ದಿನಂಪ್ರತಿ ಅಪರಾಧಗಳ
ಮಾಹಿತಿ ದಿನಾಂಕ: 27-10-2012
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 246/2012 ಕಲಂ 279, 338 ಐ.ಪಿ.ಸಿ.
ಜೊತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ 26/10/2012 ರಂದು 12:20 ಗಂಟೆಗೆ
ಫಿರ್ಯಾದಿ ಶ್ರೀ ನೇಮಿನಾಥ ತಂದೆ ಪದ್ಮಣ್ಣಾ ಬೆಳಕೆರಿ 75 ವರ್ಷ ಸಾ/ ಕಮಠಾಣ ತಾ/ಜಿ/ ಬೀದರ ಇವರು ತಮ್ಮ ಬಸವ ನಗರದಲ್ಲಿ ಇರುವ ಮನೆಯಿಂದ
ನಡೆದುಕೊಂಡು ವಿದ್ಯಾನಗರ ಕಾಲೋನಿಯಲ್ಲಿ ಇರುವ ಭಾಂಡೆ ಅಗಂಡಿಗೆ ಬಸವ ಟಾವರ ಹತ್ತಿರ ದಿಂದ
ಹೊಗುತ್ತಿದ್ದಾಗ, ಅದೇ ಸಮಯಕ್ಕೆ ಬೀದರ ಬೊಮ್ಮಗೊಂಡೇಶ್ವರ ವೃತ್ತದ ಕಡೆಯಿಂದ ಒಬ್ಬ ಮೋಟಾರ
ಸಐಕಲ ನಂ ಕೆಎ38ಎಲ್2975 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ವೇಗವಾಗಿ, ದುಡಕಿನಿಂದ
ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕಿ ಹೊಡೆದು ಭಾರಿಗಾಯ ಪಡಿಸಿ
ಅರೋಪಿಯು ಅಪಘಾತ ಸ್ಥಳದಲ್ಲಿ ಮೋಟಾರ ಸೈಕಲ ಬಿಟ್ಟು ಓಡಿ ಹೊಗಿರುತ್ತಾನೆ. ಅಂತ ಫಿರ್ಯಾದಿಯ ಮೌಖಿಕ
ಹೇಳಿಕೆಯನ್ನು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ
ತನಿಖೆ ಕೈಕೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 90/2012 ಕಲಂ 279, 337
ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 26-10-2012 ರಂದು 0130 ಗಂಟೆಗೆ
ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಿಂದ ಮಾಹಿತಿ ಸ್ವಿಕರಿಸಿಕೊಂಡು ಬಸವಕಲ್ಯಾನ ಸರ್ಕಾರಿ ಆಸ್ಪತ್ರೆಗೆ
0230 ಗಂಟೆಗೆ ಬೇಟ್ಟಿ ನೀಡಿ ಗಾಯಾಳು ನಾಗೇಶ ತಂದೆ ಬಾಬುರಾವ ಚಿಲಿ ರವರು ಹೇಳಿಕೆ ಕೊಟ್ಟ
ಸಾರಾಂಶವೆನೆಂದರೆ ಕಮಲಾಪೂರ ಬಸ್ಸ ನಿಲ್ದಾಣದ ಹತ್ತೀರ ಕಲ್ಲಖೋರಕ್ಕೆ ಹೋಗುವ ಅಪ್ಪಿ ಅಟೋ
ನೇದರಲ್ಲಿ ಕುಳಿತುಕೊಂಡು ಹೊಗುತ್ತಿರುವಾಗ ಆಟೋ ಚಾಲಕ ಜಗನಾಥ ತಂದೆ ಮಲ್ಲಶೇಟ್ಟೆಪ್ಪಾ ಇವನು ತನ್ನ
ಆಟೋವನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸತೀಶ ದಂದಗೀರಿ ರವರ ಕಿರಾಣಾ
ಅಂಗಡಿಯ ಹತ್ತಿರ ಮುಡಬಿ -ಕಮಲಾಪೂರ ರೋಡಿನ ಮೇಲೆ ಒಮ್ಮೇಲೆ ಕಟ್ಟ ಹೊಡೆದ್ದಾಗ ನಿಯಂತ್ರನ ತಪ್ಪಿ
ಪಲ್ಟಿ ಹೊಡೆದಿರುತ್ತದೆ ಅಂತ ಕೊಟ್ಟ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 177/2012 ಕಲಂ 279, 337,
338
ಐಪಿಸಿ ಜೋತೆ 187 ಐಎಂವಿ ಕಾಯ್ದೆ :-
ದಿನಾಂಕ : 26/10/2012 ರಂದು ಫಿರ್ಯಾದಿ
ಶ್ರೀ. ಸುನೀಲ ಕುಮಾರ ತಂದೆ ಮಧುಕರರಾವ ಸಪಾಟೆ ವಯ :20ವರ್ಷ ಜಾ :ಮರಾಠ ಸಾ;ಅಹಮದಬಾದ ಮತ್ತು ಅವರ ಗ್ರಾಮದ ಕೃಷ್ಣಾ ತಂದೆ ಸಂಬಾಜಿರಾವ ಕರಡ್ಯಾಳೆ
ಹಾಗೂ ಭಾಲ್ಕಿಯ ಸಲ್ಮಾನ ತಂದೆ ಗುಲಾಮ ರಸುಲ ಪಟೇಲ ಎಲ್ಲರು ಕುಡಿಕೊಂಡು ಸಲ್ಮಾನ ಪಟೆೇಲ ಇತನ
ಹೊಂಡಾ ಯೂನಿಕಾರ್ನ ಮೋಟಾರ ಸೈಕಲ ನಂ ; ಕೆಎ-39-ಜೆ-2713 ನೇದರ ಮೇಲೆ ಹುಮನಾಬಾದ
ಶಕುಂತಲಾ ಪಾಠೀಲ ಡಿಪ್ಲೋಮಾ ಇಂಜನಿಯರಿಂಗ ಕಾಲೇಜಿಗೆ ವಿದ್ಯೆಭ್ಯಾಸಕ್ಕೆ ಹೊಗುತ್ತಿರುವಾಗ 0920 ಗಂಟೆಗೆ
ಭಾಲ್ಕಿ -ಹುಮನಾಬಾದ ರಸ್ತೆ ಮೇಲೆ ವಿನೋದಕುಮಾರ ಜಾಧವ ರವರ ಹೊಲದ ಹತ್ತಿರ ಕಲವಾಡಿ ಸಮೀಪ ಬಂದಾಗ
ಎದುರಿನಿಂದ ಅಂದರೆ ಹುಮನಾಬಾದ ಕಡೆಯಿಂದ ಕಂಟೆನರ ಟರಬೊ ಲಾರಿ ನಂ : ಕೆಎ-25-ಸಿ-5487 ನೇದರ ಚಾಲಕ
ತನ್ನ ಲಾರಿ ಅತಿ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮತ್ತು ಆತನ
ಗೆಳೆಯರು ಹೊಗುತ್ತಿದ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ಕಂಟೆನರ ಲಾರಿ ಸಥಳದಲಿಯೆ ಬಿಟ್ಟು
ಓಡಿ ಹೊಗಿರುತ್ತಾನೆ ಸದರಿ ಡಿಕ್ಕಿಯಿಂದ ಫಿರ್ಯಾದಿ ಹಾಗೂ ಆತನ ಗೆಳೆಯರು ರಸ್ತೆಯ ಮೇಲೆ
ಬಿದ್ದಿರುತ್ತಾರೆ ಪಿಯರ್ಾದಿಗೆ ಬಲ ಮೊಳಕಾಲ ಮೇಲೆ ಭಾರಿ ರಕ್ತಗಾಯ, ಬಲಗೈ ಮೇಲೆ
ಗುಪ್ತಗಾಯ ಆಗಿರುತ್ತದೆ. ಫಿರ್ಯಾದಿಯ ಹಿಂದೆ ಕುಳಿತ ಕೃಷ್ಣಾ ಇತನಿಗೆ ಬಲಗಾಲ ಮೊಳಕಾಲ ಡೆಬ್ಬಿಯ
ಮೆಲೆ ರಕ್ತಗಾಯ, ಎರಡು ಮುಂಗೈ ಮೆಲೆ ಗುಪ್ತಗಾಯವಾಗಿ ಮುರಿದಿರುತ್ತವೆ, ಬಲ
ಬುಜದ ಮೇಲೆ ಗುಪ್ತಗಾಯ, ಬಲ ಗಲ್ಲದ ಮೆಲೆ ತರಚಿದ ರಕ್ತಗಾಯ, ಹಣೆಯ ಮೆಲೆ
ತರಚಿದ ರಕ್ತಗಾಯ ಆಗಿರುತ್ತದೆ. ಮತ್ತು ಮೋಟಾರ ಸೈಕಲ ನಡೆಸುತ್ತಿದ್ದ ಸಲ್ಮಾನ ಪಟೇಲ ಇತನಿಗೆ
ಯಾವುದೆ ಗಾಯ ಆಗಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 105/2012 ಕಲಂ 279,
337,
338,
304
(ಎ) ಐ.ಪಿ.ಸಿ :-
ದಿನಾಂಕ 26/10/2012 ರಂದು 0705 ಗಂಟೆಗೆ
ರಾ. ಹೆ. ನಂ. 9 ರ ಮೇಲೆ ಗಂಡಿ ದರ್ಗಾದ ಹತ್ತಿರ ತಂಗರಾಜು ತಂದೆ ವರದರಾಜು ಉಃ ಮಹೀಂದ್ರ ಝಲೋ ಕಾರ
ನಂ. ಎಪಿ-10 ಎ.ಆರ.-3000 ನೇದ್ದರ ಚಾಲಕ ಸಾಃ ಚಂದ್ರಮ್ಮಾ ನಗರ ಯಲ್ಲಮ್ಮಾ ಬಂಡಾ ಕುಕಟಪಲ್ಲಿ
ಹೈದ್ರಬಾದ ಈತನು ತನ್ನ ಮಹೀಂದ್ರ ಝಲೋ ಕಾರ ನಂ. ಎಪಿ-10
ಎ.ಆರ-3000 ನೇದನ್ನು ಸಿರಡಿಯಿಂದ ಹೈದ್ರಬಾದ ಕಡೆಗೆ ತನ್ನ ಹೆಂಡತಿ ಮಕ್ಕಳು ಮತ್ತು ತಮ್ಮನ ಮತ್ತು
ಆತನ ಹೆಂಡತಿ ಮಕ್ಕಳು ಹಾಗು ಸಂಬಂಧಿಕರು ಕುಳಿತುಕೊಂಡು ಹೋಗುತ್ತಿರುವಾಗ ಚಾಲಕ ಮೃತ ತಂಗರಾಜು
ಇವನು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವಾಹನದ ಹಿಡಿತ
ತಪ್ಪಿ ರೊಡಿನ ಬಲಭಾಗಕ್ಕೆ ಪಲ್ಟಿ ಮಾಡಿದರಿಂದ ಚಾಲಕನಾದ ತಂಗರಾಜು ಮೃತಪಟ್ಟು ಅದರಲ್ಲಿದ್ದವರಿಗೆ
ಸಾದ ಹಾಗು ಭಾರಿ ರಕ್ತಗಾಯಗಳು ಆಗಿದ್ದು ಇರುತ್ತದೆ. ಅಂತಾ ಕೊಟ್ಟ ಫಿರ್ಯಾದಿ ಸಾರಂಶದ ಮೇರೆಗೆ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಔರಾದ ಪೊಲೀಸ ಠಾಣೆ ಗುನ್ನೆ ನಂ.
100/2012 ಕಲಂ 457, 380 ಐಪಿಸಿ :-
ದಿನಾಂಕ: 26/10/2012 ರಂದು 0920
ಗಂಟೆಗೆ ಶ್ರೀ ಬಬನ ತಂದೆ ಪ್ರಲ್ಹಾದರಾವ ಉಪಾಸೆ ಸಾ: ಎಕಂಬಾ ರವರು ಠಾಣೆಗೆ ಹಾಜರಾಗಿ ದೂರ ಕೊಟ್ಟ
ಸಾರಾಂಶವೆನೆಂದರೆ ದಿನಾಂಕ: 22/10/2012 ರಂದು ಮುಂಜಾನಿ ಫಿಯರ್ಾಧಿಯು ತನ್ನ ಅಂಗಡಿಗೆ ಬಂದು ನೋಡಲು
ಗಲ್ಲದಲ್ಲಿನ ನಗದು ರೂಪಾಯಿ 3000/- ಇರದ ಕಾರಣ ಯಾರೋ ಕಳವು ಮಾಡಿಕೊಂಡು ಹೋಗಿರಬಹುದು ಅಂತ
ತಿಳಿದು ಅಂದು ದೇವದ ದರ್ಶನಕ್ಕೆ ತುಳಜಾಪೂರಕ್ಕೆ ಹೋಗುವುದು ಅವಶ್ಯಕತೆ ಇದ್ದರಿಂದ ತುಳಜಾಪೂರಕ್ಕೆ
ಹೋಗಿ ಮರಳಿ ದಿನಾಂಕ : 23/10/2012 ರಂದು ಬಂದು ಗ್ರಾಮದ ಕಿಶೋರ ತಂದೆ ಧನಾಜಿ ಜಾಧವ ಇತನಿಗೆ
ಸಂಶಯದ ಮೇರೆಗೆ ವಿಚಾರಣೆ ಮಾಡಲು ಅವನು ದಿನಾಂಕ : 22/10/2012 ರಂದು ನಸುಕಿನ 4 ಗಂಟೆಯ
ಸುಮಾರಿಗೆ ತಾನು ಹಾಗು ತುಕಾರಾಮ ಕೋಳಿ ಮತ್ತಿ ಗೋವಿಂದ ಪರಪೆ 3 ಜನರು ಕೂಡಿ ಅಂಗಡಿಯಲ್ಲಿನ ಹಣ
ಕಳವು ಮಾಡಿರುತ್ತೇವೆ ಅಂತ ಒಪ್ಪಿಕೊಂಡಿದ್ದು, ಈ ಬಗ್ಗೆ ಗ್ರಾಮದ ಅರವಿಂದ ಪಾಟೀಲ ರವರ
ಮನೆಯಲ್ಲಿ ವಿಚಾರಣೆಗೆ 3 ಜನರಿಗೆ ಕರೆಸಿದ್ದು ಮತ್ತು ಪೊಲೀಸರಿಗು ಸಹ ಮಾಹಿತಿ ನೀಡಿದ್ದರಿಂದ,
ಪೊಲೀಸರು
ಬಂದು ವಿಚಾರಣೆ ಮಾಡಿದ್ದು ಗ್ರಾಮದ ಪ್ರಮುಖರು ಮತ್ತು ಅರವಿಂದ ಪಾಟೀಲ ರವರು ಹುಡುಗರು
ಚಿಕ್ಕಿವರಿದ್ದು ಅವರ ತಂದೆ ತಾಯಿಗೆ ವಿಚಾರಿಸಿ ನಾಳೆ ಟಾಣೆಗೆ ತಂದು ತಮ್ಮ ಮುಂದೆ ಹಾಜರು
ಪಡಿಸುತ್ತೆವೆ ಈಗ ಇಲ್ಲೆ ಬಿಟ್ಟು ಹೋಗಿರಿ ಮತ್ತು ನಾಳೆ ಠಾಣೆಗೆ ಹಾಜರಾಗಿ ದಊರು ನೀಡುತ್ತೆವೆ
ಅಂತ ಇದ್ದ ರಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಔರಾದ ಪೊಲೀಸ ಠಾಣೆ ಗುನ್ನೆ ನಂ. 101/2012 ಕಲಂ 143, 323,
355,
341,
504
ಜೊತೆ 149 ಐಪಿಸಿ :-
ದಿನಾಂಕ: 22/10/2012 ರಂದು ಫಿರ್ಯಾದಿ
ಅಶೋಕ ತಂದೆ ನಿರ್ವತಿರಾವ ಪರಪೆ ಸಾ: ಎಕಂಬಾ ರವರ ಮಗ ಗೋವಿಂದ ಹಾಗೂ ಕಿಶೋರ ತಂದೆ ಧನಾಜಿ ಜಾಧವ
ಮತ್ತು ತುಕಾರಾಮ ಕೋಳಿ ರವರು ಬಬನ ತಂದೆ ಪ್ರಲ್ಹಾದ ರಾವ ಉಪಾಸೆ ರವರ ಕಿರಾಣಿ ಅಂಗಡಿಯಲ್ಲಿನ
ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ದಿನಾಂಕ: 25/10/2012 ರಂದು 3 ಜನರಿಗೆ
ಹಿಡಿದಿದ್ದು, ಹಾಗೂ ರಾತ್ರಿ 8 ಗಂಟೆಯ ಸುಮಾರಿಗೆ ಆರೋಪಿತರು ಗೋವಿಂದ ಈತನಿಗೆ ಕೈಯಿಂದ
ಚಪ್ಪಲಿಯಿಂದ ಹೊಡೆಬಡೆ ಮಾಡಿ ಅಲ್ಲಿಂದ ಅರವಿಂದ ಪಾಟೀಲ ರವರ ಮನೆಯಲ್ಲಿ ಪಂಚಾಯಿತಿಗೆ ಕೂಡಿಸಿ
ಮತ್ತು ಪೊಲೀಸ್ರಿಗು ಸಹ ಮಾಹಿತಿ ನಈಡಿದರಿಂದ ಪೊಲೀಸರು ಬಂದು ವಿಚಾರಣೆ ಮಾಡಿದ್ದು ಗ್ರಾಮದ
ಪ್ರಮುಖರು ಮತ್ತು ಅರವಿಂದ ಪಾಟೀಲ ರವರು ಹುಡುಗರು ಚಿಕ್ಕವರಿದ್ದು ಅವರ ತಂದೆ ತಾಯಿಗೆ ವಿಚಾರಿಸಿ
ನಆಳೆ ಠಾಣೆಗೆ ತಂದು ತಮ್ಮ ಮುಂದೆ ಹಾಜರು ಪಡಿಸುತ್ತೇವೆ ಈಗ ಅವರಿಗೆ ಇಲ್ಲೆ ಬಿಟ್ಟು ಹೋಗಿರಿ ಅಂತ
ಹಾಗೂ ನಾಳೆ ಠಾಣೆಗೆ ಹಾಜರಾಗಿ ದೂರು ನೀಡುತ್ತೆವೆ ಅಂತ ತಿಳಿಸಿದ ನಂತರ ದಿನಾಂಕ: 25/10/2012 ರಂದು
ರಾತ್ರಿ 1030 ಗಂಟೆಗೆ ಗೋವಿಂದ ಈತನು ಮನೆಗೆ ಬರುವಾಗ ಅರವಿಂದ ಪಾಟೀಲ ರವರ ಮನೆಯ ಹತ್ತಿರ ಬಬನ
ಈತನು ಅಕ್ರಮ ತಡೆಮಾಡಿ ಕೈಯಿಂದ ಬೆನ್ನಲ್ಲಿ ಹೊಡೆದು ಅವಾಚ್ಯವಾಗಿ ಬೈದಿದ್ದು ಮತ್ತು ಕಳವು ಮಾಡಿದ
ಹಣ ಕೊಡು ಅಂತ ಜಗಳ ಮಾಡಿದ ಅಲ್ಲದೆ ದಿನಾಂಕ 25/10/2012 ರಿಂದ ದಿನಾಂಕ: 26/10/2012 ರ
ಮುಂಜಾನೆ 8 ಗಂಟೆಯ ಸುಮಾರಿಗೆ ಗೋವಿಂದ ಈತನು ತನ್ನ ಹೊಲದಲ್ಲಿ ಬೆಳೆಗೆ ಹೊಡೆಯುವ ಔಷದಿ ಕುಡಿದಿರುತ್ತಾನೆ
ಅಂತ ಕೊಟ್ಟ ಸಾರಂಶದ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 202/2012 ಕಲಂ 435 ಐಪಿಸಿ :-
ದಿನಾಂಕ 26/10/2012 ರಂದು ಮುಂಜಾನೆ 0800
ಗಂಟೆಗೆ ಫಿರ್ಯಾದಿ ಮನೆಯಲ್ಲಿದ್ದಾಗ ತನ್ನ ಪಾಲಿಗೆ ಬಂದ ಮತ್ತು ತನ್ನ ತಮ್ಮ ಸತೀಷ ಈತನ ಪಾಲಿಗೆ
ಬಂದ ಹೊಲದಲ್ಲಿ ಎರಡು ಸೊಯಾಬಿನ್ ಭಣಮೆಗೆ ಬೆಂಕಿ ಹತ್ತಿ ಸುಡುತ್ತಿದೆ ಅಂತ ಮಾಹಿತಿ ಗೊತ್ತಾಗಿ
ಹೊಲಕ್ಕೆ ಹೋಗಿ ನೋಡಲು ಎರಡು ಸೊಯಾಬಿನ್ ಭಣಮೆಗಳು ದಿನಾಂಕ 25-10-2012 ರಂದು ರಾತ್ರಿ
ವೇಳೆಯಲ್ಲಿ ಯಾರೋ ಕಿಡಿಗೆಡಿಗಳು ಬೆಂಕಿ ಹಚ್ಚಿ ಸುಟ್ಟು ನಷ್ಟ ಮಾಡಿದ್ದು ಅಂದಾಜು 1 ಲಕ್ಷ
ರೂಪಾಯಿ ನಷ್ಟ ಆಗಿರುತ್ತದೆ ಈ ಬಗ್ಗೆ ಫಿರ್ಯಾದಿ ಹೊಲದ ಪಕ್ಕದ ಹೊಲದವರಾದ ಶಿವಾಜಿ ತಂದೆ ಕಡಾಜಿ
ಹುಲಸೂರೆ ಜಾತಿ: ಮರಾಠಾ ಸಾ: ಮೇಹಕರ ಇವರ ಮತ್ತು ಫಿರ್ಯಾದಿ ಮಧ್ಯೆ ಇದ್ದ ಹೊಲದ ಕಟ್ಟೆಯ ಸಂಬಂಧ
ಕಳೆದ ವರ್ಷ ತಕರಾರು ಆಗಿದ್ದು ಈ ಬಗ್ಗೆ ಶಿವಾಜಿ ತಂದೆ ಕಡಾಜಿ ರವರ ಮೇಲೆ ನಮ್ಮ ಸಂಶಯ ಇರುತ್ತದೆ
ಅಂತ ಕೊಟ್ಟ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ದಿನಾಂಕ: 25-10-2012 ರಂದು ಫಿರ್ಯಾದಿ
ಶ್ರೀ ಮಾರುತಿ ತಂದೆ ಲಾಲಪ್ಪಾ ಗಡದೊರ, 50 ವರ್ಷ, ಒಕ್ಕಲುತನ,
ಕುರುಬರ್,
ಸಾ/
ಚಿಂತಲಗೇರಾ ಇವರು ತನ್ನ ಹೊಲದಿಂದ 1900 ಗಂಟೆಗೆ ಸೈಕಲ ಮೇಲೆ ಮನೆಗೆ ಬರುತ್ತಿದ್ದಾಗ ಎದುರಿನಿಂದ
ಮೋಟರ ಸೈಕಲ ನಂ. ಕೆಎ-39/ಇ-3009 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ
ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಸೈಕಲಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಫಿರ್ಯಾದಿಯು
ಕೆಳಗೆ ಬಿದ್ದಿದ್ದು, ಫಿರ್ಯಾದಿಯ ಹಣೆಗೆ ರಕ್ತಗಾಯ ಮತ್ತು ಹಲ್ಲು ಬಿದ್ದಿರುತ್ತವೆ, ಬಲಗಡೆ
ಕಪಾಳದ ಮೇಲೆ ಭಾರಿ ಗುಪ್ತಗಾಯವಾಗಿ ಬಾವು ಬಂದಿದ್ದು, ಅಲ್ಲಲ್ಲಿ
ತರಚಿದ ರಕ್ತಗಾಯವಾಗಿದ ಮತ್ತು ಮೋಟಲ ಸೈಕಲ ಚಾಲಕನಿಗು ಸಹ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಂತ
ಕೊಟ್ಟ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬಗದಲ ಪೊಲಿಸ ಠಾಣೆ ಗುನ್ನೆ ನಂ. 104/2012 ಕಲಂ 354, 504
ಐಪಿಸಿ :-
ದಿನಾಂಕ: 23-10-2012 ರಂದು ಫಿರ್ಯಾದಿ
ಶ್ರೀಮತಿ ಬಸಮ್ಮ ಗಂಡ ಸಿದ್ದಪ್ಪ ಗಡದೊರ 22 ವರ್ಷ, ಕುರುಬರ್,
ಮನೆ
ಕೆಲಸ, ಸಾ/
ಚಿಂತಲಗೇರಾ ಇವರ ಭಾವನಾದ ಆರೋಪಿ ರಾಜು ತಂದೆ ರಾಮಣ್ಣಾ ಇವನು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ
ಬೈದು ಮಾನಸಿಕವಾಗಿ ತೊಂದರೆ ಮಾಡುತ್ತಾ ಅದೇ ರೀತಿ ಫಿರ್ಯಾದಿಗೆ ಮಾನ ಭಂಗ ಮಾಡಲು ಪ್ರಯತ್ನ
ಮಾಡುತ್ತಿರುವಾಗ ಫಿರ್ಯಾದಿಯ ಗಂಡನು ಬಂದು ಬಿಡಿಸಿರುತ್ತಾನೆ ಮತ್ತು ಅದೇ ರೀತಿ ಮೊದಲು ಸಹ ಫಿರ್ಯಾದಿಗೆ
ಆರೋಪಿಯು ವಿನಾಕಾರಣ ಬೈಯಲು ಹಿಯಳಿಸಿ ಮಾತಾಡುತ್ತಿರುತ್ತಾನೆ ಈ ರೀತಿ ಪದೆ ಪದೆ ಮಾಡುತ್ತಿದ್ದರಿಂದ
ಫಿರ್ಯಾದಿಯು ಮನ ನೊಂದು ಆರೋಪಿಯ ಕಾಟ ತಾಳಲಾರದೆ ಜೀವನವನ್ನು ಬೆಸತ್ತು ಆತ್ಮ ಹತ್ಯ ಮಾಡಿಕೊಳ್ಳಲು
ಪ್ರಯತ್ನ ಮಾಡಿರುತ್ತೇನೆ ಅದಕ್ಕಾಗಿ ನನಗೆ ತೊಂದರೆ ಕೊಟ ಭಾವನಾದ ರಾಜುವಿನ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬಗದಲ ಪೊಲಿಸ ಠಾಣೆ ಯು.ಡಿ.ಆರ್ ನಂ. 17/2012 ಕಲಂ 174 ಸಿಆರ್ಪಿಸಿ :-
ದಿನಾಂಕ : 26-10-2012 ರಂದು 0815 ಗಂಟೆಗೆ
ಫಿರ್ಯಾದಿ ಶ್ರೀ. ಖಾಜಾಖಾನ ತಂದೆ ಹಿಮ್ಮತಖಾನ ಮುಕ್ತದಾರ 55 ವರ್ಷ, ಮುಸ್ಲಿಂ,
ಒಕ್ಕಲುತನ,
ಸಾ/
ಶಮಶಿರನಗರ ಇವರು ಠಾಣೆಗೆ ಹಾಜರಾಗಿ ಹೇಳಕೆ ಕೊಟ್ಟ ಸಾರಾಂಶವೆನೆಂದರೆ ಫಿಯರ್ಾಧಿಗೆ ಒಟ್ಟು 10 ಜನ
ಮಕ್ಕಳಿದ್ದು, ಅದರಲ್ಲಿ 7 ನೇ ಮಗಳಾದ ಶಾನು ಬೆಗಂ ವಯ: 20 ವರ್ಷ, ಈಕೆಗೆ
ಹೊಟ್ಟ ನೋವಿನ ಕಾಯಿಲೆ ಇರುತ್ತದೆ. ಹೀಗಿರುವಲ್ಲಿ ದಿನಾಂಕ: 25/10/2012 ರಂದು 1400 ಗಂಟೆಗೆ ಫಿರ್ಯಾದಿ
ಮಗಳಾದ ಶಾನು ಬೇಗಂ ಈಕೆ ಹೊಟ್ಟ ನೋವು ಕಾಣಿಸಿಕೊಂಡಿದ್ದು ಹೊಟ್ಟ ನೋವು ತಾಳಲಾರದೆ ತನ್ನ
ಮನೆಯಲ್ಲಿ ಕಬ್ಬಿನ ಬೆಳೆಗೆ ಒಡೆಯುವ ಔಷದಿ ಸೇವಿಸಿದಳು ಸ್ವಲ್ಪ ಸಮಯದ ನಂತರ ವಾಂಧ ಮಾಡಿಕೊಂಡಳು
ಆಗ ಫಿರ್ಯಾದಿಗೆ ಅವಳ ಬಾಯಿಂದ ವಿಷದ ವಾಸನೆ ಬಂದಿದ್ದು ಚಿಕಿತ್ಸೆ ಕುರಿತು ಬೀದರ ಜಿಲ್ಲಾ
ಸಕರ್ಾಋಇ ಆಸ್ಪತ್ರೆಗೆ ತಂದು ಸೇರಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಅಂತ
ಕೊಟ್ಟ ಫಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾಕರ್ೆಟ ಪೊಲೀಸ ಠಾಣೆ ಬೀದರ ಗುನ್ನೆ ನಂ. 128/2012 ಕಲಂ 63 ಕಾಪಿ ರೈಟ
ಕಾಯ್ದೆ -1957
ದಿನಾಂಕ 26-10-2012 ರಂದು ಫಿರ್ಯಾದಿ ಶ್ರೀ ಸ್ಟೇಪನರಾಜ ತಂದೆ ರಾಜೇಂದ್ರ
ವಯ 30 ವರ್ಷ ಉ: ಇ.ಐ.ಪಿ,ಆರ್ ಕಂಪನಿಯಲ್ಲಿ ವಿಚಾರಣೆ ಅಧೀಕಾರಿ ಸಾ: ಮನೆ ನಂ 500 13 ನೇ ಕ್ರಾಸ ತಿಲಕನಗರ ಜಯನಗರ 4ನೇ
ಬ್ಲಾಕ ಬೆಂಗಳೂರು 41 ಇವರು ಮಾಕರ್ೆಟ ಪೊಲೀಸ ಠಾಣೆಗೆ ಹಾಜರಾಗಿ ಕಂಪನಿಯ ಲೇಟರ ಪ್ಯಾಡ ಮೇಲೆ
ಇಂಗ್ಲೀಷನಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದು, ಅದರ
ಸಾರಂಶವೆನೆಂದರೆ ಇ.ಐ.ಆರ್.ಪಿ. ಕಂಪನಿಯಿಂದ ಫಿರ್ಯಾದಿಗೆ ಸದರಿ ಕಂಪನಿಯ ಉತ್ಪದಾನೆಗಳನ್ನು ನಕಲಿ
ಮಾಡುತ್ತಿದ್ದು ಈ ಬಗ್ಗೆ ವಿಚಾರಣೆ ಮಾಡಿ ಸಂಬಂದಪಟ್ಟ ಪೊಲೀಸ ಠಾಣೆಗೆ ವರದಿ ನೀಡುವಂತೆ ಅಧೀಕಾರ
ನೀಡಿದ್ದು ಇರುತ್ತದೆ. ಸದರಿ ಅಡಿಠಟಣಠಟಿ ಕಂಪನಿಯ ನಕಲಿ ಫ್ಯಾನ್ ರೆಗ್ಯೂಲೇಟರಗಳು ಮಾರಾಟ
ಮಾಡುತ್ತಿದ್ದಾರೆ ಅಂತ ಇದ್ದ ಮಾಹಿತಿ ಮೇರೆಗೆ ಫಿರ್ಯಾದಿ ದಿನಾಂಕ 21-10-2012 ರಂದು ಅಡಿಠಟಣಠಟಿ
ಕಂಪನಿಯ ರೆಗ್ಯೂಲೇಟರಗಳು ಬೀದರ ನಗರದ
ಚೌದ್ರಿ ಎಲೆಕ್ಟ್ರಿಕಲ ಅಂಗಡಿ ಹಲವಾಯಿ ಕಾಂಪ್ಲೇಕ್ಸ ಬೀದರ ಮತ್ತು ವೈಷ್ಣವಿ ಎಲೆಕ್ಟೀಕಲ ಅಂಗಡಿ
ಕ್ರಾಂತಿ ಗಣೇಶ ಬೀದರ ರವರು ಮಾರಾಟ
ಮಾಡುತ್ತಿದ್ದಾರೆ ಅಂತ ಫಿರ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಾಲಾಗಿದ.
ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 247/2012 ಕಲಂ 279, 337,
338,
304(ಎ)
ಐಪಿಸಿ. ಜೊತೆ 187 ಐ.ಎಂ.ವಿ ಕಾಯ್ದೆ :-
ದಿನಾಂಕ 26/10/2012 ರಂದು 16:00 ಗಂಟೆಗೆ ಆರೋಪಿತನು ತನ್ನ ಅಟೋರಿಕ್ಷಾ
ನಂ. ಕೆಎ32ಟಿಆರ್2367 ನೇದರಲ್ಲಿ 1) ಫಿರ್ಯಾದಿ ಶ್ರೀ ಬೆಂಜಿಮಿನ್ ತಂದೆ ಪುಂಡಲಿಕ, 31 ವರ್ಷ,
ಕ್ರಿಶ್ಚಿಯನ,
ರೈಲ್ವೆ
ನೌಕರ ಸಾ|| ಪ್ರತಾಪ ನಗರ, ಬೀದರ, 2) ಸುರೇಖಾ
ತಂದೆ ವೈಜಿನಾಥ, 3) ಬಸವ ಚೇತನ ತಂದೆ ಅನೀಲ ಮಜಗೆ ಹಾಗೂ 4) ಪ್ರೇಮ ತಂದೆ ವೀರಕುಮಾರ ಮಜಗೆ
ಇವರನ್ನು ಕೂಡಿಸಿಕೊಂಡು ಬೀದರದ ಕನ್ನಡಾಂಬೆ ಸರ್ಕಲ ಕಡೆಯಿಂದ ಅತೀವೇಗ, ದುಡುಕಿನಿಂದ
ನೌಬಾದ ಕಡೆಗೆ ನಡೆಸಿಕೊಂಡು ಹೊಗುವಾಗ ಗುರು ನಾನಕ ಗೇಟ ಕಡೆಯಿಂದ ಒಂದು ಮೋಟಾರ ಸೈಕಲ ನಂ. ಎಪಿ13ಹೆಚ್4821
ನೇದರ ಸವಾರ ಸಂಜ್ಞೆ ಮಾಡಿ ಬೀದರ ನೌಬಾದ ರಸ್ತೆಗೆ ಸೇರಿ ಹೊರಟ್ಟಿದ್ದು ಸದರಿ ಅಟೋರಿಕ್ಷಾ ಚಾಲಕ
ವೇಗದ ಹತೋಟಿ ತಪ್ಪಿ ಒಮ್ಮಿಲ್ಲೆ ಬ್ರೇಕ ಹಾಕಿದ್ದರಿಂದ ಅಟೋ ಎಡ ಬದಿ ರಸ್ತೆಗೆ ಉರುಳಿ ಬೈಕ
ಸವಾರನಿಗೆ ಡಿಕ್ಕಿ ಕೊಟ್ಟು ಅದೆ ರೀತಿ ಪಾದಚಾರಿ ರಾಜು ಈತನಿಗೆ ಡಿಕ್ಕಿಯಾಗಿ ಪಲ್ಟಿಯಾದ ಅಟೋದ
ಕೆಳಗೆ ಪ್ರೇಮ ಮಜಗೆ ಈತ ತಿವೃತರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟು ಉಳಿದವರಿಗೆ ಸಾದಾ &
ಭಾರಿ
ಗಾಯಗೊಂಡಿದ್ದನ್ನು ಕಂಡು ಅಟೋ ಚಾಲಕ ಫರಾರಿಯಾಗಿದ್ದು ಈ ಘಟನೆ ಬಗ್ಗೆ ಅಟೋರಿಕ್ಷಾ ಚಾಲಕನ ಮೇಲೆ
ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ
ತನಿಖೆ ಕೈಕೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 14/2012 ಕಲಂ 174 ಸಿಆರ್ಪಿಸಿ :-
ದಿನಾಂಕ 26-10-2012 ಬೆಳ್ಳಿಗೆ
1000 ಗಂಟೆಗೆ ಮಂಠಾಳ ಠಾಣೆ ಅಂಚೆ ಕಛೇರಿಯ ಪೊಸ್ಟ್ಮ್ಯಾನ್ ಠಾಣೆಗೆ ಬಂದು ಒಂದು ಲಿವರ್ನಲ್ಲಿ
ಹಾಕಿದ ರೆಜೆಸ್ಟರ್ ಪೋಸ್ಟ್ ತಂದು ಕೊಟ್ಟಿದ್ದು ಅದನ್ನು ಸ್ವೀಕರಿ ತೆರೆದು ನೋಡಲಾಗಿ ಸೋಲ್ಲಾಪುರ
ಜಿಲ್ಲೆೆಯ ಸದರ ಬಜಾರ ಪೊಲೀಸ್ ಠಾಣೆಯ ಯುಡಿಆರ್ ನಂ 0/12 ಕಲಂ 147 ಸಿಆರ್ಪಿಸಿ ನೇದು ಗುನ್ನೆ
ದಾಖಲು ಆಗಿದ್ದು ಸದರಿ ಗುನ್ನೆಯಲ್ಲಿ ಅಲಗೂಡ್ ಗ್ರಾಮದ ರತನ ಇತನು ದಿನಾಂಕ 25/09/12 ರಂದು
ಸಿವಿಲ್ ಆಸ್ಪತ್ರೆ ಸೋಲಾಪುರದಲ್ಲಿ ಚಿಕಿತ್ಸೆ ಪಡೆಯವ ಕಾಲಾ ಮರಣ ಹೊಂದಿರುತ್ತಾನೆ. ಸದರಿಯವನು
ಮರಣ ಹೊಂದಿದ ಬಗ್ಗೆ ಸೊಲ್ಲಾಪುರ ಮನವಿ ಪತ್ರ ಹಾಗು ಅದರ ಜೊತೆಯಲ್ಲಿ ಮೃತನ ಶವದ ಪಂಚನಾಮೆ ಪತ್ರ
ಸಂ 54/08/12 ದಿನಾಂಕ 10/10/12 ನೇದನ್ನು ಸ್ವೀಕರಿಸಿ ಪ್ರತ್ರದ ಆಧಾರದ ಮೇಲಿಂದ ಠಾಣೆ ಯುಡಿಆರ್
14/12 ಕಂ 147 ಸಿಆರ್ಪಿಸಿ ನೇದಲ್ಲಿ ನೊಂದಾಯಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
No comments:
Post a Comment