಾಯಿ ಮೌಲ್ಯಗಳ ಬಂಗಾರ, ಬೆಳ್ಳಿ ಆಭರಣ ವಶ.
ಮಾನ್ಯ ಶ್ರೀ ಪ್ರವೀಣ ಮಧುಕರ ಪವಾರ ಎಸ್.ಪಿ ಗುಲಬರ್ಗಾ,ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ. ಗುಲಬರ್ಗಾ, ಮತ್ತು ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ದಿನಾಂಕ:06-0-8-2012ರಂದು ಗುಲಬರ್ಗಾ ನಗರದ ಆರ್.ಟಿ.ಓ ಕ್ರಾಸ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಕುಖ್ಯಾತ ಮನೆ ಕಳ್ಳತನ ಮಾಡುವ ಕಳ್ಳನನ್ನು ಬಂದಿಸಿ,ಆತನಿಂದ ಎಮ್.ಬಿ ನಗರ ಪೊಲೀಸ ಠಾಣೆ ವ್ಯಾಪ್ತಿಯ ಸ್ವಸ್ತಿಕ ನಗರ ಬಡಾವಣೆಯ ಮನೆಯಲ್ಲಿ ಕಳ್ಳತನ ಮಾಡಿದ ಬಂಗಾರದ ಮತ್ತು ಬೆಳ್ಳಿ ಆಭರಣಗಳು, ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ,ಶ್ರೀ ಪಂಡಿತ ಸಗರ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ,ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಂ.ಬಿ ನಗರ ಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಗುರುಶರಣ ಹೆಚ್.ಸಿ, ಶಿವಪುತ್ರಸ್ವಾಮಿ ಹೆಚ್.ಸಿ, ಶ್ರೀ ಶ್ರೀನಿವಾಸರೆಡ್ಡಿ ಪಿಸಿ, ಸಿದ್ರಾಮಯ್ಯಸ್ವಾಮಿ ಪಿಸಿ, ಅಶೋಕ ಪಿಸಿ, ಅರ್ಜುನ ಎ.ಪಿ.ಸಿ, ಪ್ರಭಾಕರ ಪಿಸಿ, ಚಂದ್ರಕಾಂತ ಪಿಸಿ, ವೇದರತ್ನಂ ಪಿಸಿ, ಶಂಕರ ಹೆಚ್.ಸಿ, ರವರು ದಾಳಿ ಮಾಡಿ  ಮನೆ ಕಳವು ಮಾಡಿದ ಅರವಿಂದ ತಂದೆ ಶಾಹೀರ ಉಪಾಧ್ಯಾಯ ವಯಃ 25 ವರ್ಷ ಉಃ ಬೇಕಾರ ಜಾತಿಃ ಮಂಗರವಾಡಿ ಸಾಃ ಬಾಪು ನಗರ ಮಂಗಾರವಾಡಿ ಗಲ್ಲಿ ಗುಲಬರ್ಗಾ ಇತನನ್ನು ವಿಚಾರಣೆಗೆ ಒಳಪಡಿಸಿದಾಗ, ಸುಮಾರು 8 ದಿವಸಗಳ ಹಿಂದೆ ಗುಲಬರ್ಗಾ ನಗರದ ಸ್ವಸ್ತಿಕ ನಗರದಲ್ಲಿ ಬೀಗ ಹಾಕಿದ ಮನೆಯ ಬಾಗಿಲ ಕಿಲಿಕೈಯನ್ನು ಮುರಿದು ಅಲಮಾರಿಯಲ್ಲಿದ್ದ ಸುಮಾರು 2.5ಲಕ್ಷ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಳವು ಮಾಡಿಕೊಂಡಿದ್ದನ್ನು ಜಪ್ತಿ ಮಾಡಿಕೊಂಡು ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

No comments: