ಅಪಘಾತ ಪ್ರಕರಣಗಳು :
ಸೇಡಂ ಠಾಣೆ :ಶ್ರೀ ಬಾಲಾಜಿ ತಂದೆ ರಾಹುಸಾಬ ಪವಾರ ಸಾ:ಝಾಕಾಪೂರ ತಾ:ಬಂದಾರ, ಜಿಲ್ಲಾ:ನಾಂದೇಡ, ಮಹಾರಾಷ್ಟ್ರರಾಜ್ಯ ಇವರು ದಿ:15-11-2012
ರಂದು ಬೆಳಗ್ಗೆ 08-30 ಗಂಟೆ ಸುಮಾರಿಗೆ ನನ್ನ ಹೆಂಡತಿ ತಂಗಿಯ ಮಗಳಾದ ಕ್ರಶಾ ಇವಳಿಗೆ
ಆರಾಮವಿಲ್ಲದ ಕಾರಣ ಗುಲಬರ್ಗಾದಲ್ಲಿಯ ಡಾ:ಮೋರೆ ಇವರ ಹತ್ತಿರ ಚಿಕಿತ್ಸೆ ಕುರಿತು, ನಾನು ಮತ್ತು ನನ್ನ ಹೆಂಡಗಿಯ ತಂಗಿಯ
ಗಂಡನಾದ ಅನಿಲ್ ವಾಚಾನಿ ಮತ್ತು ಇತನ ಅಕ್ಕಳ ಮಗಳಾದ ಹೀಮಾ ಎಲ್ಲರೂ
ಕೂಡಿಕೊಂಡು ಟಾಟಾ ಸುಮೋ ನಂ-ಕೆ.ಎ.32.ಎಮ್.ಎ.1122 ನೇದ್ದರಲ್ಲಿ ಕುಳಿತುಕೊಂಡು ಸೇಡಂದಿಂದ
ಗುಲಬರ್ಗಾಕ್ಕೆ ಹೋಗುವಾಗ ಟಾಟಾ ಸುಮೊವನ್ನು ಅನಿಲ್ ವಾಚಾನಿ ಇತನು ಚಲಾಯಿಸುತ್ತಿದ್ದನು, ಸೇಡಂ ದಿಂದ ಆರು ಕಿಲೋ ಮೀಟರ್ ದೂರ ಬಂದ
ಬಳಿಕ ಶೆಟ್ಟಿ ಹೂಡಾ ದಾಟಿ, ದಾನೇಶ್ವರಿ ಗುಡಿ ಹತ್ತಿರ ಹೋಗುವಾಗ, ಅನೀಲ ಇತನು ಟಾಟಾ ಸುಮೋವನ್ನು
ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದನು. ರೋಡಿನ ಮೇಲೆ ಒಮ್ಮೆಲೆ ಆಕಳು
ಬಂದಿದ್ದರಿಂದ ಅನಿಲ್ ಈತನು, ಒಮ್ಮೆಲೆ ಬ್ರೇಕ ಹಾಕಿದಾಗ ನಿಯಂತ್ರಣ
ತಪ್ಪಿ ಟಾಟಾ ಸುಮೊ ರೋಡಿನ ಪಕ್ಕಕ್ಕೆ ಪಲ್ಟಿಯಾಗಿ ಬಿತ್ತು. ಆಗ ಒಳಗಡೆ ಇದ್ದ ನಾವುಗಳು ಒಬ್ಬರ
ಮೇಲೆ ಒಬ್ಬರು ಬಿದ್ದು ಟಾಟಾ ಸುಮೊದ ಒಳಗಡೆ ಸಿಕ್ಕಿ ಹಾಕಿಕೊಂಡೇವು. ನಂತರ ನಮಗೆ ನಮ್ಮ ಟಾಟಾ
ಸುಮೊ ಚಾಲಕ ಹಾಗೂ ಇತರರು ಕೂಡಿಕೊಂಡು ಹೊರಗಡೆ ತೆಗೆದರು. ಇದರಿಂದ ನನಗೆ ಎಡಗಾಲಿನ ತೊಡೆಗೆ ಹಾಗೂ
ಪಕ್ಕೆಲೆಬಿಗೆ ಭಾರಿ ಗುಪ್ತಗಾಯವಾಗಿ, ಹೀಮಾ
ಇವಳಿಗೆ ಎಡಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು, ಕ್ರಶಾ ಇವಳಿಗೆ ತಲೆಯ ಹಿಂಭಾಗಕ್ಕೆ ಭಾರಿ
ರಕ್ತಗಾಯವಾಗಿ ತಲೆ ಒಡೆದಿದ್ದು ಇರುತ್ತದೆ. ಅನೀಲ್ ಇತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಂತರ ನಮಗೆ ಒಂದು ಕ್ರಶರ್ ಗಾಡಿಯಲ್ಲಿ
ಹಾಕಿಕೊಂಡು ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದರು, ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸರಕಾರಿ ಅಂಬ್ಯೂಲೆನ್ಸದಲ್ಲಿ
ಹಾಕಿಕೊಂಡು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಸೇರಿಕೆ ಮಾಡಿರುತ್ತಾರೆ. ಇಲ್ಲಿ ಉಪಚಾರ
ಪಡೆಯುವಾಗ ಕ್ರಶಾ ಇವಳ ತಲೆಗೆ ಭಾರಿ ರಕ್ತಗಾಯ ವಾಗಿದ್ದರಿಂದ, ಉಪಚಾರ ಫಲಿಸದೇ ಮದ್ಯಾಹ್ನ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 229/2012 ಕಲಂ. 279, 337, 338, 304
(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ :ಶ್ರೀ ನಾಗಪ್ಪ ತಂದೆ ಶಿವಪ್ಪಾ ಮಡ್ಯಾರ ವ:
21 ವರ್ಷ ಸಾ: ಲಿಂಗಸೂರ ತಾ: ಲಿಂಗಸೂರ ಜಿಲ್ಲಾ : ರಾಯಚೂರ ಮತ್ತು ಅವನ ಸ್ನೇಹಿತ ತಿಮ್ಮಣ್ಣ ದಾಂಡೇಕರ ಇಬ್ಬರೂ ಕೂಡಿ ದಿನಾಂಕ 14-11-2012 ರಂದು ದಿಪಾವಳಿ ಹಬ್ಬದ ಸಲುವಾಗಿ ಊರಿಗೆ ಬರುವ
ಕುರಿತು ಲಾರಿಯಲ್ಲಿ
ಪೂನಾದಲ್ಲಿ ಕುಳಿತುಕೊಂಡು ಗುಲ್ಬರ್ಗಾದ ಆಳಂದ ಚೆಕ್ಕಪೋಸ್ಟ್‌ಗೆ ಬಂದು ಲಾರಿಯಿಂದ ಕೆಳಗೆ ಇಳಿದು ನಡೆದುಕೊಂಡು ಹುಮನಾಬಾದ ರಿಂಗ ರೋಡ ಕಡೆಗೆ ಹೊಗುವಾಗ
ಆಳಂದ ಚೆಕ್ಕ ಪೋಸ್ಟ್ ಹತ್ತಿರ ಸ್ವಲ್ಪ
ಮುಂದುಗಡೆ ಬೆಳ್ಳಿಗ್ಗೆ ಗಂಟೆ
ಸುಮಾರಿಗೆ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀ ವೇಗದಿಂದ ಮತ್ತು
ಅಲಕ್ಷತನ ದಿಂದ ನಡೆಸುತ್ತಾ ಯಾವುದೇ
ಹಾರ್ನ ವಗೈರೆ ಹಾಕದೆ ಚಲಾಯಿಸಿಕೊಂಡು ಬಂದವನೆ ನಡೆದುಕೊಂಡು ಹೋಗು ತ್ತಿದ್ದ ನನಗೆ ಜೋರಾಗಿ ಡಿಕ್ಕಿ ಕೊಟ್ಟು ತನ್ನ ಆಟೋವನ್ನು ನಿಲ್ಲಿಸದೇ ಹಾಗೇಯೇ ಓಡಿಸಿಕೊಂಡು
ಹೋಗಿದ್ದು ಇದರಿಂದ ನನಗೆ ಭಾರಿ ರಕ್ತಗಾಯ ಮತ್ತು
ಗುಪ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 367/12 ಕಲಂ 279 337 ಐಪಿಸಿ
ಸಂ/ 187 ಐಎಂವಿ ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ
ಠಾಣೆ : ಶ್ರೀ ಸೂರ್ಯಕಾಂತ ತಂದೆ ಶ್ರೀಮಂತ ತಳಕೇರಿ ವ:26 ವರ್ಷ ಸಾ: ಆಶ್ರಯ ಕಾಲನಿ ಫೀಲ್ಟರ
ಬೇಡ ಗುಲಬರ್ಗಾ ರವರು ದಿನಾಂಕ
15-11-12 ರಂದು ಮಾಣಿಕ ಪರಿಚಯದವರು ಕಮಲಾಪುರದಲ್ಲಿ ಸತ್ತಿದ್ದರಿಂದ ಮಣ್ಣಿಗೆ ಸಿದ್ದಾರೂಢನ ಹಿರೋ
ಹೊಂಡಾ ಸಿಡಿ 100 ಕೆಎ 32 ಕೆ 2421 ನೇದ್ದರ ಮೇಲೆ ಕುಳಿತುಕೊಂಡು ಕಮಲಾಪೂರಕ್ಕೆ ಹೊರಟಿದ್ದು.
ಮೋಟಾರ ಸೈಕಲ ಮಾಣಿಕ ನಡೆಸುತ್ತಿದ್ದು ಮಧ್ಯದಲ್ಲಿ ಕುಳಿತಿದಿದ್ದು, ಹಿಂದೆ ಸಿದ್ದಾರೂಢ ಇತನು
ಕುಳಿತಿದಿದ್ದು, ಉಪಳಾಂವ ಕ್ರಾಸ ದಾಟಿ
ಬಿರಾದಾರ ಪೆಟ್ರೋಲ ಪಂಪಿಗೆ ಹೋಗಿ ಪೆಟ್ರೋಲ ಹಾಕಿಸಿಕೊಂಡು ಕಮಲಾಪೂರಕ್ಕೆ ಹೋಗಬೇಕೆಂದು
ರೋಡ ಕ್ರಾಸ ಮಾಡುತ್ತಿದ್ದಾಗ ಅದೇ ಸಮಯಕ್ಕೆ ಹುಮನಾಬಾದ ರೋಡ ಕಡೆಯಿಂದ ಒಬ್ಬ ಕ್ರರ್ಜುರ ಕೆಎ 32 ಬಿ 5390 ಚಾಲಕ
ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಯಾವುದೇ ಮನ್ಸೂಚನೇ ನೀಡದೆ ಮತ್ತು ಹಾರ್ನ ಹಾಕದೇ
ವೇಗದಿಂದ ನಡೆಸುತ್ತಾ ಬಂದವನೇ ರೋಡ ಕ್ರಾಸ ಮಾಡುತ್ತಿದ್ದ
ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಕ್ರೋಜರ ನಿಲ್ಲಿಸಿ, ಓಡಿ
ಹೋಗಿದ್ದು, ಮಾಣಿಕ ಮತ್ತು ಸಿದ್ದಾರೂಢ ಇವರಿಗೆ
ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮಿಣ ಠಾಣೆ ಗುನ್ನೆ 368/2012
ಕಲಂ 337,279,304 ಎ ಐಪಿಸಿ ಸಂಗಡ 187 ಐಎಮ್ ವಿ ಆ್ಯಕ್ಡ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ
ಠಾಣೆ :ದಿ:
15-11-2012ರಂದು 6 ಪಿ.ಎಂ.ಕ್ಕೆಪಿ,ಎಸ್.ಐ. (ಕಾ&ಸೂ) ಮತ್ತು ಸಿಬ್ಬಂದಿಯವರು ಬೇಲೂರ ಕ್ರಾಸ
ನಿಂತಿರುವಾಗ ಅದೇವೇಳೆಗೆ ಕ್ರೋಜರ ನಂ.ಕೆ.ಎ.36-5042 ನೆದ್ದರ ಚಾಲಕ ಆಪಾದಿತ ಶಾಂತಕುಮಾರ
ಶಟಗಾರ ಇತನು ತನ್ನ ಕ್ರೋಜರ ವಾಹನದ ಟಾಪ ಮೇಲೆ ಮತ್ತು ಫೂಟ ರೆಸ್ಟ ಮೇಲೆ ಪ್ರಯಾಣಿಕರನ್ನು ಕೂಡಿಸಿಕೊಂಡು ಅತೀವೇಗ ಮತ್ತು ಮಾನವ ಜೀವಕ್ಕೆ ಅಪಾಯ
ವಾಗುವ ರೀತಿಯಲ್ಲಿ ನಿಸ್ಕಾಳಜಿತನದಿಂದ ನಡೆಯಿಸಿ
ಕೊಂಡು ಪರವಾನಿಗೆ ನಿಯಮ ಉಲ್ಲಂ ಘಿಸಿ ಹೋಗುತ್ತಿರುವಾಗ ನಿಲ್ಲಿಸಿ ಸದರಿ ಆಪಾದಿತನ ಮೇಲೆ ಗ್ರಾಮೀಣ ಠಾಣೆ ಗುನ್ನೆ ನಂ 369/12 ಕಲಂ 279,336 ಐಪಿಸಿ. ಸಂಗಡ 192 (ಎ) ಐಎಂವಿ ಅ್ಯಕ್ಟ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ :ದಿ: 15-11-2012 ರಂದು 8-00 ಪಿ.ಎಂ.ಕ್ಕೆ ಪಿ,ಎಸ್.ಐ. (ಕಾ&ಸೂ) ಮತ್ತು ಸಿಬ್ಬಂದಿಯವರು ಕಪನೂರ ಕ್ರಾಸ ಹತ್ತಿರ ನಿಂತಿರುವಾಗ ಅದೇವೇಳೆಗೆ ಕ್ರೋಜರ ನಂ.ಕೆ.ಎ.28-ಎ 0163
ನೆದ್ದರ ಚಾಲಕ ಆಪಾದಿತ ಶಾಂತು ಧನವಂತ್ರಿ ಇತನು
ತನ್ನ ಕ್ರೋಜರ ವಾಹನದ ಟಾಪ ಮೇಲೆ ಮತ್ತು ಫೂಟ ರೆಸ್ಟ ಮೇಲೆ
ಪ್ರಯಾಣಿಕರನ್ನು ಕೂಡಿಸಿಕೊಂಡು ಅತೀವೇಗ
ಮತ್ತು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ
ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಪರವಾನಿಗೆ ನಿಯಮ ಉಲ್ಲಂಘಿಸಿ ಹೋಗುತ್ತಿರುವಾಗ
ನಿಲ್ಲಿಸಿ ಸದರಿ ಆಪಾದಿತನ ಮೇಲೆ ಗ್ರಾಮೀಣ ಠಾಣೆ ಗುನ್ನೆ ನಂ 370/12 ಕಲಂ 279,336 ಐಪಿಸಿ. ಸಂಗಡ 192 (ಎ) ಐಎಂವಿ ಎಕ್ಟ. ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಳ್ಳಲಾಗಿದೆ.
ವಂಚನೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ :ದಿನಾಂಕಃ 02/11/2012
ರಂದು 07:00 ಪಿ.ಎಮ ಕ್ಕೆ ಫಿರ್ಯಾದಿ ಶ್ರೀ ಪೃತ್ವಿರಾಜ ತಂದೆ ಶಿವರಾಯ ಜವಳಗಿ ವಯಃ 41 ವರ್ಷ ಸಾಃ
ಲೇಂಗಟಿ ಗ್ರಾಮ ತಾಃ ಆಳಂದ ಜಿಃ ಗುಲಬರ್ಗಾ ಇವರು
ಮತ್ತು ಇತರರಿಗೆ 1) ಸುರೇಶ ತಂದೆ ಮನ್ನು
ರಾಠೊಡ ವಃ 30 ವರ್ಷ ಜಾಃ ಲಮಾಣಿ ಸಾಃ ಹೋದ್ಲೂರ ತಾಂಡಾ
ತಾಃ ಆಳಂದ ಜಿಃ ಗುಲಬರ್ಗಾ 2)ಮಹ್ಮದ ಅಲಿ @ ಮಾಮು @ ಮಹ್ಮದ ತಂದೆ ನೂರ
ಭಾಯಿ ಪಲಾಸರಾ ವಃ 62 ವರ್ಷ ಉಃ ವ್ಯಾಪಾರ ಸಾಃ ಮನೆ ನಂ 8- 4 ನೇ ಕ್ರಾಸ ನಂಜಪ್ಪಾ ಸರ್ಕಲ್ ಶಾಂತಿ
ನಗರ ಬೆಂಗಳೂರ ಹಾವಃ ಗುಜರಾತ್,3) ಮೋಯಿಸ್ ಅಲಿ
ತಂದೆ ಮಹ್ಮದ ಅಲಿ @ ಮಾಮು @ ಮಹ್ಮದ ಪಲಾಸರಾ ವಃ 27 ವರ್ಷ ಜಾಃ ಮುಸ್ಲಿಂ ಉಃ ಮೊಬೈಲ್ ರಿಪೇರಿ
ಸಾಃ ಮನೆ ನಂ 8- 4 ನೇ ಕ್ರಾಸ ನಂಜಪ್ಪಾ
ಸರ್ಕಲ್ ಶಾಂತಿ ನಗರ ಬೆಂಗಳೂರ, 4) ಇರ್ಫಾನ ಅಲಿ ತಂದೆ ಮಹ್ಮದ ಅಲಿ @ ಮಾಲು
@ ಮಹ್ಮದ
ಪಲಾಸರಾ ಸಾಃ ಮನೆ 8- 4 ನೇ ಕ್ರಾಸ ನಂಜಪ್ಪಾ ಸರ್ಕಲ್
ಶಾಂತಿ ನಗರ ಬೆಂಗಳೂರ ಇವರು
ಫಿರ್ಯಾದಿದಾರರಿಗೆ ಮತ್ತು ಅವರ ಗ್ರಾಮದವರಿಗೆ ಹೀಗೆ ಒಟ್ಟು 12 ಜನರಿಗೆ ಹೊರದೇಶಕ್ಕೆ ಅಂದರೆ
ಮಲೇಶಿಯಾಕ್ಕೆ ಕಳುಹಿಸುತ್ತೇವೆ ಅಂತಾ ನಂಬಿಸಿ ಸುಳ್ಳು ದಾಖಲಾತಿ ಸೃಷ್ಟಿಸಿ ಪ್ರತಿಯೊಬ್ಬರಿಂದ
55,000/- ರೂ. ನಂತೆ ಒಟ್ಟು 6,60,000/- ರೂ ಮೋಸದಿಂದ ಹಣ ತೆಗೆದುಕೊಂಡು
ಮಲೇಶಿಯಾ ದೇಶಕ್ಕೆ ಕೆಲಸಕ್ಕೆ ಕಳುಹಿಸುತ್ತೇವೆ ಅಂತಾ ಹೇಳಿ ಮೋಸ ಮಾಡಿರುತ್ತಾರೆ ಸದರಿಯವರ
ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣಾ
ಗುನ್ನಾ ನಂ 116/2012 ಕಲಂ 406, 417, 420, 468, 471 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಇಸ್ಪೀಟ
ಜುಜಾಟದ ಪ್ರಕರಣಗಳು :
ಶಾಹಾಬಾದ ನಗರ ಠಾಣೆ :ಶ್ರೀ ಎಸ್.ಎಸ್.ಹುಲ್ಲೂರ ಪಿಐ ಡಿಸಿಐಬಿ
ಗುಲಬರ್ಗಾ ರವರು ಮತ್ತು ಸಿಬ್ಬಂದಿಯವರು ಕುಡಿಕೊಂಡು ಶಹಾಬಾದದ ಶ್ರೀ ರಾಜು ಮೇಸ್ತ್ರೀರವರ ಮನೆಯ ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ ಎಂಬ
ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ ಹೊನ್ನಪ್ಪಾ ತಂದೆ ಮರೇಪ್ಪಾ ತೆಗನೂರ ಸಂ:6 ಜನರು ಸಾ:ಎಲ್ಲರೂ ಶಹಾಬಾದ ಇವರನ್ನು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು
ಅದರಲ್ಲಿ ಒಬ್ಬನು ಓಡಿ ಹೋಗಿದ್ದು ಸದರಿಯವರಿಂದ 2450/-ರೂ ಹಣ ಮತ್ತು 52 ಇಸ್ಪೀಟ ಎಲೆಗಳು ಜಪ್ತಿಪಡಿಸಿಕೊಂಡಿದ್ದರ
ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆ ಗುನ್ನೆ ನಂಬರ 151/2012 ಕಲಂ:87 ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment