Police Bhavan Kalaburagi

Police Bhavan Kalaburagi

Monday, October 29, 2012

BIDAR DISTRICT DAILY CRIME UPDATE 29-10-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-10-2012

ಬಗದಲ್ ಪೊಲೀಸ್ ಠಾಣೆ ಗುನ್ನೆ ನಂ. 105/12 ಕಲಂ 323, 324, 498(ಎ) 504 ಜೊತೆ 34 ಐಪಿಸಿ :-

ದಿನಾಂಕ 28-10-2012 ರಂದು ತಡಪಳ್ಳಿ ಗ್ರಾಮದ ಫಿರ್ಯಾದಿ ಶಶಿಕಲಾ  ಗಂಡ ರಾಜು ತಡಪಳ್ಳಿ ವಯ: 25ವರ್ಷ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯ ಮದುವೆಯು ಸುಮಾರು 5 ವರ್ಷಗಳ ಹಿಂದೆ ರಾಜು ನರಸಪ್ಪಾ ತಡಪಳಿರವರ ಜೊತೆಯಾಗಿದ್ದು ಫಿರ್ಯಾದಿಗೆ ಎರಡು ಮಕ್ಕಳಿರುತ್ತವೆ. ಫೀರ್ಯಾದಿಯ ಗಂಡ ಸುಮಾರು ಒಂದು ವರ್ಷದಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರುಕುಳ ಕೊಡುತ್ತಿದ್ದಾರೆ    ದಿನಾಂಕ 27-10-2012 ರಂದು ಬೇಳಿಗೆ 1000 ಗಂಟೆಯ ಸುಮಾರಿಗೆ   ಸರಾಯಿ ಕುಡಿದು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಏ ರಂಡಿ ನನಗೆ ಬೀಟ್ಟು ಕೊಡು ನಾನು ಬೇರೆ ಇನೊಂದು ಮದುವೆ ಆಗುತ್ತೆನೆ ಎಂದು ಬೈದು ಅಡುಗೆ ಮನೆಯಲ್ಲಿನ ಒಂದು ಕಟ್ಟಿಗೆ ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ಗುಪ್ತಾ ಗಾಯಮಾಡಿರುತ್ತಾರೆ ಮತ್ತು ನನ್ನ ಅತ್ತೆಯಾದ ರಂಗಮ್ಮಾ ಇವಳು ಸಹ ಕೈಯಿಂದ ಬೇನ್ನಿನಲ್ಲಿ ಹೋಡೆದಿರುತ್ತಾಳೆ ಮತ್ತು ನಮ್ಮ ಮಾವನಾದ ನರಸಪ್ಪಾ ಇವರು ಸಹ ಹೊಡೆ ಬಡೆ ಮಾಡಿರುತ್ತಾರೆ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ  ದಾಖಲು ಮಾಡಿಕೂಂಡಿ ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 180/12 ಕಲಂ 79, 80 ಕೆ.ಪಿ. ಕಾಯ್ದೆ :-

ದಿನಾಂಕ: 28-10-2012 ರಂದು ಭಾಲ್ಕಿ ಎ.ಪಿ.ಎಮ್.ಸಿ. ಯಾರ್ಡದಲ್ಲಿ ಕಾಶೆಪ್ಪಾ ಭುರೆ ಇತನ ಅಡತ ಅಂಗಡಿಯಲ್ಲಿ ಆರೋಪಿತರಾದ  ನಾಗನಾಥ ತಂದೆ ಪ್ರಭುರಾವ, ರಾಜಕುಮಾರ ತಂದೆ ಬಾಬುರಾವ, ಧನರಾಜ ತಂದೆ ನಾಗಶೇಟ್ಟೆಪ್ಪಾ, ಸಂತೋಷ ರವರುಗಳು ಮೂರು ಎಲೆಯ ಪರೆಲ್ ಅಂದರ ಬಹಾರ ಇಸ್ಪೀಟ್  ಜೂಜಾಡ ಆಡುತ್ತಿದ್ದಾಗ ಅವರುಗಳ ಮೇಲೆ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿ ಇಸ್ಪೀಟ್ ಆಟಕ್ಕೆ ಸಂಬಂಧಿಸಿದ ಒಟ್ಟು ರೂ. 4300/- ಹಾಗೂ 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಚಿಂತಾಕಿ ಪೊಲೀಸ್ ಠಾಣೆ ಗುನ್ನೆ ನಂ. 64/12 ಕಲಂ 279, 337, 338, 304 (ಎ) ಐಪಿಸಿ :-

ದಿನಾಂಕ: 28-10-12 ರಂದು ಮುಂಜಾನೆ 1000 ಗಂಟೆಗೆ ಫೀರ್ಯಾದಿ ಲಕ್ಷ್ಮಣ ತಂದೆ ಮಾನಸಿಂಗ್ ರಾಠೊಡ್ ಸಾ: ಅಶೋಕನಗರ ತಾಂಡಾ ರವರು ರವರು ತಮ್ಮ ತಾಯಿ ಮೌತಬಾಯಿ ಗಂಡ ಮಾನಸಿಂಗ್ ರಾಠೋಡ್ ರವರು ತನ್ನ ತವರುಮನೆ ಡಾಕಾನಾಯಕ ತಾಂಡಾ ವಡಗಾಂವಗೆ ಹೋಗಿ ಮರಳಿ ಸೋದರಮಾವನ ಮಗನಾದ ಭೀಮರಾವನ ಜೊತೆ ಮೋ.ಸೈಕಲ್ ಮೇಲೆ ಹೋಗುವಾಗ ಭಿಮರಾವ ಇತನು ತನ್ನ ದ್ವೀಚಕ್ರ ವಾಹನ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಮೌತಾಬಾಯಿ ರವರಿಗೆ ತಿವ್ರ ರಕ್ತಗಾಯವಾಗಿದ್ದ ಅಂಬುಲೇನ್ಸ್ ನಲ್ಲಿ ಒಯ್ಯೂವಾಗ ಮಾರ್ಗ ಮಧ್ಯೆ ಮ್ರತ ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.

No comments: