Police Bhavan Kalaburagi

Police Bhavan Kalaburagi

Friday, November 9, 2012

BIDAR DISTRICT DAILY CRIME UPDATE 09-11-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 09-11-2012
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 212/12 ಕಲಂ 279, 338, 304(ಎ) ಐಪಿಸಿ :-

ದಿ:09/11/2012 ರಂದು  ಪಿರ್ಯಾದಿ ಖಾಜಾಮಿಯಾ ಮೋಜನ ಸಾ/ಜಲಸಂಗಿ   ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯು ರಾತ್ರಿ   ಹೋಟೆಲದಲ್ಲಿ ಮಲಗಿದ್ದು ಮೂತ್ರ ವಿಸರ್ಜನೆ ಮಾಡುವ ಸಲುವಾಗಿ ನಿದ್ರೆಯಿಂದ ಎದ್ದಾಗ ದುಬಲಗುಂಡಿ ಕ್ರಾಸ ಹತ್ತಿರ ಒಂದು ಲಾರಿ ರೋಡಿನ ಮೇಲೆ ಸೈಡಿಗೆ ಇಂಡಿಕೇಟರ ಹಾಕಿ ನಿಲ್ಲಿಸಿದ್ದು ರಾತ್ರಿ 02-00 ಗಂಟೆಯ ಸುಮಾರಿಗೆ  ಹುಮನಾಬಾದ ಕಡೆಯಿಂದ ಬಂದ ಒಂದು ಟೆಂಪೊ ನೇದರ ಚಾಲಕನು ತನ್ನ ವಾಹನ ಅತಿ ಜೋರಾಗಿ ಮತ್ತು ಬೇಜವಾಬ್ದಾರಿಯಿಂದ ನಡೆಸಿಕೊಂಡು ಹೋಗಿ ಲಾರಿಯ ಹಿಂದೆ ಡಿಕ್ಕಿ ಹೋಡೆದು ಅಪಘಾತ ಮಾಡಿರುತ್ತಾನೆ. ಫಿರ್ಯಾದಿಯು ಸಮೀಪಕ್ಕೆ ಹೋಗಿ ನೋಡಲು ಲಾರಿ ನಂ ಕೆಎ.39-3487 ಇದ್ದು ಅದರ ಎಡಗಡೆಯ ಹಿಂದಿನ ಟೈರ ಪಂಕಚರ ಆಗಿದ್ದು ಅದರ ಚಾಲಕ ಮತ್ತು  ಅದರ ಕ್ಲೀನರ ಇಬ್ಬರು ಕೂಡಿಕೊಂಡು ರಿಪೇರಿಗಾಗಿ ಲಾರಿಗೆ ಜಾಕ ಹಚ್ಚುತ್ತಿರುವಾಗ ಮಹಿಂದ್ರಾ ಪಿಕಪ್ ಟೆಂಪೊ ನಂ ಕೆಎ.325..8172 ನೇದರ ಚಾಲಕನು ಅಪಘಾತ ಮಾಡಿದ್ದರಿಂದ  ಲಾರಿಯ ಹಿಂದೆ ಕೆಳಗೆ ಕೆಲಸ  ಮಾಡುತ್ತಿದ್ದ ಲಾರಿ ಚಾಲಕನಾದ .ಫಕರೋದ್ದಿನ ಸಾ: ಬೀದರ ಇತನಿಗೆ ತಲೆಯ ಮೇಲೆ ಭಾರಿ ಗಪ್ತಗಾಯವಾಗಿ ಮೂಗಿನಿಂದ ರಕ್ತ ಸೋರಿದ್ದು ಎಡ ಭುಜಕ್ಕೆ ಎಡ ಕೈಗೆ ಎಡ ಟೊಂಕಿನ ಮೇಲೆ ಭಾರಿ ಗುಪ್ತಗಾಯಗಳಾಗಿದ್ದರಿಂದ ಸ್ಧಳದಲ್ಲೆ ಮೃತ ಪಟ್ಟಿರುತ್ತಾನೆ. ಲಾರಿ ಕ್ಲಿನರನಾದ ಸುನೀಲ ಟೆಂಪೊ ಚಾಲಕನಾದ ಸಂತೋಷಕುಮಾರ  ಸಾ:ಬೀದರ  ಭಾರಿ ಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ.  ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸುನೀಲ  ಎನ್ನುವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.   

ಔರಾದ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/12 ಕಲಂ 174 ಸಿಆರ್.ಪಿ.ಸಿ :-
ದಿನಾಂಕ 08-11-2012 ರಂದು 1300 ಗಂಟೆಗೆ ಫಿರ್ಯಾದಿ ನೇತಾಜಿ ತಂದೆ ರಾಮರಾವ ಬಾಗದೆ ಸಾ// ಸಾವಳಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫೀರ್ಯಾದಿಯ ಸಹೊದರಿ ಕೌಶಲ್ಯಾ ಇವಳು ನಮ್ಮ ಸಮ್ಮತಿ ಇಲ್ಲದೆ ಮುಂಗನಾಳ ಗ್ರಾಮದ ರಾಜಕುಮಾರ ತಂದೆ ದಿಗಂಬರ ಕದಮ ಇತನ್ನೊಂದೆಗೆ ಪ್ರಿತಿಸಿ 6 ತಿಂಗಳ ಹಿಂದೆ ಮದುವೆ ಯಾಗಿದ್ದು ಆಕೆ ತನ್ನ ಗಂಡನ ಮನೆಯಲ್ಲಿ ಚೆನ್ನಾಗಿದಳು ನನ್ನ ತಂಗಿ ಎಂಟು ದಿವಸದ ಹಿಂದೆ ಗರ್ಭೀಣಿ ಇದ್ದ ಬಗ್ಗೆ ವೈಧ್ಯರಿಂದ ತಪಾಷಣೆ ಮಾಡಿದ್ದಾಗ ವೈಧ್ಯರು ಗರ್ಭೀಣಿ ಇಲ್ಲಾ ಅಂತ ಹೇಳಿದಕ್ಕೆ ಮನನೊಂದು ತನ್ನ ಮನಸ್ಸಿನ ಮೇಲೆ ಪರೀಣಾಮ ಮಾಡಿಕೊಂಡು ದಿನಾಂಕ 07-11-2012 ರಂದು ನಸುಕಿನ ಜಾವ 0500 ಗಂಟೆಯ ಸುಮಾರಿಗೆ ಮುಂಗನಾಳ ಕೆರೆಯಲ್ಲಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾಳೆ ಅಂತ ದಿ: -8-11-2012 ರಂದು ನೀಡಿದ ದೂರಿನ ಸಾರಾಂಶದ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 190/2012 ಕಲಂ 279, 337 ಐಪಿಸಿ ಜೊತೆ 187 ಐ.ಎಂ.ವಿ. ಕಾಯ್ದೆ :-
ದಿನಾಂಕ 08/11/2012 ರಂದು 1300 ಗಂಟೆಗೆ ರಾ.ಹೆ.ನಂ 09ರ ಮೇಲೆ ಉಮಾಪೂರ ಕ್ರಾಸ ಹತ್ತಿರ ರಸ್ತೆ ಮೇಲೆ ಆರೋಪಿತ    ಟಾಟಾ ಗೂಡ್ಸ ಟೆಂಪೋ ನಂ ಎಂ.ಹೆಚ್. 43/ವಾಯ್ 8888 ನೇದ್ದನ್ನು ಹುಮನಾಬಾದ ಕಡೆಯಿಂದ ಉಮರ್ಗಾ ಕಡೆಗೆ  ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ರೋಡಿನ ಎಡಭಾಗಕ್ಕೆ ಪಲ್ಟಿ ಮಾಡಿ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಡಿಕ್ಕಿಯ ಪ್ರಯುಕ್ತ ಫಿರ್ಯಾದಿ ಮಹೇಶ ತಂದೆ ಅನೀಲ ಬಾಂಗೆ ರವರಿಗೆ ರಕ್ತಗಾಯವಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 132/12 ಕಲಂ 279,338 ಐಪಿಸಿ. :-
ದಿನಾಂಕ 08/11/2012 ರಂದು 1530 ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು 8 ವರ್ಷದ ಬಾಲಕ ಸೈಯದನ ತಂದೆ ಫಿರ್ಯಾದಿ ಶ್ರೀ ಚಾಂದಪಾಶಾ ತಂದೆ ಸೈಯದಸಾಬ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಸೈಯದ ಇತನು ತನ್ನ ಸೈಕಲ ತೆಗೆದುಕೊಂಡು ಆಡುತ್ತಾ  ಭವಾನಿ ಮಂದಿರದ ಕಡೆಯಿಂದ ರೋಡ ಕ್ರಾಸ್ ಮಾಡುತ್ತಿರುವಾಗ ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಎಮ್.ಕೆ.ಜಿ. ಕಿರಾಣಿ ಅಂಗಡಿಯ ಎದುರುಗಡೆ ಚಿಟಗುಪ್ಪಾದಿಂದ ಎಲಮಡಗಿ ಕಡೆಗೆ ಹೋಗುತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆಎ-38/ಎಫ್-485 ನೆದ್ದರ ಚಾಲಕ ು ವೀರಣ್ಣಾ ತಂದೆ ನಾಗಣ್ಣಾರೆಡ್ಡಿ ಇತನು ಬಸ್ಸನ್ನು ಅತಿ ವೇಗ ಹಾಗೂ ನಿಸ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ತನ್ನ ಮಗ ಸೈಯದ ಈತನಿಗೆ ಡಿಕ್ಕಿ ಮಾಡಿ ರಕ್ತಗಾಯ ಪಡಿಸಿರುತ್ತಾನೆ.  ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 254/12 ಕಲಂ 41(ಡಿ) 102 ಸಿಆರ್ಪಿಸಿ ಜೊತೆ 379 ಐಪಿಸಿ :-
ದಿನಾಂಕ 08-11-2012 ರಂದು ಸಂಜೆ 1800 ಗಂಟೆಗೆ  ಎ.ಎಸ್.ಐ ಮಾದಪ್ಪಾ ಹಾಗೂ ಸಿ.ಹೆಚ್.ಸಿ. 771, ಕಲ್ಲಪ್ಪಾ  ರವರು  ಪೊಲೀಸ್ ಜೀಪ್ ನಲ್ಲಿ ನೂತನ ನಗರ ಪೊಲೀಸ್ ಠಾಣೆ ಸರಹದ್ದಿಯಲ್ಲಿ ಪೇಟ್ರೋಲಿಂಗ್ ನಿರ್ವಹಿಸಿಕೊಂಡು ಬಸ್ ನಿಲ್ಧಾಣ, ಶಿವನಗರ, ನೌಬಾದ್,  ದೇವಿಕಾಲೋನಿ, ಜ್ಯೋತಿ ಕಾಲೋನಿ, ನಂದಿ ಕಾಲೋನಿ ದಿಂದ ರೇಲ್ವೇ ಸ್ಠೇಷನ್ ರೋಡ್ ಕಡೆ ಸುಜಾತ ಬಾರ್ ಎದುರಗಡೆ ರಾತ್ರಿ 1900 ಗಂಟೆಗೆ ಹೋದಾಗ ಅಲ್ಲಿ ಒಬ್ಬ ಹುಡುಗನು ಒಂದು ಮೋಟಾರ್ ಸೈಕಲ್ ಮೇಲೆ ಕುಳಿತು ಓಡು ಹತ್ತಿದ್ದಾಗ  ಅವನನ್ನು ಸಂಶಯ ಬಂದು ಬೆನ್ನು ಹತ್ತಿ ಹಿಡಿದು ದಸ್ತಗಿರಿ ಮಾಡಿಕೊಂಡು ವಿಚಾರಿಸಲು ಅವನ ಹತ್ತಿರ ಇದ್ದ ಒಂದು ಹೀರೋ ಹೋಂಡಾ ಫ್ಯಾಷನ್ ಮೋಟಾರ್ ಸೈಕಲ್ ನಂ. ಕೆಎ-32-ಕ್ಯೂ-5758 ಇದ್ದು ಚಾಸಿಸ್ ನಂ.022129858  ಇಂಜಿನ್ ನಂ. 022127947 ಅಂದಾಜು ಕಿಮ್ಮತ್ತು 35,000/- ರೂ .ಕಪ್ಪು ಬಣ್ಣ, ನೀಲಿ ಸ್ಟೀಕರ್ ಇದ್ದು, ಸದರಿ ಆರೋಪಿತನ ಹೆಸರು ವಿಚಾರಿಸಿದಾಗ ಮಹೇಶ್ ತಂದೆ ಚಂದ್ರಶೆಟ್ಟಿ ಪವಾರ್, ವಯಸ್ಸು 20 ವರ್ಷ  ಜಾತಿ: ಲಂಬಾಣಿ, ಉ:ಡ್ರ್ಯಾವರ್, ಸಾ: ಸಂಗಮೇಶ್ವರ್   ಕಾಲೋನಿ ಬೀದರ್ ಇದ್ದು, ಸದರಿ ಆರೋಫಿತನ ಹತ್ತಿರ ಇದ್ದ ಮೋಟಾರ್ ಸೈಕಲ್ ಬಗ್ಗೆ ವಿಚಾರಿಸಿದಾಗ ಸದರಿ ಮೋಟಾರ್ ಸೈಕಲ್ದ ಯಾವುದೇ ತರಹದ ಕಾಗದ ಪತ್ರಗಳು ಇಲ್ಲದೇ ಕಳವು ಮಾಡಿಕೊಂಡು ಮಾರಾಟ ಮಾಡಲು ಹೋಗುವಾಗ ದಸ್ತಗಿರಿ ಮಾಡಿ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: