ಗುಲಬರ್ಗಾ ಜಿಲ್ಲಾ ಡಿಸಿಐಬಿ ಘಟಕ ಅಧಿಕಾರಿಗಳ ನೇತ್ರತ್ವದಲ್ಲಿ ದಾಳಿ, ಸುಮಾರು 9,901 ರೂ ಮೌಲ್ಯದ ಅನಧಿಕೃತ ಮಧ್ಯ ಜಪ್ತಿ ಒಬ್ಬ ಆರೋಪಿ ಬಂದನ :
ಗುಲಬರ್ಗಾ ಜಿಲ್ಲೆಯ ಫರತಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನ ಕಿರಣಗಿ ಗ್ರಾಮದಲ್ಲಿ ದಿನಾಂಕ:20-10-2012 ರಂದು ಮಧ್ಯಾಹ್ನ ಸುಮಾರಿಗೆ ಅಲ್ಲಿನ ಹೋಟೆಲದಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ರವರ ಮಾರ್ಗದರ್ಶನದ ಮೇರೆಗೆ ದಿನಾಂಕ:20-10-2012 ರಂದು ಮದ್ಯಾಹ್ನ ಡಿಸಿಐಬಿ ಘಟಕದ ಆಧಿಕಾರಿಯಾದ ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ, ಮತ್ತು ಸಿಬ್ಬಂದಿಯವರಾದ ಬಸವರಾಜ ಎ.ಎಸ.ಐ. ಮತ್ತು ಮುಖ್ಯ ಪೇದೆಯಗಳಾದ ಪ್ರಕಾಶ, ಅಣ್ಣಪ್ಪಾ, ವಿಜಯಕುಮಾರ, ಲಕ್ಕಪ್ಪಾ, ವೀರಣ್ಣಾ ಎಪಿಸಿ ಹಾಗು ಫರತಬಾದ ಪೊಲೀಸ್ ಠಾಣೆಯ ಪಿ.ಎಸ.ಐ ರವರಾದ ಭೋಜರಾಜ ರಾಠೋಡ, ದೇವಿಂದ್ರಪ್ಪಾ ಪಿಸಿ ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಸಂತೋಷ ತಂದೆ ಪ್ರಭು ಬೂಸಾ ಸಾ|| ಹೊನ್ನ ಕಿರಣಗಿ ಗ್ರಾಮ ಇತನು ಯಾವದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ದಾಳಿ ಮಾಡಿ ಮಧ್ಯ ಮಾರಾಟ ಮಾಡಿದ ನಗದು ಹಣ 620/-, ಒಂದು ಮೊಬಾಯಿಲ್, ಹಾಗು ಮಧ್ಯದ ಬಾಟಲಿಗಳು ಹೀಗೆ ಒಟ್ಟು 9,901/- ರೂಪಾಯಿಗಳ ಮೌಲದ್ದು ಮುದ್ದೆ ಮಾಲನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಫರತಬಾದ ಪೊಲೀಸ್ ಠಾಣೆ ಗುನ್ನೆ ನಂ:129/2012 ಕಲಂ 32, 34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಮಹ್ಮದ ಇಮ್ರಾನ ಹನಿಫೋದ್ದಿನ ತಂದೆ ಮಹ್ಮದ ಅಜಮೋದ್ದಿನ ಸಾಃ ಕೆ.ಬಿ.ಎನ್ ಕಾಲೇಜ ಹತ್ತಿರ ರೋಜಾ (ಬಿ) ಗುಲಬರ್ಗಾ ರವರು ದಿನಾಂಕ:21-10-2012
ರಂದು 12-00 ಪಿ.ಎಮ್ ನಾನು ಮತ್ತು ನನ್ನ ಮಾವನಾದ
ರಫೀಕ ಪಾಷಾ ಇಬ್ಬರು ಕೂಡಿಕೊಂಡು ಕೆ.ಬಿ.ಎನ್
ದರ್ಗಾ ಕಡೆಯಿಂದ ನಡೆದುಕೊಂಡು ಬರುತ್ತಿದ್ದಾಗ ಕಾರ ನಂ. ಕೆಎ 32 ಎಮ್. 9758 ನೇದ್ದರ ಚಾಲಕನು
ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋರಟಿದ್ದ
ನನಗೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 52/2012 ಕಲಂ 279, 337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment