ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ:26-10-2012 ರಂದು ಮುಂಜಾನೆ 9-30 ಗಂಟೆ
ಸುಮಾರಿಗೆ ನಮ್ಮ ಊರಿನ ಪಂಚಾಯಿತಿ ಕಟ್ಟೆ ಹತ್ತಿರ ಇದ್ದಾಗ ಗ್ರಾಮದ ಜನರು ಹೀರಿಯಾಳ ರಸ್ತೆಯ
ಹಿರೀಗೆಪ್ಪ ಪೂಜಾರಿ ಇವರ ಹೊಲದ ಹತ್ತಿರ ನೀರು ಹರಿಯುವ ಪೈಪಿನ ಜಾಗದಲ್ಲಿ ಅಪರಿಚಿತ ಹೆಣ್ಣು ಮಗಳ
ಕೊಲೆಯಾಗಿ ಬಿದ್ದಿರುವ ಬಗ್ಗೆ ಮಾತುಡುವದನ್ನು ಕೇಳಿ ಸ್ಥಳಕ್ಕೆ ಹೋಗಿ ನೋಡಲು ಅಪರಿಚಿತ ಹೆಣ್ಣು
ಮಗಳು ವಯಸ್ಸು ಅಂದಾಜು 35 ರಿಂದ 40 ವರ್ಷ, ಎತ್ತರ 5
ಪೀಟ 3 ಇಂಚ್, ಕೆಂಪು ಬಣ್ಣ, ದಪ್ಪ
ಮೈಕಟ್ಟು , ಹೂವಿನ ಸೀರೆ, ನೀಲಿ ಬಣ್ಣದ ಲಂಗ, ಕಾಲಿನಲ್ಲಿ ಕಾಲುಂಗರ ಹೊಂದಿರುವ ಅಪರಿಚಿತ ಹೇಣ್ಣು
ಮಗಳು ಬಾಳೆ ಗೀಡದ ಸೀಪ್ಪೆ ಕೆಳಗೆ ಕೊಲೆಯಾಗಿ ಬಿದ್ದಿದ್ದು ಕಂಡು ಬಂದಿರುತ್ತದೆ. ಈ ಕೊಲೆಯು
ದಿನಾಂಕ:25-10-2012 ರ ರಾತ್ರಿ 10-00 ಗಂಟೆಯಿಂದ ದಿನಾಂಕ:26-10-2012 ರ ಬೆಳಿಗಿನ ಜಾವದಲ್ಲಿ
ನಡೆದಿರಬಹುದು ಅಂತಾ ಶ್ರೀ ರಾಜಶೇಖರ ತಂದೆ
ಭೀರಣ್ಣ ಬಂಡಗಾರ ಉ|| ತಾ.ಪಂ. ಸದಸ್ಯ ಸಾ|| ಉಡಚಣಹಟ್ಟಿ ಗ್ರಾಮ ರವರು ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:186/2012 ಕಲಂ. 302, 201 ಐ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ರಾಜಶೇಖರ ತಂದೆ ಗುರಲಿಂಗಪ್ಪ ಹೊಸಮನಿ ಸಾ|| ವಿವೇಕಾನಂದ ನಗರ ಅಳಂದ ರೋಡ ಗುಲಬರ್ಗಾ ರವರು ನಾನು ದಿನಾಂಕ:14-10-2012 ರಂದು ರಾತ್ರಿ 7-30 ಗಂಟೆಯ
ಸಮಯದಲ್ಲಿ ನನ್ನ ಮನೆಯ ಮುಂದೆ ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್
ನಂಬರ ಕೆಎ-32/ಎಲ್-709, ನೇದ್ದನ್ನು ನಿಲ್ಲಿಸಿದ್ದು ಊಟ ಮಾಡಿಕೊಂಡು ರಾತ್ರಿ 8 ಗಂಟೆ
ಸುಮಾರಿಗೆ ಹೊರಗಡೆ ಬಂದಾಗ ನನ್ನ ಮೊಟಾರ್ ಸೈಕಲ್ ನಿಲ್ಲಿಸಿದ
ಸ್ಥಳದಲ್ಲಿ ಕಾಣಿಸಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ ನನ್ನ ಮೊಟಾರ್ ಸೈಕಲ್ ಪತ್ತೆಯಾಗಿರುದಿಲ್ಲ ಯಾರೋ ಕಳ್ಳರು ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment