Police Bhavan Kalaburagi

Police Bhavan Kalaburagi

Friday, November 9, 2012

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ್ ಕಾರ್ಯಚರಣೆ,
ಅನಧಿಕೃತ ಆಯುಧಗಳು ಮಾರಾಟ ಮಾಡುತ್ತಿರುವ ಆರೋಪಿತರ ಬಂದನ,
       
ಇತ್ತಿಚಿಗೆ ಗುಲಬರ್ಗಾ ನಗರದಲ್ಲಿ ಅನಧಿಕೃತವಾಗಿ ಪರವಾನಿಗೆ ಇಲ್ಲದೇ ಆಯುಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ್ದಿದ್ದು, ಮಾಹಿತಿ ಅನ್ವಯ  ದಾಳಿ ಮಾಡಿ ಕ್ರಮ ಜರೂಗಿಸಲು ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, 1) ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾ, ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ ಬಸವರಾಜ, ಹೆಚಸಿ ಗಳಾದ ಬಸವರಾಜ ಪಾಟೀಲ, ಪ್ರಕಾಶ, ಅಣ್ಣರಾವ, ಶಿವಯೋಗಿ, ಲಕ್ಕಪ್ಫಾ, ವಿಜಯಕುಮಾರ, ಅಣ್ಣಪ್ಪಾ ಬೆಳ್ಳಿ, ವಾಹನ ಚಾಲಕ ವೀರಣ್ಣಾ ಎಪಿಸಿ, ಮತ್ತು 2) ಶ್ರೀ ಶರಣಬಸವೇಶ್ವರ ಪೊಲೀಸ್ ಇನ್ಸಪೇಕ್ಟರ ಬ್ರಹ್ಮಪೂರ ಠಾಣೆ, ಮತ್ತು ಪಿ.ಎಸ.ಐ ಬಸವರಾಜ ತೇಲಿ ಪಿ.ಎಸ.ಐ ರಾಘವೇಂದ್ರ  ನಗರ ಠಾಣೆ, ಮತ್ತು ಹಾಗು ರಾಘವೇಂದ್ರ ನಗರ ಠಾಣೆಯ ಹೆಚ.ಸಿ ಪಾಂಡುರಂಗ, ಮತ್ತು (ಎ) ಉಪ-ವಿಭಾಗ ಅಪರಾದ ಪತ್ತೆ ದಳದ  ಸಿಬ್ಬಂದಿಗಳಾದ ರಪೀಕ, ದೇವಿಂದ್ರ, ಗುಲಬರ್ಗಾ ರವರು  ನಗರದ ಮಹ್ಮದಿ ಚೌಕ ಹತ್ತಿರ ದಾಳಿ ಮಾಡಿ, 1) ಪ್ರಕಾಶ ತಂದೆ ಕುಪ್ಪಣ್ಣ ಭೂತಿ,ಸಾ|| ಅಪಜಲಪೂರ, 2) ರವಿಕಾಂತ ತಂದೆ ನಾಗೇಂದ್ರಪ್ಪಾ ಬೈರಾಮಡಗಿ ಸಾ|| ಬೈರಾಮಡಗಿ ತಾ|| ಅಪಜಲಪೂರ, 3) ಸಿದ್ದಾರ್ಥ ತಂದೆ ಅಶೋಕ ಲಾಖೆ ಸಾ|| ಕೋರ್ಟ ರೋಡ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ಇವರ ವಶದಿಂದ ಒಂದು ನಾಡ್  ರಿವಾಲ್ವಾರ, ಒಂದು ನಾಡ್ ಪಿಸ್ತೂಲ್, ನಾಲ್ಕು ಜೀವಂತ ಮದ್ದು ಗುಂಡುಗಳು,ಹೀಗೆ ಒಟ್ಟು ಅ||ಕಿ|| 80,000/-  ಬೆಲೆ ಬಾಳುವ ಆಯುಧಗಳನ್ನು ಜಪ್ತಿ ಮಾಡಿ ಕ್ರಮ ಜರೂಗಿಸಿರುತ್ತಾರೆ.
ಈ ಎರಡು ವಿಶೇಷ ತಂಡಗಳು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು,  ಶ್ರೀ ಭೂಷಣೆ ಭೋರಸೆ ಎ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.
ಈ ಎರಡು ವಿಶೇಷ ತನಿಖಾ ತಂಡಗಳ ಪತ್ತೆ ಕಾರ್ಯವನ್ನು  ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.  

No comments: