Police Bhavan Kalaburagi

Police Bhavan Kalaburagi

Monday, October 22, 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ನರೇಂದ್ರ ತಂದೆ ಸುರೇಂದ್ರ ಕುಲಕರ್ಣಿ  ಸಾ; ನ್ಯೂ ರಾಘವೇಂದ್ರ ಕಾಲನಿ ಗುಲಬರ್ಗಾರವರು ನಾನು ದಿನಾಂಕ:20/10/2012 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಸಂಬಂಧಿಕರಾದ ರಾಹುಲ ಪ್ರವೀಣ ಎಲ್ಲರೂ ತುಳಜಾಪುರಕ್ಕೆ ನಡೆದುಕೊಂಡು ಹೊರಟಿದ್ದೆವು. ಕೆರೆಭೋಸಗಾ ಕ್ರಾಸ ದಾಟಿ 1 ಕಿ.ಮೀ. ದೂರದಲ್ಲಿ ಎಡ ರೋಡ ಬದಿಯಿಂದ ನಡೆದುಕೊಂಡು ಹೊರಟಾಗ ಆಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು  ಡಿಕ್ಕಿ ಪಡಿಸಿ ಹಾಗೇ ಹೋಗಿರುತ್ತಾನೆ ಇದರಿಂದಾಗಿ ಎಡಗಾಲ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ.   ಅಂತಾ  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 337/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಕವಿತಾ ಗಂಡ ಶಿವಯ್ಯಾ ಮಠಪತಿ   ಸಾ: ಹಿಟ್ಟಿನ ಗಿರಣಿ  ಹತ್ತಿರ ಕುವೆಂಪು ನಗರ   ಗುಲಬರ್ಗಾ ರವರು ನಾನು ದಿನಾಂಕ:21-10-2012 ರಂದು ಮಧ್ಯಾಹ್ನ 2=45 ಗಂಟೆಯ ಸುಮಾರಿಗೆ ನಡೆದುಕೊಂಡು ಖುಬಾ ಕಲ್ಯಾಣ ಮಂಟಪ ಹತ್ತಿರ ಬಂದಾಗ ನಮಗೆ ಪರಿಚಯ ಇರುವ ಜೆಕಬ ಈತನು ತನ್ನ ಮೋಟಾರ ಸೈಕಲ ನಂ: ಕೆಎ 32 ಇಎ-927 ನೆದ್ದರ ಮೇಲೆ ಬಂದು ನಾನು ನಿಮ್ಮ ಮನೆಯ ಕೆಡೆಗೆ ಹೋಗುತ್ತಿದ್ದೇನೆ ಅಂತಾ ಹೇಳಿದಾಗ ನಾನು ಆತನ ಮೋಟಾರ ಸೈಕಲ್ ಮೇಲೆ ಹಿಂದುಗಡೆ  ಕುಳಿತುಕೊಂಡು ಲಾಹೋಟಿ ಕ್ರಾಸ್ ಮುಖಾಂತರ ಹೋಗುತ್ತಿದ್ದಾಗ ಲಾಹೋಟಿ ಪೆಟ್ರೋಲ್ ಪಂಪ್ ಸಮೀಪ ಮೋಟಾರ ಸೈಕಲ್ ನಂ: ಕೆಎ-32 ಜೆ-6786 ನೇದ್ದರ ಚಾಲಕ ಆಕೀಫ ಇತನು ತನ್ನ ಮೋಟಾರ ಸೈಕಲನ್ನು ಜಗತ ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಗೆ  ಡಿಕ್ಕಿ ಪಡಿಸಿ  ಭಾರಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 107/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಪುತಳಬಾಯಿ ಗಂಡ ದೇವಿಂದ್ರಪ್ಪಾ ಸಾಗರ ಸಾ: ಸಿಐಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 21-10-2012 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ನನ್ನ ಮಗ ಮೋಹನ ಇತನು ಮೋಟಾರ ಸೈಕಲ ನಂ ಕೆಎ-32 ಇಸಿ-630 ನೇದ್ದರ ಮೇಲೆ ಘಾಟಿಗೆ ಲೇಔಟ ದಿಂದ ರೈಲ್ವೆ ಗೇಟ ಕಡೆಗೆ ಹೋಗುತ್ತಿರುವಾಗ ಘಾಟಿಗೆ ಲೇ ಔಟ ನಲ್ಲಿರುವ ಶಿವಶಂಕರ ನಿಲಾರಿ ರವರ ಮನೆಯ ಎದುರುಗಡೆ ರೋಡಿನ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಇಬಿ-3245 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಮೋಹನ ಮೋಟಾರ ಸೈಕಲಗೆ  ಡಿಕ್ಕಿ ಪಡಿಸಿ  ನನ್ನ ಮಗನಿಗೆ  ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 108/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: