ಕಳ್ಳತನ
ಪ್ರಕರಣ:
ಸ್ಟೇಷನ
ಬಜಾರ ಪೊಲೀಸ ಠಾಣೆ:ವಿಶ್ವನಾಥ ತಂದೆ ಪಿ.ಕೆ.ಎನ್ ಮೂರ್ತಿ ಸಾ||
ಪ್ಲಾಟ ನಂ-07 2ನೇ
ಮಹಡಿ ಶ್ರೀರಾಮ ಆರ್ಕೆಡ ಹಳೇ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ದಿನಾಂಕ.04.12.2012 ರಂದು
ಬೆಳಿಗ್ಗೆ 8.15 ಎ.ಎಂಕ್ಕೆ ಎಂದಿನಂತೆ ನಾನು ಕಛೇರಿಗೆ ಹೋಗಿದ್ದು, ನಂತರ 10.30 ಎ.ಎಂಕ್ಕೆ ನನ್ನ ಪತ್ನಿ ಪದ್ಮಜಾ ಮನೆಗೆ ಬೀಗ ಹಾಕಿಕೊಂಡು ಟೆಲರಿಂಗ್ ಕಲಿಯಲು ಹೋಗಿ ಮರಳಿ ಮಧ್ಯಾಹ್ನ
3.30 ಪಿ.ಎಂ ಕ್ಕೆ ಮನೆಗೆ ಬಂದು ನೋಡುವಷ್ಟರಲ್ಲಿ ಮನೆಯ ಬೀಗ ಮುರಿದಿದ್ದು ನೋಡಿ, ನನಗೆ ಕರೆ
ಮಾಡಿದಾಗ ನಾನು ಹೋಗಿ ನೋಡಲು ನಮ್ಮ ಮನೆಯ ಬೀಗ ಮುರಿದು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ಒಂದು
ನಿಕಾನ ಕಂಪನಿಯ ಕ್ಯಾಮರಾ ಅ.ಕಿ|| 40,000/-, ನಗದು ಹಣ 19,500/- ಹೀಗೆ ಒಟ್ಟು. 1,51,500/- ರೂ ಯಾರೋ ಕಳ್ಳರು ಕಳವು
ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012
ಕಲಂ. 454.380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment