Police Bhavan Kalaburagi

Police Bhavan Kalaburagi

Tuesday, November 27, 2012

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ: ದಿನಾಂಕ: 26-11-2012 ರಂದು ಜಯನಗರದಲ್ಲಿರುವ ಅಂಬಿಕಾ ಚಾಟ್ ಅಂಗಡಿ ಎದರುಗಡೆ ಸಾರ್ವಜನಿಕರ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ  ಬಂದ ಮೇರೆಗೆ ಪಿಎಸ.ಐ ಶ್ರೀಮಂತ ಇಲ್ಲಾಳ ರವರು ಮತ್ತು ಸಿಬ್ಬಂದಿ ಜನರು ಕೂಡಿಕೊಂಡು ಜೂಜುಕೋರರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ಭೀಮ ತಂದೆ ಅಶೋಕ ಕೊಳ್ಳೂರ,ಗುಂಡು ತಂದೆ ಸಂತೋಷ ರಾಠೋಡ,ಪ್ರಕಾಶ ತಂದೆ ಸಿದ್ದರಾಮ ಪಾಟೀಲ,ರಾಜು ತಂದೆ ಶರಣಪ್ಪ ಸಿಂಗೆ,ಶರಣು ತಂದೆ ರಾಜಶೇಖರ ಪಾಟೀಲ,ಮಹೇಶ ತಂದೆ ಬಲಭೀಮ ಪಂಚಾಳ,ಮೌನೇಶ ತಂದೆ ನರಸಪ್ಪ ಪಂಚಾಳ,ರಾಮಚಂದ್ರ ತಂದೆ ನಾಗಣ್ಣಾ ವಾರಿಕ್,ರಾಜಕುಮಾರ ತಂದೆ ವೈಜನಾಥ ಕಾಮಠಾಣ,ಸಂತೋಷ ತಂದೆ ವೈಜನಾಥ ಮಡಿವಾಳ,ಪೀರಪ್ಪಾ ತಂದೆ ಚಂದ್ರಶೇಖರ ಬಟಗೇರಿ,ಪವನ ತಂದೆ ಅಣ್ಣಾರಾವ ಬಿರಾದಾರ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 2,800/- ರೂ. ಹಾಗು ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ.130/2012 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :ಶ್ರೀ ಖಾದರ ಪಟೇಲ್ ತಂದೆ ಖಾಸೀಮ ಪಟೇಲ್ ಸಾ|| ಇಸ್ಲಾಮಬಾದ ಕಾಲೋನಿ ಗುಲಬರ್ಗಾ ದಿನಾಂಕ:26-11-2012 ಮಧ್ಯಾಹ್ನ  1-30 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ  ಗಂಜಿನಿಂದ ಹುಮನಾಬಾದ ರಿಂಗ ಮಧ್ಯದಲ್ಲಿ ಬಂದು ಸೇಡಂ ರಿಂಗ ರೋಡ ಕಡೆ, ನನ್ನ ಮೋಟಾರ ಸೈಕಲ ಹೊರಳಿಸುತ್ತಿದ್ದಾಗ ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಎಪಿ  21 ಟಿಯು 6777 ಚಾಲಕ ನರಸಪ್ಪ ತನ್ನ ಲಾರಿಯನ್ನು ಯಾವುದೇ ಮುನ್ಸೂಚನೇ ನೀಡದೇ ಹಾರ್ನ ವಗೈರೇ ಹಾಕದೇ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ  ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಡಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:389/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ದಯಾನಂದ  ತಂದೆ ಅಮರ  ಹಿರೇಮಠ   ಸಾ: ಪ್ರಶಾಂತ ನಗರ ರಾಜಾಪೂರ   ಗುಲಬರ್ಗಾ ರವರು ನಾನು ದಿನಾಂಕ:25-11-2012  ರಂದು ರಾತ್ರಿ 8=15 ಗಂಟೆಗೆ ಜಗತ ಏರಿಯಾದಲ್ಲಿರುವ ಡ್ಯಾನ್ಸ ಶಾಲೆಯಿಂದ ಐವಾನ-ಇ-ಶಾಹಿ ಕಡೆಗೆ ನಾನು ನನ್ನ ಟಿ.ವಿ.ಎಸ್. ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-9112 ನೇದ್ದರ ಮೇಲೆ ಹಳೆ ಡಿಪೋ ಕ್ರಾಸ್ ದಿಂದ ಲಾಹೋಟಿ ಕ್ರಾಸ್ ಕಡೆಗೆ ಹೋಗುವಾಗ ಎದುರಿನಿಂದ  ಮೋಟಾರ ಸೈಕಲ ನಂ: ಕೆಎ-32 ಯು-7488 ರ ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಗೆ ಎದುರುನಿಂದ  ಡಿಕ್ಕಿ ಪಡಿಸಿ  ಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ .ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 1165/2012 ಕಲಂ, 279,338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಭೀಮಬಾಯಿ ಗಂಡ ಮಲ್ಲಿಕಾರ್ಜುನ ಕವಲಗಿ  ಸಾ|| ಭೂಸನೂರ ಗ್ರಾಮ ರವರು ದಿನಾಂಕ: 26-11-2012 ರಂದು 22-00 ಗಂಟೆಗೆ ನಾನು ನನ್ನ  ಮನೆಯಲ್ಲಿ ಕುಳಿತಿರುವಾಗ ರಂಜಿತ @ ರಂಜು ತಂದೆ ಶರಣಪ್ಪ ಬೆಳಮಗಿ ಜಾ|| ಹರಿಜನ ಸಾ|| ಭೂಸನೂರ ಇತನು ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ  ಏ ರಂಡಿ ನೀನು ನನ್ನ ಮೇಲೆ ಏಕೆ ಕೇಸು ಮಾಡಿದ್ದೀಯಾ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅವಳ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೆ ಅವರ ಮಾನ ಭಂಗ ಮಾಡುವ ಉದ್ದೇಶದಿಂದ ಕೂದಲು ಹಿಡಿದು ಎಳೆದಾಡಿ ಮಾನ ಭಂಗಕ್ಕೆ ಪ್ರಯತ್ನಿಸಿದ್ದುನಂತರ ಕೈ ಹಿಡಿದು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ನೆಲಕ್ಕೆ ಕೆಡವಿದ್ದು ಆಗ ಅಲ್ಲಿಯೇ ಇದ್ದ ರಂಜಿತನ ತಂದೆಯಾದ ಶರಣಪ್ಪ ಮತ್ತು ತಾಯಿಯಾದಕಮಲಾಬಾಯಿ ಇವರುಗಳು ಕೈಯಿಂದ ನನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 98/2012 ಕಲಂ, 448, 323, 324, 354, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಚೇತನ ತಂದೆ ಗುಂಡಪ್ಪಾ ಕೊಟಗಿ ಸಾ| ಗೋಟುರ ತಾ|| ಚಿತ್ತಾಪೂರ ಹಾ||ವ|| ಗೋದುತಾಯಿ ನಗರ ರವರು ನಾನು ಕಾಲೇಜ ಮತ್ತು ಟಿವಿಷನ್ ಮುಗಿಸಿಕೊಂಡು ಇಂದು ದಿನಾಂಕ:26/11/2012 ರಂದು ಸಾಯಂಕಾಲ 7-00 ಗಂಟೆಗೆ ನನ್ನ ಗೆಳೆಯನಾದ ಶಫಿ ಇತನು ನಮ್ಮ ಮನೆಯ ಮುಂದೆ ಬಂದು ನಿಂತು ಕರೆದಾಗ ನಾನು ಹೊರಗೆ ಬಂದು ಇಬ್ಬರೂ ಕೂಡಿಕೊಂಡು ನಮ್ಮ ಮನೆಯಿಂದ ರೇಲ್ವೆ ಹಳಿ ದಾಟಿ ಮಾಕಾ ಲೇಔಟದಲ್ಲಿರುವ ಶಫಿ ಮುಲ್ಲಾ ರವರ ಮನೆಗೆ ಹೋರಟಾಗ ಗೋದುತಾಯಿ ಕಾಲೋನಿಗೆ ಹತ್ತಿಕೊಂಡಿರುವ ಕಂಪೌಂಡ ದಾಟಿ ರೇಲ್ವೆ ಹಳಿ ಹತ್ತಿರ ಇಬ್ಬರೂ ಯಾರೋ ಅಪರಿಚಿತರು ಅಂದಾಜು ಸುಮಾರು 18 ರಿಂದ 22 ವಯಸ್ಸಿನ ಇಬ್ಬರು ಹುಡುಗರು ಎದುರುಗಡೆ ಬಂದು ನನಗೆ ನಿಲ್ಲಿಸಿ ನನ್ನ ಕೈಯಲ್ಲಿದ್ದ ನೋಕಿಯಾ ಮೋಬೈಲನ್ನು ಕಸಿದುಕೊಂಡು ನನಗೆ  ಹೊಡೆಯುತ್ತಿದ್ದಾಗ ನನ್ನ ಗೆಳೆಯ ಶಫಿ ಅಂಜಿ ಓಡಿಹೋದನು ನನಗೆ ಅವರಿಬ್ಬರು ಕೈಗೆ ಮತ್ತು ಕೈಯಲ್ಲಿ ಕಲ್ಲು ತೆಗೆದುಕೊಂಡು ತೊಡೆಗೆ ಹೊಡೆದರು ನನ್ನ ಕಿಸೆಯನ್ನು ಚೆಕ್ಕ ಮಾಡಿದಾಗ ಎನು ಸಿಗಲಾರದಕ್ಕೆ ಹೋಗುವಾಗ ಅವರ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ನಾನು ಚಿರಾಡುತ್ತಿರುವಾಗ ಅವರ ಬಿಟ್ಟು ಓಡಿಹೋದರು ಆಗ ನನ್ನ ಗೆಳೆಯ ಶಫಿ 100 ಕ್ಕೆ ಪೋನ ಮಾಡಿ ತಿಳಿಸಿದ ನಂತರ ಪೊಲೀಸರು ಬಂದು ನನಗೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನನ್ನ ಮೋಬೈಲ್ ನಂ.8553802336 ಇದ್ದು ಅದರ ಕಿಮ್ಮತ್ತು  1000/- ರೂ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:107/2012 ಕಲಂ. 397 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: