Police Bhavan Kalaburagi

Police Bhavan Kalaburagi

Monday, November 19, 2012

GULBARGA DISTRICT REPORTED CRIMES


ಕೊಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಅಂಬರಾಯ ತಂದೆ ಗುಂಡಪ್ಪಾ ಗೋಳಾ ಸಾ||ಕೆರಿಬೋಸಗಾ  ಗ್ರಾಮ ತಾ||ಜಿ||ಗುಲಬರ್ಗಾ ರವರು ನಾನು  ದಿನಾಂಕ. 18-11-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಮನೆಯಲ್ಲಿ ಇದ್ದಾಗ ದನ ಕಾಯುವ ಹುಡುಗರು ನಾನು ಪಾಲಿಗೆ ಮಾಡಿರುವ ಸುಧಾಕರ ಜೋಶಿ ಇವರ ಹೊಲದ ಬಂದಾರಿಯಲ್ಲಿ ಒಂದು ಗಂಡು ಮನುಷ್ಯನ ಹೇಣ ಬಿದ್ದಿರುತ್ತದೆ ಅಂತಾ ತಿಳಿದುಕೊಂಡು ನಾನು ಪಾಲಿಗೆ ಮಾಡಿರುವ ಸುಧಾಕರ ಜ್ಯೋಶಿ ಇವರ ಹೊಲಕ್ಕೆ ಬಂದು ನೋಡಲು ಹೊಲದ ಪೂರ್ವದ ಬಂದಾರಿಗೆ ಹೊಂದಿ ಒಬ್ಬ ಅಪರಿಚಿತ ಗಂಡು ಮನುಷ್ಯನ ಹೆಣವು ಅಂಗಾತವಾಗಿ ಬಿದಿದ್ದು ನೋಡಲಾಗಿ ಅಂದಾಜು 40- 50 ವರ್ಷದವನಿದ್ದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದರಿಂದ ತಲೆಯ ಮೇಲೆ ಭಾರಿ ರಕ್ತಗಾಯ ವಾಗಿದ್ದು,ಮುಖ ಚಪ್ಪಟೆಯಾಗಿರುತ್ತದೆ ,ಮೂಗಿನಿಂದ,ಕಿವಿಯಿಂದ ರಕ್ತಸ್ರಾವವಾಗಿರುತ್ತದೆ,ಕುತ್ತಿಗೆಯ ಸುತ್ತಲು ಉರುಲು ಹಾಕಿದಂತೆ ಕಂದು ಕಟ್ಟಿದ್ದ ಗಾಯಗಳು ಕಂಡು ಬರುತ್ತವೆ.ತೆಳ್ಳನೆಯ ಮೈಕಟ್ಟು ಇದ್ದು,ಬಲಗೈ ಮೋಳಕೈ ಮೇಲೆ ರಾಜಕುಮಾರ ಅಂತಾ ಕನ್ನಡದಲ್ಲಿ ಬರೆದ ಹಚ್ಚೆ ಗುರುತು ಇರುತ್ತದೆ.  ಎತ್ತರ 5 5’’ಇದ್ದು ಅವನ ಮೈಮೇಲೆ ಒಂದು ನೀಲಿ ಬಣ್ಣದ ಕಂಪನಿಯ ಶ್ಯಾಂಡೋ ಬನಿಯನ ಮತ್ತು ಒಂದು ಕಪ್ಪು ಕಲರ ಅದರಲ್ಲಿ ಗುಲಾಬಿ ಪ್ರಿಂಟೆಡ್ ಜ್ಯಾಂಗಾ ಇರುತ್ತದೆ.ಸದರಿ ಅಪರಿಚಿತ ವ್ಯಕ್ತಿಗೆ ದಿನಾಂಕ.17-11-2012 ರಂದು ಸಂಜೆ 6-00 ರಿಂದ ದಿನಾಂಕ:18-11-2012 ರಂದು ಮಧ್ಯಾಹ್ನ 4-00 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು,ಯಾವುದೋ ಕಾರಣಕ್ಕಾಗಿ ಯಾವೂದೋ ದುರುದ್ದೇಶದಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಸುಧಾಕರ ಜ್ಯೋಶಿ ಇವರ ಹೊಲದ ಬಂದಾರಿಯಲ್ಲಿ ಬಿಸಾಕಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ತಲೆಗೆ,ಮುಖಕ್ಕೆ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:375/2012 ಕಲಂ.302,201  ಐಪಿಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ: 19/11/12 ರಂದು ಗುಲಬರ್ಗಾ ಹುಮನಾಬಾದ ಮುಖ್ಯ ರಸ್ತೆಯ ಬಿರಾದಾರ ಪೆಟ್ರೋಲ ಪಂಪ ಎದರು ಕೆಲವು ಜನರು ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಮಾನ್ಯ ಎಸ್‌ಪಿ ಸಾಹೇಬರು ಗುಲಬರ್ಗಾ ಮತ್ತು ಮಾನ್ಯ ಹೆಚ್ಚುವರಿ ಎಸ್‌ಪಿ ಸಾಹೇಬರು ಗುಲಬರ್ಗಾ ಹಾಗೂ ಮಾನ್ಯ ಡಿಎಸ್‌ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರುಗಳ ಮಾರ್ಗದಶನದಲ್ಲಿ ಶ್ರೀ ಎಸ್‌,ಎಸ್‌,ಹುಲ್ಲೂರ ಪಿಐ ಡಿಎಸ್‌ಬಿ ಡಿಪಿಒ ಗುಲಬರ್ಗಾ ರವರುಮತ್ತು ಅವರ ಸಿಬ್ಬಂದಿಯವರು ಹಾಗೂ ಸಿಪಿಐ ಗ್ರಾಮೀಣ ವೃತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಎಸ್‌ಐ (ಕಾ&ಸು) ಗ್ರಾಮೀಣ ಠಾಣೆ ಗುಲ್ಬರ್ಗಾ ಮತ್ತು ಸಿಬ್ಬಂದಿಯವರುಗಳು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅಂದರ ಬಾಹರ ಎಂಬ ದೈವದ ಜೂಜಾಟವಾಡುತ್ತಿದ್ದ1) ಕಲ್ಲಪ್ಪಾ ತಂದೆ ರಾಮ ಮಾನೇ ವಯಾ:30 ವರ್ಷ ಸಾ|ರಾಮ ನಗರ ಗುಲಬರ್ಗಾ,2) ರಮೇಶ ತಂದೆ ಹಣಮಂತ ಪೂಜಾರಿ ವಯಾ:27 ವರ್ಷ ಸಾ||ವೆಂಕಟೇಶ ನಗರ ಗುಲಬರ್ಗಾ,3) ಅರವಿಂದ ತಂದೆ ಈರಣ್ಣಾ ತಳವಾರ ಸಾ||ಹನುಮಾನ ನಗರ ಗುಲಬರ್ಗಾ,4) ಶಿವಾ ತಂದೆ ದಶರಥ ತಳವಾರ  ಸಾ||ಗಂಗಾ ನಗರ ಗುಲಬರ್ಗಾ,5) ಅಂಬರೀಷ ತಂದೆ ನಾಗಣ್ಣಾ ಪೂಜಾರಿ ಸಾ||ಖಾದ್ರಿ ಚೌಕ ಗುಲಬರ್ಗಾ,6)ವಿಜಯಕುಮಾರ ತಂದೆ ಕಲ್ಯಾಣ ಮಡಿವಾಳ ಸಾ|| ಸುಲ್ತಾನಪೂರ ರೋಡ ಕಮಲ ನಗರ ಗುಲಬರ್ಗಾ,7)ರಾಕೇಶ ತಂದೆ ಬಸವರಾಜ ನರಬೋಳ ಸಾ|| ಸೈಯದ ಚಿಂಚೋಳಿ,8) ಕುಮಾರ ತಂದೆ ಕಾಶಿನಾಥ ಪಾಟೀಲ ಸಾ|ಬ್ರಹ್ಮಪೂರ ಗುಲಬರ್ಗಾ.9) ಮಾಣಿಕ ತಂದೆ ರಾಜಶೇಖರ ಪಾಟೀಲ ಸಾ|ಉಪಳಾಂವ ಗುಲಬರ್ಗಾ,10)ರಮೇಶ ತಂದೆ ಬಂಡೆಪ್ಪಾ ಯರಗೋಳ ಸಾ||ಖಾದ್ರಿ ಚೌಕ ಗುಲಬರ್ಗಾ,11) ಲಕ್ಷ್ಮಿಕಾಂತ ತಂದೆ ಸಾಯಿನಾಥ ಪಾಟೀಲ ಸಾ|ಖಾದ್ರಿ ಚೌಕ ಗುಲಬರ್ಗಾ,12) ಸುರೇಶ ತಂದೆ ಶಂಕರ ಕಂಠಿ ಸಾ ಶಹಾಬಜಾರ ಗುಲಬರ್ಗಾ,13) ರಮೇಶ ತಂದೆ ಶಂಕರೆಪ್ಪಾ ನಾಟೀಕಾರ ಸಾ||ದರ್ಮವಾಡಿ ತಾ|ಆಳಂದ ಜಿ||ಗುಲಬರ್ಗಾ.14) ರಾಮಚಂದ್ರ ತಂದೆ ಗುರಲಿಂಗಪ್ಪಾ ವಠಾರ ಸಾ||ದರ್ಮವಾಡಿ ತಾ||ಆಳಂದ ಜಿ||ಗುಲಬರ್ಗಾ,15) ರಾಮರಾವ ತಂದೆ ಮಾಧವರಾವ ಸಿಂದೇ ಬೀದರ,16) ಪ್ರಭು ತಂದೆ ಬಾಬುರಾವ ಪಾಟೀಲ ಸಾ||ಕಣ್ಣೂರ ಗುಲಬರ್ಗಾ,17) ವಿಜಯಕುಮಾರ ತಂದೆ ಕಲ್ಯಾಣಿ ಗೊಂಡಾ ಸಾ||ಮಚಳಂಬಾ,18) ಶಂಕರ ತಂದೆ ಶರಣು ಪಾಟೀಲ ಸಾ|| ಶಿವಾಜಿ ನಗರ ಗುಲಬರ್ಗಾ,19) ಬಂಡೆಪ್ಪಾ ತಂದೆ ವೀರಭದ್ರಪ್ಪಾ ಬಿಜಾಪುರ ಸಾ||ಶಹಾಬಜಾರ,20) ಸಿದ್ದು ತಂದೆ ರಾಜಸೇಖರ ಪಾಟೀಲ ಸಾ|ಚನ್ನವೀರ ನಗರ ಗುಲಬರ್ಗಾ,21) ಶರಣು ತಂದೆ ಸಿದ್ದರೂಡ ಆಲೂರ ಸಾ||ಆಲೂರ ತಾ||ಆಳಂದ,22) ರೇವಣಸಿದ್ದಯ್ಯಾ ತಂದೆ ಸೂಲಯ್ಯಾ ಹಿರೇಮಠ ಸಾ||ಮಕ್ತಂಪೂರ ಗುಲಬರ್ಗಾ,23) ಸುನೀಲ ತಂದೆ ಕಾಶಿನಾಥ ಪಾಟೀಲ ಸಾ|ಕೇರೂರ,24)ಉಮೇಶ ತಂದೆ ಚಂದ್ರಶೇಖರ ಪಾಟೀಲ ಸಾ|ರೋಜಾ ಗುಲಬರ್ಗಾ,25) ಕಲ್ಯಾಣರಾವ ತಂದೆ ಶರಣಪ್ಪಾ ಪಾಟೀಲ ಸಾ|ಸಿದ್ದೇಶ್ವರ ಕಾಲೋನಿ ಗುಲಬರ್ಗಾ,26) ನಿತ್ಯಾನಂದ ತಂದೆ ಬಸವರಾಜ ರಟಕಲ್ ಸಾ|ಗಾಜಿಪೂರ ಗುಲಬರ್ಗಾ,27) ಅಫರೋಜ ತಂದೆ ನಜಿರಮಿಯ್ಯಾ ಪಟೇಲ ಸಾ||ಇಸ್ಲಾಮಬಾದ ಕಾಲೋನಿ ಗುಲಬರ್ಗಾ,28) ಅನೀಲಕುಮಾರ ತಂದೆ ಸಿದ್ದಣ್ಣ ಪಾಟೀಲ ಸಾ|ಖಾದ್ರಿ ಚೌಕ ಗುಲಬರ್ಗಾ,29) ಫಸಿಯೋದ್ದಿನ ತಂದೆ ಮಯನೋದ್ದಿನ ಪಟೇಲ ಸಾ||ಜಿಲಾನಬಾದ ಗುಲಬರ್ಗಾ,30) ರೇವಣಸಿದ್ದಪ್ಪಾ ತಂದೆ ವೀರಭದ್ರಪ್ಪಾ ಪಾಟೀಲ ಸಾ||ಮಕ್ತಂಪೂರ ಗುಲಬರ್ಗಾ,31) ರಾಜೇಶ ತಂದೆ ಸೋಮಶೇಖರ ಮಠಪತಿ ಸಾ|ಭವಾನಿ ನಗರ ಗುಲಬರ್ಗಾ,32) ರಮೇಶ ತಂದೆ ಬಸಣ್ಣಾ ಗೋವರೇ ಸಾ||ರೇವಣಸಿದ್ದೇಶ್ವರ ಕಾಲೋನಿ ,33) ರಾಜು ತಂದೆ ಪೆರಮಾಲಸ್ವಾಮಿ ತೋವಾರ ಸಾ|ಖಾದ್ರಿ ಚೌಕ ಗುಲಬರ್ಗಾ,34) ವಿನಯ ತಂದೆ ಶ್ರೀಮಂತ ಮುಕರಂಬಿ ಸಾ|ಅವರಾದ (ಬಿ),35) ರಾಜು ತಂದೆ ಮಲ್ಲೇಶಪ್ಪಾ ತಳವಾರ ಸಾ|ಬಿದನೂರ ತಾ|ಅಪಜಲಪೂರ,36) ಅಜೇಯಕುಮಾರ ತಂದೆ ಮಲ್ಲಪ್ಪಾ ಪಾಟೀಲ ಸಾ||ವಿದ್ಯಾನಗರ ಗುಲಬರ್ಗಾ,37) ಸೋಮು ತಂದೆ ಅಂಬಾರಾಯ ಬಿರಾದಾರ ಸಾ|ಉಪಳಾಂವ,38) ಕಾಶಿನಾಥ ತಂದೆ ಶರಣಪ್ಪಾ ಪಾಟೀಲ ಸಾ||ಸಿದ್ದೇಶ್ವರ ಕಾಲೋನಿ ಗುಲಬರ್ಗಾ,39) ವಿರೇಶ ತಂದೆ ರಾಮಣ್ಣ ದೋರೆ ಸಾ||ಬಸವೇಶ್ವರ ಕಾಲೋನಿ ಗುಲಬರ್ಗಾ,40) ರಮೇಶ ತಂದೆ ರಾಮಣ್ಣಾ ಪಾಟೀಲ ಸಾ|ಕಪನೂರ,41) ಪುಟ್ಟು ತಂದೆ ಚೆನ್ನಪ್ಪಾ ಗೌಡಗೌಂವ ಸಾ|ಮಕ್ತಂಪೂರ,42) ವಿನೋದ ತಂದ ನಾಗಣ್ಣ ಹಿರೇಮಠ ಸಾ|ಬ್ಯಾಂಕ ಕಾಲೋನಿ ಗುಲಬರ್ಗಾ,43) ಪ್ರೇಮಕುಮಾರ ತಂದೆ ರಾಮಲಿಂಗಪ್ಪಾ ಬಿರಾದಾರ ಸಾ|ಉಪಳಾಂವ,44) ಆನಂದ ತಂದೆ ವೀರಣ್ಣಾ ವಾರದ ಸಾ||ಮಕ್ತಂಪೂರ,45) ಶಿವಕುಮಾರ ತಂದೆ ಕಲ್ಯಾಣರಾವ ಸಾ|ಗಾಂಧಿ ನಗರ,46) ನಾಗರಾಜ ತಂದೆ ಬಾಬುರಾವ ಲಾಡೆ ಸಾ||ಮಕ್ತಂಪೂರ,47) ಬಸಣ್ಣಾ ತಂದೆ ಮಲ್ಲಣ್ಣ ಚಿಂಚೋಳಿ ಸಾ||ಗಾಂಧಿ ನಗರ,48) ಬಾಬಣ್ಣ ತಂದೆ ಬಸವರಾಜ ಹೆಂಟೆ ಸಾ||ಸಂಜೀವ ನಗರ ಗುಲಬರ್ಗಾ ಇವರೆಲ್ಲರ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಉಪಯೋಗಿಸಿದ ಇಸ್ಪೇಟ ಎಲೆಗಳು ಮತ್ತು ನಗದು ಹಣ 1,18,350/- ರೂಪಾಯಿಗಳನ್ನು ಜಪ್ತಿ ಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 376/2012 ನೇದ್ದರಲ್ಲಿ ಪ್ರಕರಣ ದಾಖಲಲಾಗಿರುತ್ತದೆ.  

No comments: