ಮನೆ
ಕಳ್ಳತನ ಪ್ರಕರಣ:
ಶಹಾಬಾದ
ಪೊಲೀಸ್ ಠಾಣೆ:ಶ್ರೀಮತಿ,
ಭಾರತಿ ಗಂಡ ಮಲ್ಲಿಕಾರ್ಜುನ ಪಾಟೀಲ ಉ: ವಕೀಲವೃತ್ತಿ ಸಾ|| ಶಂಕರಲಿಂಗ ಗುಡಿ ಹತ್ತಿರ ಶಾಂತನಗರ
ಬಂಕೂರ ನಾನು ದಿನಾಂಕ:23/10/2012 ರಂದು ನಮ್ಮ ಅಕ್ಕನ ಊರಾದ ಸಾವಳಗಿಗೆ ಹೋಗಿ ಇಂದು ಸಾಯಂಕಾಲ 6-50 ಗಂಟೆಗೆ ಬಂದು ನೋಡಲಾಗಿ ಬಾಗೀಲ
ಚೀಲಕ ಮೇಲೆ ಬಟ್ಟೆ ಹಾಕಿದ್ದು, ಇರುತ್ತದೆ. ನಮ್ಮ ಕೆಲಸದವಳೇ ಹಾಕಿರಬೇಕಂತ ಬಟ್ಟೆ ತೆಗೆದು ನೋಡಿದಾಗ
ಕೀಲಿ ಕಪ್ಪೆ ಚಚ್ಚಿದ್ದು ಬಾಗಿಲ ಕೊಂಡಿ ಕೂಡಾ ಚಚ್ಚಿದ್ದು ಕಂಡುಬಂದಿತು. ಮನೆಯಲ್ಲಿ ನೋಡಲಾಗಿ ಅಲಮಾರದಲ್ಲಿಟ್ಟಿದ್ದ
ಮೂರು ತೋಲಿ ಬಂಗಾರದ ಪಾಟಲಿ ಅ.ಕಿ. 90.000/- ರೂ. ಒಂದು ತೋಲಿ ಬಂಗಾರ ನೆಕಲೆಸ್
ಅ.ಕಿ.30.000/-, ಮಕ್ಕಳ ಕೀವಿಯಲ್ಲಿರುವ ಎರಡು ಜೊತೆ ಕಿವಿಯೊಲೆ [4 ½ ಗ್ರಾಂ ] ಅ.ಕಿ.14.000/-,ನನ್ನ
ಕಿವಿಯಲ್ಲಿಯ ಅಷ್ಟಪೈಲಿ ಟಾಪ ಒಂದು ಜೋತೆ 2 ಗ್ರಾಂದ್ದು ಅ.ಕಿ. 6000/- ರೂ. ಮೂರು ಜೋತೆ
ಬೆಳ್ಳಿಯ ಚೈನುಗಳು ಅ.ಕಿ. 6000/- 6] ಬೆಳ್ಳಿಯ ಆರತಿ ಸಟ್ ಅ.ಕಿ. 15.000/- ಹೀಗೆ ಒಟ್ಟು
1.61.000/- ರೂಪಾಯಿಗಳ ಸಾಮಾನುಗಳನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗೀಲ ಕೀಲಿ
ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 135/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:26/10/2012 ರಂದು ವಡ್ಡರವಾಡಿಯ ರಾಚಯ್ಯ ಮಠದವರ ಕಿರಾಣಿ ಅಂಗಡಿಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಚೀಟಿ ಬರೆದು
ಕೊಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶಹಾಬಾದ ನಗರ ಪೊಲೀಸ್ ಠಾಣೆಯ ಪೊಲೀಸ್
ಇನ್ಸಪೇಕ್ಟರ ಶ್ರೀ ಶರಣಪ್ಪಾ ಹಿಪ್ಪರಗಿ ರವರು ಮತ್ತು ಅವರ ಸಿಬ್ಬಂದಿಯವರಾದ
ಗುಂಡಪ್ಪಾ, ಬಸವರಾಜ,ಯೇಜಕಲ್,ಪರಶುರಾಮ, ಜೀಪ ಚಾಲಕ ಎಹೆಚ್‌ಸಿ ಹಣಮಂತರಾಯ ರವರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ರಾಚಯ್ಯ ತಂದೆ ಮಹಾದೇವಯ್ಯ ಮಠದವರ ಇತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ
ಚೀಟಿ ಬರೆದು ಕೊಡುತ್ತಿದ್ದುದು ಖಚಿತ ಪಡಿಸಿಕೊಂಡು ಆತನ ಹತ್ತಿರ 2060/- ರೂಪಾಯಿ,ಒಂದು ಮಟಕಾ
ಚೀಟಿ,ಒಂದು ಬಾಲ ಪೆನ್ನು ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:
134/2012 ಕಲಂ, 78 (3) ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಅನೈಸರ್ಗಿಕ
ಸಂಭೋಗ ಮಾಡಿ ಕೊಲೆ ಮಾಡಿದ ಬಗ್ಗೆ :
ಮಿರಿಯಾಣ
ಪೊಲೀಸ್ ಠಾಣೆ: ಶ್ರೀಮತಿ ಸುಭದ್ರಮ್ಮಾ ಗಂಡ ಪ್ರಬು ಮೇತ್ರೆ ವಯಾ|| 36 ವರ್ಷ
ಜಾತಿ|| ಹರಿಜನ
ಉದ್ಯೋಗ|| ಕೂಲಿ ಕೇಲಸ ಸಾ|| ಚಿಕ್ಕನಿಂಗದಳ್ಳಿ
ತಾ|| ಚಿಂಚೊಳ್ಳಿ ರವರು
ನನ್ನ ಮಗನಾದ ಸೂರ್ಯಕಾಂತ ವಯ|| 14 ವರ್ಷ ಇತನು ದಿನಾಂಕ:24-10-2012 ರಂದು ರಾತ್ರಿ 8-00 ಗಂಟೆಯ
ಸುಮಾರಿಗೆ ದಸರಾ ಹಬ್ಬದ ಕುರಿತು ಬನ್ನಿ ಹಂಚಲು ಊರಲ್ಲಿ ಹೋಗಿರುತ್ತಾನೆ. ಊರಲ್ಲಿ ಗೊಂದಲ
ಕಾರ್ಯಕ್ರಮ ಇರುವದರಿಂದ ನನ್ನ ಮಗನು ಅಲ್ಲಿಗೆ ಹೋಗಿರಬೇಕು ಅಂತಾ ನಾನು ತಿಳಿದು ಸುಮ್ಮನಾಗಿ ರಾತ್ರಿ
ಎಲ್ಲಿ ಹುಡಕಾಡಿರುವುದಿಲ್ಲಾ ನಿನ್ನೆ ದಿನಾಂಕ:25-10-2012
ರಂದು ಬೆಳಿಗ್ಗೆ ನನ್ನ ಮಗ ಮನಿಗೆ ಬರಲಿಲ್ಲಾ ಎಲ್ಲಿ ಹೋಗಿದ್ದಾನೆ ಅಂತಾ ಊರಲ್ಲಿ ಕೇರೆ ಬಾವಿ ಕಡೆ
ಮತ್ತು ಚಂದಾಪೂರ ಚಿಂಚೊಳ್ಳಿ ಕಡೆ ಹುಡಕಾಡಿದೆನು ಪತ್ತೆ ಆಗಿರುವುದಿಲ್ಲಾ. ದಿನಾಂಕ:26-10-2012
ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಕಲಬಾವಿ ತಾಂಡಾದ ಒಬ್ಬ ಅಟೋ ರೀಕ್ಷಾ ಚಾಲಕನು ನಿನ್ನ ಮಗ
ಊರ ಹತ್ತಿರ ಇರುವ ನೀರಿನ ಟ್ಯಾಂಕ ಪಕ್ಕದಲ್ಲಿ ಗುಡದಲ್ಲಿ ಸತ್ತು ಬಿದ್ದಿದ್ದಾನೆ ಅಂತಾ ಜನ ಅಂದು
ಕೊಳ್ಳುತ್ತಿದ್ದಾರೆ ಅಂತಾ ತಿಳಿಸಿದನು. ಕೂಡಲೆ ನಾನು ನನ್ನ ಮಾವ ಚಂದ್ರಪ್ಪಾ ಇತನಿಗೆ ಕರೆದುಕೊಂಡು ಚಿಕ್ಕನಿಂದಳಿಗೆ ಹೋಗಿ
ನೋಡಲು ನೀರಿನ ಟ್ಯಾಂಕ ಹತ್ತಿರ ದೌಲ ಮಲೀಕ ಗುಡ್ಡದ ಗಿಡದ ಕಂಟಿಯಲ್ಲಿ ಸತ್ತು ಬಿದ್ದಿದ್ದನ್ನು
ಕಂಡು ಬಂತು ನನ್ನ ಮಗ ಸೂರ್ಯಕಾಂತ ಶವವು ಅರೆ ಬೆತ್ತಲೆ ಆಗಿ ಬಿದ್ದಿದ್ದು ತಲೆಗೆ ರಕ್ತ ಗಾಯವಾಗಿ
ಹುಳ ಮತ್ತು ಇರುವೆಗಳು ಹತ್ತಿರುತ್ತವೆ. ಮುಖ ಕೂಡಾ ಜಜ್ಜಿದಂತೆ ಕಂಡು ಬಂದಿರುತ್ತದೆ. ಗುದದ್ವಾರಕ್ಕೆ
ರಕ್ತ ಗಾಯ ಆದಂತೆ ಕಂಡು ಬಂದಿರುತ್ತದೆ. ಅಕ್ಕ ಪಕ್ಕದಲ್ಲಿ ಕ್ವಾಟರ ಬಾಟಲಗಳು ಮತ್ತು ಚುಡವಾ ಪಾಪಡ
ತಿಂದು ಉಳಿದಿದ್ದ ಪ್ಲಾಸ್ಟಿಕ ಕವರ ಕಂಡು ಬಂದಿರುತ್ತದೆ.ಯಾರೋ ದುಶ್ಕರ್ಮಿಗಳು ನನ್ನ ಮಗ
ಸೂರ್ಯಕಾಂತನಿಗೆ ಅನೈಸರ್ಗಿಕ ಸಂಬೋಗ ಮಾಡಿ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ದೂರು
ಸಲ್ಲಿಸಿದ ಸಾರಾಂಸದ ಮೇಲಿಂದ ಠಾಣಾ ಗುನ್ನೆ ನಂ:37/2012 ಕಲಂ 377,302 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment