Police Bhavan Kalaburagi

Police Bhavan Kalaburagi

Tuesday, August 7, 2012

GULBARGA DISTRICT

ನಿಧಿಗಾಗಿ ಆಸೆಗಾಗಿ ಮಹಾವೀರ ಜೈನ ತಿರ್ಥಂಕರ್ ಮೂರ್ತಿಯನ್ನು ದ್ವಂಸ ಮಾಡಿದ ಆರೋಪಿತರ ಬಂದನ;
ಮಾನ್ಯ ಜಿಲ್ಲಾ ಪೊಲೀಸ ಅಧೀಕ್ಷಕರಾದ ಶ್ರೀ ಪ್ರವೀಣ ಪಧುಕರ ಪವಾರ ಐಪಿಎಸ್ ಗುಲಬರ್ಗಾ ರವರು ಮತ್ತು ಅಪರ ಜಿಲ್ಲಾ ಪೊಲೀಸ ಅಪರ್ ಪೊಲೀ್ಸ ಅಧೀಕ್ಷಕರಾದ ಶ್ರೀ ಕಾಶೀನಾಥ ತಳಕೇರಿ ರವರು ಹಾಗು ಶಹಾಬಾದ ಪೊಲೀಸ ಉಪಾಧೀಕ್ಷಕರಾದ ಶ್ರೀ,ಎಂ.ವಿ.ಸೂರ್ಯವಂಶಿರವರ ಮೇಲ್ವಿಚಾರಣೆಯಲ್ಲಿ ಚಿತ್ತಾಪೂರ ಸಿಪಿಐ ಶ್ರೀ ಚಂದ್ರಕಾಂತ ಪೂಜಾರಿ ಮತ್ತು ಪಿ.ಎಸ್.ಐ ರವರುಗಳಾದ ಶ್ರೀ ಸೋಮಶೇಖರ ಕೆಂಚರಡ್ಡಿ ಮತ್ತು ವಾಡಿ ಪೊಲೀಸ ಠಾಣೆಯ ಪಿ.ಎಸ್.ಐ ಶ್ರೀ ಶ್ರೀಮಂತ ಇಲ್ಲಾಳ ಹಾಗು ಸಿಬ್ಬಂದಿರವರೊನ್ನೊಳಗೊಂಡ ತಂಡವನ್ನು ರಚಿಸಿ, ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ದಿ.25/26-07-2012 ರಂದು ರಾತ್ರಿ ಚಿತ್ತಾಪೂರ ತಾಲೂಕಿನ ಅಲ್ಲುರ(ಬಿ) ಗ್ರಾಮದ ಜೈನ ಸಮುದಾಯಕ್ಕೆ ಸೇರಿದ ಪಾರ್ಶ್ವನಾಥ ಬಸದಿಯಲ್ಲಿನ ಮಹಾವಿರ ಜೈನರವರ ಕಲ್ಲಿನ ಮೂರ್ತಿಯನ್ನು ಅಪರಿಚಿತ ನಿಧಿಗಳ್ಳರು ನಿಧಿ ಆಸೆಗಾಗಿ ಒಡೆದು ದ್ವಂಸಗೊಳಿಸಿದ್ದರಿಂದ ಶ್ರೀ ರಾಮಣ್ಣ ಕೆ.ನಾಟೀಕರ ಗ್ರಾಮ ಪಂಚಾಯತ ಅಧ್ಯಕ್ಷರು ಅಲ್ಲೂರ(ಬಿ) ರವರು ದೂರು ಸಲ್ಲಿಸಿದ ಮೇರೆಗೆ ಚಿತ್ತಾಪೂರ ಠಾಣೆ ಗುನ್ನೆ ನಂ.72/2012 ಕಲಂ.295 ಐಪಿಸಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿಯ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣದಲ್ಲಿ ಭಾಗಿಯಾದ ದುರ್ಜನಪ್ಪ ತಂದೆ ದೇವಿಂದ್ರಪ್ಪ ಗಮಗಾನವರ,ಮೋನಪ್ಪ ತಂದೆ ಶರಣಪ್ಪ ಚಾಮನವರ,ದೇವಿಂದ್ರಪ್ಪ ಬೋಗೋಣಿ ಸಾ|| ಆಲ್ಲೂರ(ಬಿ) ಮತ್ತು ಕಾಸೀಮ ತಂದೆ ಮಹೆಬೂಬಸಾಬ ಖುರೇಸಿ ಸಾ||ಡೊಣಗಾಂವ ರವರನ್ನು ಬಂದಿಸಿ ಅಪರಾಧ ಕೃತ್ಯಕ್ಕೆ ಬಳಸಿದ ಉಳಿ (ಛನ್ನಿ)ಮತ್ತು ಹ್ಯಾಮರ (ಸುತ್ತಿಗೆ) ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.ಇನ್ನೂಳಿದ ಆರೋಪಿತರ ಪತ್ತೆ ಕುರಿತು ಶೋದನೆ ಕಾರ್ಯ ಜಾರಿಯಲ್ಲಿದೆ.

No comments: