:: ಪತ್ರಿಕಾ ಪ್ರಕಟಣೆ.::
ಸಿಬ್ಬಂದಿ ನೇಮಕಾತಿ ಅಯೋಗ
ಕರ್ನಾಟಕ-ಕೇರಳ ವಲಯ
ಸಿಎಪಿಎಫ್ಎಸ್
ನ ಕಾನ್ಸ್ ಟೇಬಲಗಳು (ಜಿಡಿ) ಬಿಎಸ್ಎಫ್, ಸಿಐಎಸ್ಎಫ್, ಸಿಆರ್ ಪಿಎಫ್, ಎಸ್ಎಸ್ ಬಿ, ಮತ್ತು ಐಟಿಬಿಪಿ
ಮತ್ತು ಅಸ್ಸಾಂ ರೈಫಲ್ ನ ರೈಫಲ್ ಮನ್ (ಜಿಡಿ)-2013
ಗಳನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ .
ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ
ಮತ್ತು ಅಸ್ಸಾಂ ರೈಫಲ್ ನ ರೈಫಲ್ ಮನ್ ಗಳ ನೇಮಕಾತಿಗೆ ಸಿಬ್ಬಂದಿ ನೇಮಕಾತಿ ಆಯೋಗ ದೇಶದಾಧ್ಯಂತ ಸ್ಪರ್ಧಾತ್ಮಕ
ಪರೀಕ್ಷೆಯನ್ನು 12-05-2013 ರಂದು ನಡೆಸಲಿದೆ.
ಈ ಹುದ್ದೆಯ ವೇತನ ಶ್ರೇಣಿ ರೂ. 5200-20200 ಜೊತೆಗೆ ಗ್ರೇಡ್ ಪೇ ರೂ. 2000. ನೇಮಕಾತಿಯು ದೈಹಿಕ ದೇಹದಾಢ್ಯತೆ (ಪಿಎಸ್ ಟಿ), ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ನಡೆಸಲಾಗುತ್ತದೆ. ಪಿಎಸ್
ಟಿ ಮತ್ತು ಪಿಇಟಿ ಪರೀಕ್ಷೆಗಳಲ್ಲಿ ಪಾಸಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯ
ಫಲಿತಾಂಶದ ಆಧಾರದ ಮೇಲೆ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಣೆಗಳು
2012 ಡಿಸೆಂಬರ್ 15-21 ರ ಎಂಪ್ಲಾಯ್ ಮೆಂಟ ನ್ಯೂಸ್ ನ ಸಂಚಿಕೆಯಲ್ಲಿ ದೊರೆಯುತ್ತದೆ. ಜೊತೆಗೆ ಈ ವಿವರಗಳು
http://ssckkr.kar.nic.in
and http://ssc.nic.in ದೊರೆಯುತ್ತವೆ. ಈ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಂಡು ಪೇಪರ್ ಅರ್ಜಿಯನ್ನು
ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು http://ssconline.nic.in or http://ssconline2.gov.in ವೆಬ್ ಸೈಟಗಳನ್ನು ನೋಡಬಹುದು. ಪರೀಕ್ಷೆಗೆ ಅರ್ಜಿ ಸಲ್ಲಿಸುವ
ಅಭ್ಯರ್ಥಿಗಳು ಎಲ್ಲ ಅರ್ಹತೆಗಳು ತಮಗಿವೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ನಂತರ ಒಬ್ಬ ಅಭ್ಯರ್ಥಿ
ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಅಭ್ಯರ್ಥಿಯು ಮೆರಿಟ್ ಮತ್ತು ಪರೀಕ್ಷೆಯ ಫಲಿತಾಂಶದ ಆಧಾರದ
ಮೇಲೆ ಸಿಎಪಿಎಫ್ ನ ಯಾವ ವಿಭಾಗಕ್ಕೆ ನಿಯೋಜಿಸಬೇಕು ಎಂಬ ಪ್ರಕ್ರಿಯೆ ನಡೆಯುತ್ತದೆ. ಮಹಿಳಾ ಅಭ್ಯಥಿಗಳಿಗೆ
ಅವರಿಗೆ ನಿಗದಿಪಡಿಸಿದ ಹುದ್ದೆಗಳಿಗೆ ನೇಮಿಸಲಾಗುತ್ತದೆ.
1. ಖಾಲಿ ಇರುವ
ಹುದ್ದೆಗಳು: ಒಟ್ಟು 22000 (ಅಂದಾಜು) ಕೊನೆಗೆ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ..
ಕರ್ನಾಟಕಕ್ಕೆ 600 ಹುದ್ದೆಗಳು ಮತ್ತು ಕೇರಳಕ್ಕೆ 350 ಹುದ್ದೆಗಳು
2. 11.01.2013
ರಲ್ಲಿ ಇರುವಂತೆ ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಅಥವಾ ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾನಿಲಯದಿಂದ
10 ನೇ ತರಗತಿ ಪಾಸಾಗಿರಬೇಕು.
3. 01.01.2013
ಕ್ಕೆ ವಯಸ್ಸು 18-23 ಅಭ್ಯರ್ಥಿ 02.01.1990
ಕ್ಕಿಂತ ಮುಂಚೆ ಮತ್ತು 1.1.1995 ರ ನಂತರ ಜನಿಸಿರಬಾರದು (ಎಸ್ ಸಿ/ಎಸ್ ಟಿ/ಒಬಿಸಿ/ಮಾಜಿ- ಎಸ್/ಇಲಾಖೆ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ
ಸಡಿಲಿಕೆ ಇರುವುದರ ಬಗ್ಗೆ ನೋಟೀಸಿನ ಪ್ಯಾರಾ 4 ನ್ನು ನೋಡಬಹದುದು)
4. ಪೀ : ಪೇಪರಿನಲ್ಲಿ ಅರ್ಜಿ ಸಲ್ಲಿಸುವವರು ಕೇಂದ್ರ ನೇಮಕಾತಿ ಫೀ
ಸ್ಟಾಂಪ್ ಮುಖಾಂತರ 50 ರೂಪಾಯಿ
ಸಲ್ಲಿಸಬೇಕು.( (crpf). ಆನ್ ಲೈನಿನಲ್ಲಿ ಅರ್ಜಿ ಸಲ್ಲಿಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖಾಂತರ ಸಲ್ಲಿಸಬೇಕು.(ಎಲ್ಲಾ ಮಹಿಳೆಯರು ಎಸ್
ಸಿ/ಎಸ್ ಟಿ/ಮಾಜಿ-ಎಸ್ ಅಭ್ಯರ್ತಿಗಳಿಗೆ ಫೀ ರಿಯಾಯಿತಿ ಇದೆ. ಮೇಲೆ
ತಿಳಿಸಿದಂತೆ ಫೀ ಕಟ್ಟದೆ ಬೇರೆ ರೀತಿಯಲ್ಲಿ ಕಟ್ಟಿದರೆ ಅದನ್ನು ಮುಟ್ಟುಗೋಲು
ಹಾಕಿಕೊಳ್ಳಲಾಗುತ್ತದೆ ಮತ್ತು ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
5.ಪರೀಕ್ಷೆಗಳ ವಿವರ: ದೇಹ ದಾಢ್ಯತೆ ಪರೀಕ್ಷೆ. (PST) ಎತ್ತರ- ಪುರುಷ:170
ಸೆ.ಮೀ,
ಮಹಿಳೆ: 157 ಸೆ.ಮೀ. ಎದೆ- ಪುರುಷ-ಉಬ್ಬಿಸದೆ:
80 ಸೆ.ಮೀ. ಉಬ್ಬಿಸಿ ಕನಿಷ್ಠ 5 ಸೆ.ಮೀ. ತೂಕ: ವೈದ್ಯಕೀಯ
ನಿಭಂದನೆಯಂತೆ ಪುರುಷ ಮತ್ತು ಮಹಿಳೆಗೆ ಎತ್ತರ ಮತ್ತು ವಯಸ್ಸಿಗನುಗುಣವಾಗಿ. ದೈಹಿಕ ಕ್ಷಮತೆ ಪರೀಕ್ಷೆ(PET) ಓಟ- ಪುರುಷ:24 ನಿಮಿಷದಲ್ಲಿ 5 ಕಿ.ಮಿ. ಮಹಿಳೆಗೆ 8.3 ನಿಮಿಷದಲ್ಲಿ 1.6 ಕಿ.ಮೀ. ಲಿಖಿತ ಪರೀಕ್ಷೆ: ಪಿಇಟಿ, ಲಿಖಿತ ಪರೀಕ್ಷೆಗಳಲ್ಲಿ ಪಾಸಾದ ಅಭ್ಯಥರ್ಿಗಳಿಗೆ ಆಬ್ಜಕ್ಟೀವ್ ಮಾದರಿಯ ಬಹು ಆಯ್ಕೆಯ 100 ಅಂಕಗಳ ಎರಡು ಗಂಟೆಗಳ
ಅವಧಿಯ ಒಂದು ಪತ್ರಿಕೆ. (ಎ-ಸಾಮಾನ್ಯ ಜ್ಞಾನ ಮತ್ತು
ರೀಜನಿಂಗ್ ಗೆ 25 ಅಂಕ, ಬಿ- ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆ 25 ಅಂಕ, ಸಿ-ಪ್ರಾಥಮಿಕ ಗಣಿತ 25 ಅಂಕ, ಡಿ-ಇಂಗ್ಲಷ್/ಹಿಂದಿಗೆ 25 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು.
ಎ,ಬಿ ಮತ್ತು ಸಿ ಭಾಗಗಳ ಪ್ರಶ್ನೆಗಳು ಇಂಗ್ಲೀಷ್/ಹಿಂದಿ ಜೊತೆಗೆ
ಮೂರು ಭಾಷೆಗಳಲ್ಲಿರುತ್ತವೆ. ಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ. ಆಯೋಗ ನಿಗದಿ ಪಡಿಸಿದ
ಕಟ್ ಆಫ್ ಅಂಕಗಳಿಗಿಂತ ಹೆಚ್ಚಿಗೆ ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
6. ಕರ್ನಾಟಕ ವಲಯದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಧಾರವಾಡ, ಗುಲ್ಬರ್ಗ, ಮಂಗಳೂರು, ತಿರುವನಂತಪುರ, ಕೋಚಿ, ಕೋಝಿಕೋಡ್ ಮತ್ತು ತ್ರಿಸ್ಸೂರ್.
ಇತರೆ ವಲಯಗಳ ಪರೀಕ್ಷಾ ಕೇದ್ರಗಳ ವಿವಿರಗಳನ್ನು ನೋಟೀಸಿನ ಪ್ಯಾರಾ 7 ನ್ನು ನೋಡಬಹುದು.
7. ಅರ್ಜಿಗಳನ್ನು ಸ್ವೀಕರಿಸಲು ಕಡೆಯ ದಿನ: ಆಫ್ ಲೈನ್ ಪೇಪರ್ ಅರ್ಜಿ ಸಲ್ಲಿಸಲು 11.01.2013. ಆನ್ ಲೈನ್ ಅರ್ಜಿಗೆ: ಪಾರ್ಟ-1 ಕ್ಕೆ 01.01.2013 . ಪಾರ್ಟ-2 ಕ್ಕೆ 11.01.2013 ಕ್ಕೆ . ಸೂಚನೆ: (ಕೊನೆ ಗಳಿಗೆಯ ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ
ಸಮಸ್ಯೆಯನ್ನು ಎದುರಿಸುವ ಬದಲು ಕೊನೆ ದಿನಾಂಕಕ್ಕೆ
ಕಾಯದೆ ಆದಷ್ಟು ಮೊದಲು ಅರ್ಜಿ ಸಲ್ಲಿಸಬೇಕು.)
8. ಕಾನ್ಸಟೇಬಲ್ (ಜೆಡಿ)
ಹುದ್ದೆಗೆ ಪೇರ್ ಅರ್ಜಿಗಳನ್ನು : ವಲಯ ನಿರ್ದೇಶಕರು (ಕೆಕೆಅರ್) ಸಿಬ್ಬಂದಿ ನೇಮಕ ಆಯೋಗ, 1
ನೇ ಮಹಡಿ,
ಇ ವಿಂಗ್,
ಕೇಂದ್ರೀಯ ಸದನ,ಕೋರಮಂಗಲ,ಬೆಂಗಳೂರು- 560034. ನಿಗದಿ ಪಡಿಸಿದ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಹಲವು
ಅರ್ಜಿಗಳನ್ನು ಸಲ್ಲಿಸದರೆ ತಿರಸ್ಕರಿಸಲಾಗುತ್ತದೆ.
9. ತಾತ್ಕಾಲಿಕ ವೇಳಾ
ಪಟ್ಟಿ :ಪಿಎಸ್ ಟಿ/ ಪಿಇಟಿ: ಫ್ರೆಬ್ರುವರಿ-ಮಾರ್ಚ
2013 ಲಿಖಿತ ಪರೀಕ್ಷೆ :ಮೇ 12, 2013 ವೈದ್ಯಕೀಯ ಪರೀಕ್ಷೆ: ಜೂನ್-ಆಗಸ್ಟ್ 2013.
10.ಸಹಾಯಕ್ಕೆ ಹೆಲ್ಪಲೈನ್: ಕರ್ನಾಟಕ, ಕೇರಳ
ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪಗಳಿಗೆ: 09483862020 &
08025502520 (ಬೆಳಿಗ್ಗೆ
10 ರಿಂದ ಸಂಜೆ 5 ಗಂಟೆ ವರೆಗೆ, ಸೋಮವಾರದಿಂದ ಶುಕ್ರವಾರದ ವರೆಗೆ.)
No comments:
Post a Comment