ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಣವಿರೇಶ ತಂದೆ ಶಿವಾನಂದ ಸಿಂಪಿ ಸಾ:ಚನ್ನಮಲ್ಲೇಶ್ವರ ಮಠ ಹತ್ತಿರ ಕಬಾಡಗಲ್ಲಿ ಶಹಾಬಜಾರ ಗುಲಬರ್ಗಾರವರು ನನ್ನ ತಂಗಿಯಾದ ಬಾಗ್ಯಾವಂತಿ ಇವಳಿಗೆ ದಿನಾಂಕ:23-01-2013 ರಂದು ಬೆಳಗ್ಗೆ ವಿ.ಜಿ.ಉಮೇನ್ಸ ಕಾಲೇಜಕ್ಕೆ ನಮ್ಮ ಮೋಟಾರ ಸೈಕಲ್ ನಂ:ಕೆಎ-32 ಇಬಿ-0458 ನೇದ್ದರ ಮೇಲೆ ಕರೆದುಕೊಂಡು ಹೋಗಿ ಕಾಲೇಜಕ್ಕೆ ಬಿಟ್ಟು ವಾಪಸ ಮನೆಗೆ ಅಂಡರ ಬ್ರೀಜ್ ದಿಂದ ಐ-ವಾನ- ಶಾಹಿ ರೋಡ ಮುಖಾಂತರ ಬರುತ್ತಿದ್ದಾಗ ಬೆಳಿಗ್ಗೆ 8-45 ಗಂಟೆಗೆ ಪಿ.ಡಿ.ಎ ಕಾಲೇಜ ಕ್ರಾಸ್ ಹತ್ತಿರ ಕಾರ ನಂ:ಕೆಎ-36 ಎಮ್-5057 ನೇದ್ದರ ಚಾಲಕ ಅಹ್ಮದ ಉಮರ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತಮಾಡಿರುತ್ತಾನೆ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:04/2013 ಕಲಂ:279, 338 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment