Police Bhavan Kalaburagi

Police Bhavan Kalaburagi

Friday, December 28, 2012

RECRUITMENT OF CONSTABLES (GD) IN CAPFS AND RIFLEMAN (GD) IN ASSAM RIFLES-2013


ಸಿಬ್ಬಂದಿ ನೇಮಕಾತಿ ಆಯೋಗ
               ಸಿಬ್ಬಂದಿ ನೇಮಕಾತಿ ಆಯೋಗ
      (ಕರ್ನಾಟಕ ಕೇರಳ ವಲಯ) ಬೆಂಗಳೂರು
ಪತ್ರಿಕಾ ಪ್ರಕಟಣೆ
ಸಿಎಪಿಎಫ್ಎಸ್ ನ ಕಾನ್ಸಟೇಬಲಗಳು (ಜೆಡಿ) ಮತ್ತು ಆಸ್ಸಾಂ ರೈಪಲ್ಸ್ ನ ರೈಫಲ್ ಮನ್ (ಜೆಡ)-2013 ಗಳನ್ನು ನೇಮಕ ಮಾಡಿಕೊಳ್ಳುವದರ ಬಗ್ಗೆ ಪತ್ರಿಕಾ ಪ್ರಕಟಣೆ.

ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ಸಚಿವಾಲಯಗಳು/ ಇಲಾಖೆಗಳು, ಅವುಗಳಿಗೆ ಹೊಂದಿಕೊಂಡಿರುವ ಅಧೀನ ಕಛೇರಿಗಳು,ಸಿ &ಎಜಿ ಮತ್ತು ಅದರ ಅಕೌಂಟೆಂಟ್ ಜನರಲ್ ಕಛೇರಿಗಳು, ಚುನಾವಣಾ ಆಯೋಗ ಮತ್ತು ಕೇಂದ್ರ ವಿಚಕ್ಷಣಾ ಆಯೋಗಳಿಗೆ ಗ್ರೂಪ್ ಬಿ ( ನಾನ್ ಗೆಜೆಟೆಡ್) ಮತ್ತು ಗ್ರೂಪ್ ಸಿ (ನಾನ್ ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ
ಸಿಬ್ಬಂದಿ ನೇಮಕಾತಿ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಪ್ರಸಕ್ತ  ಶ್ರೀ ಎನ್.ಕೆ.ರಘುಪತಿ ಅವರು ಅದರ ಅಧ್ಯಕ್ಷರಾಗಿದ್ದಾರೆ. ಆಯೋಗವು ಏಳು ವಲಯ ಮತ್ತು ಎರಡು ಉಪ ವಲಯಗಳ ಕಚೇರಿಗಳನ್ನು ಹೊಂದಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಕಚೇರಿಗಳು ದೇಶದ ವಿವಿಧ ಭಾಗಗಳಲ್ಲಿರುವ ಪರೀಕ್ಷಾ ಕೇಂದ್ರಗಳ ಜಾಲದ ಮುಖಾಂತರ ಆಯೋಗವು ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ.
ಬೆಂಗಳೂರಿನ ವಲಯ ಕಚೇರಿಯನ್ನು (ಕರ್ನಾಟಕ ಕೇರಳ ವಲಯ) 1990 ರಲ್ಲಿ ಸ್ಥಾಪಿಸಲಾಯಿತು. ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷ ದ್ವೀಪ ಈ ಕಚೇರಿಯ ವ್ಯಾಪ್ತಿಗೊಳಪಟ್ಟಿವೆ.
ಆಯೋಗದ ಪರೀಕ್ಷೆಗಳು ಕರ್ನಾಟಕಕ ಮತ್ತು ಕೇರಳದ ಕೆಳಕಂಡ ಕೇಂದ್ರಗಳಲ್ಲಿ ನಡೆಯುತ್ತವೆ.
(ಎ)                       (ಬಿ)
ಕರ್ನಾಟಕ             ಕೇರಳ
ಬೆಂಗಳೂರು          ತಿರುವನಂತಪುರ
ಧಾರವಾಡ            ಕೋಚಿ
ಮಂಗಳೂರು        ತ್ರಿಶೂರು
ಗುಲ್ಬರ್ಗ             ಕೋಝಿಕೋಡ್

ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಸಿಎಪಿಎಫ್ ನ (ಬಿಎಸ್ಎಫ್, ಸಿಐಎಸ್ಎಫ್, ಸಿ,ಅರ್,ಪಿ.ಎಫ, ಐಟಿಬಿಪಿ, ಎಸ್ಎಸ್ ಬಿ) ಕಾನ್ಸಟೇಬಲಗಳು (ಜನರಲ್ ಡ್ಯೂಟಿ) ಮತ್ತು ರೈಫಲ್ಮನ್(ಜಿಡಿ) ಅಸ್ಸಾಂ ರೈಫಲ್ಸ್-2013ಗೆ ನೇಮಕ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ವೇತನ ಶ್ರೇಣಿ ರೂ.5200-20200 ಇದ್ದು ಜೊತೆಗೆ ರೂ.2000 ಗ್ರೇಡ್ ಪೇ ಇರುತ್ತದೆ. ವಯೋಮಿತಿ 18-23 ವರ್ಷಗಳು. ಹೆಚ್ಚು ಕಡಿಮೆ 22,000 ಹುದ್ದೆಗಳಿದ್ದು, ನಿರ್ಧಿಷ್ಟವಾದ ಸಂಖ್ಯೆಯನ್ನು ನಂತರ ಖಚಿತಪಡಿಸಲಾಗುತ್ತದೆ. ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಮೆಟ್ರಿಕ್ಯುಲೇಷನ್.
ಈ ನೇಮಕ್ಕೆ ಸಂಬಂಧಿಸಿದ ಪ್ರಕಟಣೆಯನ್ನುಎಂಪ್ಲಾಯಮೆಂಟ್ನ್ಯೂಸ್/ ರೋಜ್ಗಾರ್ ಸಮಾಚಾರ್ ನ ಡಿಸೆಂಬರ್ 15-21 ರ ಸಂಚಿಕೆಯಲ್ಲಿ ಆಯೋಗವು ಪ್ರಕಟಿಸುತ್ತದೆ ಮತ್ತು ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಹುದ್ದೆಗಳಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಾಸ ವಿರುವ ಅಭ್ಯರ್ಥಿಗಳು ಮಾತ್ರ ಅರ್ಹರು. ದೈಹಿಕಾರ್ಹತೆ/ದೈಹಿಕ ದಕ್ಷತೆಯ ಪರೀಕ್ಷೆ 2013 ರ ಫೆಬ್ರುವರಿ-ಮಾರ್ಚ ತಿಂಗಳುಗಳಲ್ಲಿ ನಡೆಯುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆಯನ್ನು 12.05.2013 ರಂದು ನಡೆಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಪರೀಕ್ಷೆಯ ಪಾರ್ಟ್-ಎ, ಬಿ ಮತ್ತು ಸಿ ಪ್ರಶ್ನೆಗಳು ಮೂರು ಭಾಷೆಗಳಲ್ಲಿದ್ದು, ಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ ನಲ್ಲಿರುತ್ತವೆ. ವಿವಿಧ ಸಿಎಪಿಎಫ್ ಗಳಿಗೆ ಅರ್ಹತೆ-ಕಂ-ಆಧ್ಯತೆ ಆಧಾರದ ಮೇಲೆ ಅಲಾಟ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಯಾವ ವಲಯ ಮತ್ತು ಉಪ ವಲಯಗಳ ಸಿಬ್ಬಂದಿ ನೇಮಕಾತಿ ಆಯೋಗದ ವ್ಯಾಪಿಗೊಳಪಡುತ್ತವೆಯೋ ಅಲ್ಲಿಗೆ ನೇಮಕಾತಿ ಅರ್ಜಿಗಳನ್ನು ಅಭ್ಯರ್ಥಿಗಳು ಕಳಿಸಿಕೊಡಬೇಕು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇದ್ರಗಳಲ್ಲಿ ಪರೀಕ್ಷೆ ಬರೆಯಲಿಚ್ಛಿಸುವವರು,

ರೀಜನ್ ಡೈರೆಕ್ಟರ್
ಸಿಬ್ಬಂದಿ ನೇಮಕಾತಿ ಆಯೋಗ(ಕೆಕೆಆರ್)
1 ನೇ ಮಹಡಿ, ಇ ವಿಂಗ್
ಕೇಂದ್ರೀಯ ಸದನ
ಕೋರಮಂಗಲ
ಬೆಂಗಳೂರು-560034

ಇಲ್ಲಿಗೆ ಕಳಿಸಿಕೊಡಬೇಕು.

      ಆನ್ ಲೈನ್ಮುಖಾಂತರ ಅರ್ಜಿ ಸಲ್ಲಿಸುವವರು http://ssconline.nic.in or http://ssconline2.gov.in ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ  ಸಲ್ಲಿಸುವವರಿಗೆ ಪಾರ್ಟ-1 ರಿಜಿಸ್ಟ್ರೇಷನ ಗೆ 09-01-2013 ಕೊನೆ ದಿನ. ಪಾರ್ಟ-2 ಕ್ಕೆ ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಕೊನೆ ದಿನ ಹತ್ತಿರವಾದಂತೆ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ, ಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ ಕೊನೆಯ ದಿನದ ವರೆಗೆ ಕಾಯದೆ ಅದಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳ ಮಾರ್ಗ ದರ್ಶನಕ್ಕೆ ಈ ಕೆಳ ಕಂಡ ಹೆಲ್ಪ್ ಲೈನಗಳು ಬೆಳಿಗ್ಗೆ 10 ರಿಂದ  ಸಂಜೆ 5 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ. ಹೆಲ್ಪ್ ಲೈನ್ : 9483862020,    080 25502520.
ನೇಮಕಾತಿಯ ಮುಖ್ಯಾಂಶಗಳು ಈ ರೀತಿ ಇವೆ.
ಸಿಪಿಒ ದ ರಾಜ್ಯ/ಕೇಂದ್ರಾಡಳಿತಗಳಿಗೆ ಅಲಾಟ್ ಮಾಡಿದ ಖಾಲಿ ಹುದ್ದೆಗಳನ್ನು ಅಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಆದ್ದರಿಂದ ಇದು ದೇಶ ಸೇವೆ ಮಾಡುವುದರ ಜೊತೆಗೆ ಸರ್ಕಾರದ ಖಾತರಿ ಉದ್ಯೋಗದ ಅತ್ಯುತ್ತಮ ಅವಕಾಶವನ್ನು ಕರ್ನಾಟಕ, ಕೇರಳ ಮತ್ತು ಲಕ್ಷ ದ್ವೀಪಗಳ ಯುವಕರಿಗೆ ಒದಗಿಸಿಕೊಡುತ್ತದೆ.
ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಡಿ ಜಿಲ್ಲೆಗಳು ಮತ್ತು ನಕ್ಸಲೈಟ್/ಉಗ್ರವಾದಿ ಪೀಡಿತ ಪ್ರದೇಶಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಆಯ್ಕೆಯು ದೇಹದಾಢ್ಯತೆ(ಪಿಎಸ್ ಟಿ) / ದೈಹಿಕ ಕ್ಷಮತೆ(ಪಿಇಟಿ) ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಲಿಖಿತ ಪರೀಕ್ಷೆಯು ಮುಗಿಯುವ ವೇಳೆಗೆ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ ಅಂತಿಮಗೊಳಿಸಲಾಗುತ್ತದೆ.
ಲಿಖಿತ ಪರೀಕ್ಷೆಯು ಮೆಟ್ರಿಕ್ಯುಲೇಷನ್ ಮಟ್ಟದಲ್ಲಿದ್ದು, ಸಮಾನ್ಯ ಜ್ಞಾನ ಮತ್ತು ತಾಕರ್ಿಕ ಜ್ಞಾನ, ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆ, ಪ್ರಾಥಮಿಕ ಗಣಿತ ಮತ್ತು ಇಂಗ್ಲಿಷ್ ಅಥವಾ ಹಿಂದಿ ವಿಷಯಗಳಿಗೆ ಸಂಬಂಧಿಸಿರುತ್ತದೆ.
ಒಬ್ಬ ಅಭ್ಯರ್ಥಿ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು. ಅರ್ಜಿಯಲ್ಲಿ ಯಾವ ವಿಭಾಗದಲ್ಲಿ ಸೇವೆ ಸಲ್ಲಿಸಲು (ಆದ್ಯತೆ ಮೇರೆಗೆ) ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಎಲ್ಲ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.
ಎಸ್ ಸಿ/ಎಸ್ ಟಿ/ಒಬಿಸಿ ವರ್ಗಗ ಮೀಸಲಾತಿಯ ಸೌಲಭ್ಯವನ್ನು ಪಡೆಯುವವರು ಆ ವರ್ಗಗಳಿಗೆ ನೀಡುವ ದಾಖಲೆ ಪತ್ರವನ್ನು ನಿಗದಿತ ನಮೂನೆಯಲ್ಲಿ ದಾಖಲೆ ಪತ್ರಗಳನ್ನು ಸಲ್ಲಿಸುವಾಗ ಸಲ್ಲಿಸಬೇಕು.
ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಳು ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ ಸೈಟ್ http://ssc.nic.in  ಮತ್ತು ಆಯೋಗದ (ಕೆಕೆಆರ್) ವೆಬ್ ಸೈಟ್  http://ssckkr.kar.nic.in ಗಳಲ್ಲಿ 15.12.2012 ರ ನಂತರ ದೊರೆಯುತ್ತವೆ.
ಇದರ ಸದುಪಯೋಗ ಪಡಿಸಿಕೊಳ್ಳಲು ಪೊಲೀಸ್ ಮಹಾ ನಿರೀಕ್ಷಕರು, ಈಶಾನ್ಯ ವಲಯ ಗುಲಬರ್ಗಾ ಇವರು ಸಾರ್ವಜನಿಕರಲ್ಲಿ ಕೋರಿಕೊಂಡಿರುತ್ತಾರೆ.

No comments: