Police Bhavan Kalaburagi

Police Bhavan Kalaburagi

Tuesday, December 4, 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ನಾಗರಾಜ @ ಶಿವಾನಂದ ತಂದೆ ರೇವಣಸಿದ್ದಪ್ಪ ದೇಸಾಯಿ ಸಾ: ಜೇವರಗಿ ಬಿ ತಾ: ಅಫಜಲಪೂರ ವರು ನನ್ನ ಅಣ್ಣ ದಯಾನಂದ ದೇಸಾಯಿ ವ:37 ವರ್ಷ ಮತ್ತು ಕರೆಪ್ಪ ದೊಡ್ಡಮಿ ಇವರು ಜೇವರ್ಗಿಯಿಂದ ಸರಕಾರಿ ಶಾಲೆ ಯಳವಾರಕ್ಕೆ ನಮ್ಮ ಅಣ್ಣನ ಹಿರೋ ಹೊಂಡಾ ಮೊಟಾರ ಸೈಕಲ ನಂ:ಕೆ.ಎ-32-ಇಎ-3485 ನೇದ್ದರ ಮೇಲೆ ಹೋಗುತ್ತಿದ್ದಾಗ ಮುಂಜಾನೆ 9-45 ಗಂಟೆಗೆ ಮಾರ್ಗ ಮಧ್ಯದಲ್ಲಿ ಜೇವರ್ಗಿ ಕಡೆಯಿಂದ ಯಾವುದೋ ವಾಹನದ ಚಾಲಕನನ್ನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಅಣ್ಣನ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಅಪಘಾತದಲ್ಲಿ ನನ್ನ ಅಣ್ಣ ದಯಾನಂದನಿಗೆ ತಲೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿ ಸತ್ತಿದ್ದು ಅಲ್ಲದೇ ಕರೆಪ್ಪ ದೊಡ್ಡಮನಿ ಇತನಿಗೆ ಭಾರಿ ಗಾಯವಾಗಿರುತ್ತದೆ.ಸದರಿ ವಾಹನ ಚಾಲಕನ್ನು ಪತ್ತೆ ಹಚ್ಚಿ ಅವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:179/2012 ಕಲಂ 279.338.304(ಎ) ಐ.ಪಿ.ಸಿ ಸಂ 187 ಐ.ಎಮ್ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಮನೆ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ.ರಮೇಶ ತಂದೆ ಲಕ್ಷ್ಮಣ ಜಾಲಗಾರ,  ಸಾ|| ಎಸ್.ಎಸ್. ಬಿರಾದಾರ ಮನೆಯಲ್ಲಿ ಬಾಡಿಗೆ ಅತ್ತರ ಕಂಪೌಂಡ ಗಾಜೀಪೂರ ಗುಲಬರ್ಗಾ ರವರು ನಾವು ಮನೆಯವರೆಲ್ಲರೂ ಮಂತ್ರಾಲಯ ದೇವರ ದರ್ಶನಕ್ಕೆ ಹೋದಾಗ ದಿನಾಂಕ:01/12/2012 ರಂದು  ಸಾಯಂಕಾಲ 6:30 ಗಂಟೆಯಿಂದ ದಿ:03/12/2012 ರಂದು ಸಾಯಂಕಾಲ 6:00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟಿದ್ದ ಒಂದು ಬಂಗಾರದ ಲಾಕೇಟ 12 ಗ್ರಾಂ ಅ||ಕಿ|| 30,000/-, ಬಂಗಾರದ ನೇಕಲ್ಸ 15 ಗ್ರಾಂ ಅ||ಕಿ|| 35,000/-,ಬಂಗಾರದ ಸುತ್ತ ಉಂಗುರ 5 ಗ್ರಾಂ ಅ||ಕಿ|| 10,000/-, ಮಕ್ಕಳ ಬೆಳ್ಳಿಯ ಕಾಲ ಚೈನ್40 ಗ್ರಾಂ ಅ||ಕಿ|| 500/-,ಒಂದು ಬೆಳ್ಳಿ ದೀಪ ಅ||ಕಿ|| 500/-,ಎರಡು ತಾಮ್ರದ ಹಾಂಡೆ ಅ||ಕಿ|| 2000/-,ಹಿತ್ತಾಳೆ ನೀರಿನ ಟ್ಯಾಂಕ ಹಿತ್ತಾಳೆ ದೀಪ & ಹಿತ್ತಾಳೆಯ ಚಿಕ್ಕ ಕೊಡ ಅ||ಕಿ|| 4000/-,ನಗದು ಹಣ 15,000/-ಹೀಗೆ ಎಲ್ಲಾ ಸೇರಿ ಒಟ್ಟು 95,000/- ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:127/2012 ಕಲಂ: 454, 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗ್ರಾಮೀಣ ಪೋಲೀಸ ಠಾಣೆ:ಮಹೇಶ  ತಂದೆ ಬಾಬಯ್ಯ ಪಾಟೀಲ ಸಾ: ಅತನೂರ ತಾ: ಅಫಜಲಪೂರ ಸಾ: ವ: ಬಿದ್ದಾಪೂರ ಕಾಲೋನಿ, ಗುಲಬರ್ಗಾ  ವರು ನಾವು ದಿನಾಂಕ: 30/11/2012 ರಂದು ಮನೆಗೆ ಕೀಲಿ ಹಾಕಿ ತಮ್ಮ ಸ್ವತ ಊರಿಗೆ ಹೋಗಿದ್ದು ದಿನಾಂಕ:03/12/2012 ರಂದು ನಮ್ಮ ಅಣ್ಣ  ಮನೆ ಕಳವು ಆಗಿದೆ ಅಂತ ಫೋನ ಮೂಲಕ ತಿಳಿಸಿದ್ದರಿಂದ ಊರಿನಿಂದ ಮನೆಗೆ ಬಂದು ನೋಡಲು  ಮನೆಯ ಬಾಗಿಲಿನ ಕೊಂಡಿ ಮುರಿದು ಅಲಮಾರಿಯಲ್ಲಿಟ್ಟ ನಗದು ಹಣ 1500/- ರೂ. ಹಾಗೂ ಬಂಗಾರದ 9 ಗ್ರಾಂ ಅಭರಣಗಳು ಹೀಗೆ ಒಟ್ಟು 12,300/- ರೂ. ಕಿಮ್ಮತ್ತಿನ ಮಾಲನ್ನು ಯಾರೊ ಕಳ್ಳರು ದಿನಾಂಕ:30/11/2012  ರ 11-00 ಎ.ಎಮ್ ದಿಂದ 03/12/2012 6-00 ಪಿ.ಎಮ್ ದ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:404/2012 ಕಲಂ 454 457 380  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ 26/11/2012 ಸಾಯಂಕಾಲ 4-30 ಗಂಟೆಯಿಂದ ದಿನಾಂಕ 27/11/12 ರಂದು  ಮದ್ಯಾಹ್ನ 3-00 ಗಂಟೆ ಅವಧಿಯಲ್ಲಿ  ನಮ್ಮ ಶಾಲೆಯ  ಕಂಪ್ಯೂಟರ ಕೋಣೆಯ ಬಾಗಿಲ ಕೀಲಿ ಮುರಿದು  ಕಂಪ್ಯೂಟರ ಕೊಣೆಯಲ್ಲಿ ಇದ್ದ ಕಂಪ್ಯೂಟರ ಮತ್ತು ಅದರ ಇತರೆ ಸಾಮಾನುಗಳು ಹೀಗೆ ಒಟ್ಟು ಅಂದಾಜು 74,000/-00 ರೂ. ಕಿಮ್ಮತ್ತಿನ ಕಂಪ್ಯೂಟರ ಸಾಮಾನುಗಳು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ  ಶ್ರೀಮತಿ. ಹೇಮಲತಾ ತಂದೆ ಗಣಪತರಾವ ಪತ್ತಾರ ಮುಖ್ಯೋಪಾದ್ಯಾಯರು  ಶ್ರೀ ಮೈಲಾರಲಿಂಗೆಶ್ವರ ಫ್ರೌಡ ಶಾಲೆ ನರಿಬೊಳ ವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 178/12 ಕಲಂ. 457.454. 380. ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

No comments: