ದರೋಡೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸುಭಾಷ ತಂದೆ ಗಿರೇಪ್ಪಾ ಬಾಲಖೆಡ್ ಸಾ:ರೇವಣಸಿದ್ದೇಶ್ವರ ಕಾಲೋನಿ ಗುಲ್ಬರ್ಗಾರವರು ನಾನು ದಿನಾಂಕ:08/11/2012 ರಂದು ನಮ್ಮ ಮಾಲೀಕರ ಟ್ಯಾಂಕರ ನಂ.ಎಮ್.ಹೆಚ್-11,ಎಮ್-3991 ನೇದ್ದರಲ್ಲಿ ಸೀಮೆಎಣ್ಣೆ ನಂದೂರ ಡಿಪೋದಲ್ಲಿ ತುಂಬಿಕೊಂಡು ಚಿತ್ತಾಪುರ ತಾಲ್ಲೂಕಿನ ಹಳ್ಳಿಗಳಾದ ನಾಲವಾರ ಗೇಟ್ ಹತ್ತಿರ ಇರುವ ಬಾಲು ನಾಯಕ ತಾಂಡಾ, ಮಾರಡಿಗ್ರಾಮ, ಕೊಲ್ಲೂರ ಗ್ರಾಮ ವಿ.ಎಸ್.ಎಸ್.ಎನ್, ಕನಗನಹಳ್ಳಿ, ಸನ್ನತಿ, ರಾಂಪೂರ ಹಳ್ಳಿ, ಶಾಂಫೂರ ಹಳ್ಳಿ, ತರಕಸಪೇಟ ಗ್ರಾಮ, ಸೂಗೂರ [ಎನ್] ಗ್ರಾಮಗಳಿಗೆ ಹೋಗಿ ಸೀಮೆಎಣ್ಣೆ ಕೊಟ್ಟು ವಾಪಾಸ ಗುಲಬರ್ಗಾಕ್ಕೆ ವಾಡಿ ಬೈಪಾಸ ರೋಡಿನಿಂದ ರಾವೂರ ಮುಖಾಂತರ ಬರುವಾಗ ಭಂಕೂರ ಕ್ರಾಸ ದಾಟಿ ಬ್ರೀಡ್ಜ ಹತ್ತಿರ 10.30 ಗಂಟೆ ಸುಮಾರಿಗೆ ಹಿಂದುಗಡೆಯಿಂದ 4 ಮೋಟಾರ ಬೈಕ ಮೇಲೆ 7-8 ಜನರು ಬಂದು ಟ್ಯಾಂಕರ ಎದರುಗಡೆ ಬಂದು ಟ್ಯಾಂಕರ ತಡೆದು ಹೆದರಿಸಿ ಮಚ್ಚು ತೊರಿಸಿ ಕೈಯಿಂದ ಹೊಡೆದು ಒಂದು ಖಾಕಿ ಕಲರ ಬ್ಯಾಗಿನಲ್ಲಿದ್ದ 1,85,500/-ರೂ ಹಣ, 3 ಮೊಬೈಲ ಸೆಟಗಳು ಅ.ಕಿ.3700/-,ಒಂದು ಕ್ಯಾಲಕುಲೇಟರ ಅ.ಕಿ. 80/- ಒಂದು ಕನ್ನಡಕ ಅ.ಕಿ. 400/- ರೂ ನೇದ್ದವುಗಳನ್ನು ಹೀಗೆ ಒಟ್ಟು 1,89,680/- ರೂ. ನೇದ್ದವುಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2012 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:-08/11/2012 ರಂದು ಮುಂಜಾನೆ 09:30 ಗಂಟೆಗೆ ಫಿರ್ಯಾದಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಮಾಡುತ್ತಾ ಹಾಗರಗಾ ಕ್ರಾಸ ಕಡೆಗೆ ಹೋದಾಗ ಹಾಗರಗಾ ಕ್ರಾಸದಲ್ಲಿ ಸರಫರಾಜ ತಂದೆ ಎಂ.ಡಿ ಇಸಾ ವಯಾ:24 ವರ್ಷ ಜಾ:ಮುಸ್ಲಿಂ ಸಾ:ನೂರಾನಿ ಮೊಹಲ್ಲಾ ಹಾಗರಗಾ ಕ್ರಾಸ ಗುಲಬರ್ಗಾ ಇತನು ರೋಡಿನ ಮೇಲೆ ನಿಂತುಕೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಅವಾಶ್ಚವಾಗಿ ಬೈಯುತ್ತಾ ಹೋಗಿ ಬರುವ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದರಿಂದ ಸದರಿಯವನಿಗೆ ಮುಂಜಾಗ್ರತಾ ಕ್ರಮ ಅಡಿಯಲ್ಲಿ ದಸ್ತಗಿರಿ ಮಾಡಿ ಠಾಣೆ ಗುನ್ನೆ ನಂ: 359/2012 ಕಲಂ, 110 (ಈ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ದತ್ತಪ್ಪಾ ತಂದೆ ಲಿಂಗಪ್ಪ ಸುಂಟನೂರ ಸಾ:ಹತಗುಂದಾ ತಾ:ಜಿ:ಗುಲಬರ್ಗಾ ರವರು ನಾನು ದಿ:08-11-2012 ರಂದು ಮುಂಜಾನೆ ಶಿವಪುತ್ರ ಮದರಿ ಇತನು ನಡೆಯಿಸುತಿದ್ದ ಬಜಾಜ ಡಿಸ್ಕವರಿ ಮೋಟಾರ ಸೈಕಲ್ ನಂ.ಕೆ.ಎ32 ಇಬಿ-6690 ನೇದ್ದರ ಹಿಂದೆ ಕುಳಿತು ಹತಗುಂದಾ ಗ್ರಾಮದಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಗುಲಬರ್ಗಾ- ಆಳಂದ ರೋಡನ ಕೆರಿಬೋಸಗಾ ದಾಟಿ ಸಂತೋಷ ದಾಬಾದ ಎದರುಗಡೆ ಮೋಟಾರ ಸೈಕಲ್ ಚಾಲಕ ಶಿವಪುತ್ರ ಇತನು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿ ರೋಡಿನ ಬದಿಗೆ ಅಪಘಾತ ಪಡಿಸಿ ನನಗೆ ಮತ್ತು ಶಿವಪುತ್ರ ಇತನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 360/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment