ಕಾಣೆಯಾದ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀಮತಿ ಸೀತಾಬಾಯಿ ಗಂಡ ಪೀರಪ್ಪಾ ಕೆರಮಗಿ ವಯ: 70 ವರ್ಷ, ಉ: ಮನೆ ಕೆಲಸ ಜಾ: ಎಸ್.ಸಿ ಸಾ: ಶ್ರೀ ಮಾಳಪ್ಪಾ ಸುರಪೂರ ರವರ ಮನೆಯ ಎದುರುಗಡೆ ರಾಮಜೀ ನಗರ ರೋಜಾ [ಕೆ] ಗುಲಬರ್ಗಾ ರವರು ನಾನು ಮನೆಕೆಲಸ ಮಾಡಿಕೊಂಡು ಮಗಳು ಮತ್ತು ಮಮ್ಮೊಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಎರಡನೇ ಮಗಳಾದ ಭಾರತಿಬಾಯಿ ಇವಳು ತೀರಿಕೊಂಡಿದ್ದು ಇವಳ ಮಗ ಚಂದ್ರಕಾಂತ ತಂದೆ ಬಾಬುರಾವ ಮಂಠಾಳಕರ ವಯ: 18 ವರ್ಷ ವಯಸ್ಸಿನ ಮೊಮ್ಮಗನಿರುತ್ತಾನೆ.ಇತನು ದಿನಾಂಕ:07/11/2012 ರಂದು ಸಾಯಂಕಾಲ 17:00 ಗಂಟೆಗೆ ರಾಮಜೀ ನಗರದ ಮನೆಯಿಂದ ಹೇಳದೇ ಕೇಳದೇ ಮನೆಬಿಟ್ಟು ಹೋಗಿರುತ್ತಾನೆ. ನನ್ನ ಮೊಮ್ಮಗನ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ.08/2013 ಕಲಂ ಹುಡುಗ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಹುಡಗನ ಚಹರೆ: ತೆಳ್ಳನೆ ಮೈಕಟ್ಟು, ಕೆಂಪು ಮೈಬಣ್ಣ, ನೀಟಾದ ಮೂಗು, ಬಲಗಾಲದ ಹಿಮ್ಮಡಿಯ ಮೇಲೆ ಹಳೆಯ ಗಾಯದ ಗುರುತು. ಎತ್ತರ 5’6”, ನೀಲಿ ಬಣ್ಣದ ಜೀನ್ಸಪ್ಯಾಂಟ, ನೀಲಿಬಣ್ಣದ ಪಟ್ಟಿಪಟ್ಟಿ ಟೀಶರ್ಟ , ಕರಿಬಣ್ಣದ ಬನಿಯನ್, ಬೂದಿಬಣ್ಣದ ಅಂಡರವೇರ , ಕನ್ನಡ, ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ರೋಜಾ ಪೊಲೀಸ್ ಠಾಣೆ ಗುಲಬರ್ಗಾ ದೂರವಾಣಿ ಸಂ: 08472-263623 ಅಥವಾ 9480803550 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ದೂರವಾಣಿ ಸಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 651/12 ದಿನಾಂಕ: 28/12/2012 ನೇದ್ದು ದಿನಾಂಕ:23-01-2013 ಹಾಜರ ಪಡಿಸಿದ್ದರ ಸಾರಾಂಶವೇನಂದರೆ, ಅನೀಸ ಅಹ್ಮದ ತಂದೆ ವಾಹೀದ ಅಹ್ಮದ, ವಯ|| 35 ವರ್ಷ, ಉ|| ಖಾಸಗಿ ಕೆಲಸ, ಸಾ|| ಮನೆ ನಂ: 11-1817/13ಎ ವಿದ್ಯಾನಗರ ಗುಲಬರ್ಗಾರವರು ಹೈದ್ರಾಬಾಕ ಕರ್ನಾಟಕ ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದು, ಮೋಸ ಮಾಡುವ ಉದ್ದೇಶದಿಂದ 1993 ರಲ್ಲಿ ಸಂಸ್ತೆಯವರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ ಪ್ರಕಟಣೆ ಮೂಲಕ ಮಾಹಿತಿ ನೀಡಿ, ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದು, ನನ್ನ ಕಡೆಯಿಂದ ದಾಖಲಾತಿ ಮಾಡಿಕೊಳ್ಳಲು 45,000/- ರೂಪಾಯಿ ಪಡೆದುಕೊಂಡಿದ್ದು, ಕೋರ್ಸ ಮುಗಿದ 18 ತಿಂಗಳ ನಂತರ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ ಸಹಿ ಇರಲಾರದ ನಕಲು ದಾಖಲೆ ಪತ್ರಗಳನ್ನು ಸ್ರಷ್ಟಿಸಿ ಸರ್ಟಿಪಿಕೇಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:08/2013 ಕಲಂ: 425, 463, 464, 383, 418, 420, 120 (ಬಿ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕ್ರಮವಾಗಿ
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 649/12 ದಿನಾಂಕ:28/12/2012 ನೇದ್ದು ದಿನಾಂಕ:23-01-2013 ರಂದು ಹಾಜರ ಪಡಿಸಿದ್ದರ ಸಾರಾಂಶವೇನಂದರೆ, ಸತೀಷ ತಂದೆ ಪ್ರಹ್ಲಾದರಾವ ಯಡಬೋಳೆ, ವಯ|| 35 ವರ್ಷ, ಸಾ|| ಮನೆ ನಂ: 3-900/4 ಅತ್ತರ ಕಂಪೌಂಡ ಗಾಜೀಪೂರ ಗುಲಬರ್ಗಾ ರವರ ಹೈದ್ರಾಬಾಕ ಕರ್ನಾಟಕ ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದು, ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರ ಉದ್ದೇಶದಿಂದ 1993 ರಲ್ಲಿ ಸಂಸ್ತೆಯವರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿ ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದು, ಸದರಿ ಕೋರ್ಸಗೆ ನನ್ನ ಕಡೆಯಿಂದ 45,000/- ರೂಪಾಯಿ ಪಡೆದುಕೊಂಡಿದ್ದು, ಕೋರ್ಸ ಮುಗಿದ 18 ತಿಂಗಳ ನಂತರ ನನಗೆ ಸದರಿ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ ಸಹಿ ಇರಲಾರದ ನಕಲು ದಾಖಲೆಗಳನ್ನು ಸ್ರಷ್ಟಿಸಿ ಸರ್ಟಿಪೇಕೆಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 09/2013 ಕಲಂ: 425, 463, 464, 383, 418, 420, 120 (ಬಿ) ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 650/12 ದಿನಾಂಕ: 28/12/2012 ನೇದ್ದು ದಿನಾಂಕ: 23-01-2013 ರಂದು ಹಾಜರ ಪಡಿಸಿದ್ದರ ಸಾರಾಂಶವೇನಂದರೆ,ಶ್ರೀ ಅಬ್ದುಲ ವಾಹೀದ ತಂದೆ ಮಹ್ಮದ ಖಾಜಾಮಿಯಾ, ವಯ|| 40, ಉ|| ಖಾಸಗಿ ನೌಕರ, ಸಾ|| ಪ್ಲಾಟ ನಂ: 57, ನ್ಯೂ ರಾಘವೇಂದ್ರ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ಹೈದ್ರಾಬಾಕ ಕರ್ನಾಟಕ ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದು, ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರ ಉದ್ದೇಶದಿಂದ 1993 ರಲ್ಲಿ ಆರೋಪಿತರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿ ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದು, ಸದರಿ ಕೋರ್ಸಗೆ ನನ್ನ ಕಡೆಯಿಂದ 45,000/- ರೂಪಾಯಿ ಪಡೆದುಕೊಂಡಿದ್ದು, ಕೋರ್ಸ ಮುಗಿದ 18 ತಿಂಗಳ ನಂತರ ನನಗೆ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ ಸಹಿ ಇರಲಾರದ ನಕಲು ದಾಖಲೆಗಳನ್ನು ಸ್ರಷ್ಟಿಸಿ ಸರ್ಟಿಪಿಕೇಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2013 ಕಲಂ: 425, 463, 464, 383, 418, 420, 120 (ಬಿ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಾಚಾರ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:23/01/2013 ರಂದು ಸಾಯಂಕಾಲ 7-00 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 25/2013 ನೇದ್ದರ ಸಾರಂಶವೇನೆಂದರೆ, ನಂದಿತಾ (ಹೆಸರು ಬದಲಾಯಿಸಲಾಗಿದೆ) ನನಗೆ ಆಳಂದ ತಾಲೂಕಿನ ಬಸವನಸಂಗೋಳಗಿ ಗ್ರಾಮದ ಬಸವರಾಜ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು, ನಾನು ಅದೇ ಗ್ರಾಮದ ಈರಣ್ಣ ಎಂಬುವವನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರಿಂದ ನನ್ನ ಗಂಡ ಬಸವರಾಜು ವಿವಾಹ ವಿಚ್ಛೇದನ ಕೊಟ್ಟಿರುತ್ತಾನೆ. ನನಗೆ ಈರಣ್ಣ ಇತನು ಶಾರೀರಿಕ ಸಂಬಂಧ ಬೆಳೆಸಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಗುಲಬರ್ಗಾದ ಶಹಾಬಜಾರ ಬಡಾವಣೆಯಲ್ಲಿ ಇಟ್ಟಿದ್ದು ನನಗೆ ಮದುವೆ ಮಾಡಿಕೊಳ್ಳದೆ ಇದ್ದುದರಿಂದ ನಾನು ನನ್ನ ತಂದೆಯಾಯಿ ಮನೆಯಾದ ಮಂಕ್ತಪೂರದಲ್ಲಿದ್ದಾಗ ದಿನಾಂಕ:13/01/2013 ರಂದು ಈರಣ್ಣಾ ಇತನು ಮನೆಗೆ ಬಂದು ಜಬರಿ ಸಂಭೋಗ ಮಾಡಿದ್ದು, ಅಲ್ಲದೆ ಜೀವದ ಭಯ ಹಾಕಿರುತ್ತಾನೆ. ಈ ಕೃತ್ಯಕ್ಕೆ ಆತನ ತಂದೆಯಾದ ವಿಠಲ ಈತನು ಪ್ರೋತ್ಸಾಹ ನೀಡಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:13/2013 ಕಲಂ: 506, 420, 376 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಸೋಮಶೇಖರ ತಂದೆ ಶರಣಪ್ಪಾ ಮಂಗಲಗಿ ಸಾ:ಸಂತೋಷ ಕಾಲೋನಿ ಗುಲಬರ್ಗಾ ರವರು ನನ್ನ ಮಗಳಾದ ಛಾಯ ಇವಳು ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಮನೆಯಲ್ಲಿಯೇ ಇದ್ದಿದ್ದು ಅವಳಿಗೆ ತನ್ನ ಗಂಡನ ಮನೆಗೆ ಬಿಟ್ಟು ಬರುವ ಕುರಿತು ನನ್ನ ಖರೀದಿಸಿದ ಇನ್ನು ನಂಬರ ಹಾಕಲಾರದ ಟಂಟಂ ಗೂಡ್ಸದಲ್ಲಿ ನಾನು, ನನ್ನ ಹೆಂಡತಿ ನೀಲಮ್ಮಾ, ಮಗಳು ಛಾಯಾ, ಮೊಮ್ಮಗಳು ವಿಜಯಲಕ್ಷ್ಮಿ , ಮಗ ರೇವಣಸಿದ್ದ , ಸಂಬಂಧಿಕರಾದ ಅಶೋಕ, ಅನೀಲಕುಮಾರ, ವಿಜಯಲಕ್ಷ್ಮಿ ಕೂಡಿ ಸ್ವಂತ ಗ್ರಾಮಕ್ಕೆ ಹೋಗಿ ಪಂಚಾಯತ ಮುಗಿಸಿಕೊಂಡು ಎಲ್ಲರೂ ಸದರಿ ಟಂ ಟಂ ಗೂಡ್ಸದಲ್ಲಿ ಮರಳಿ ರಾತ್ರಿ 00:45 ಗಂಟೆ ಸುಮಾರಿಗೆ ಆಲಗೂಡ ಕ್ರಾಸ ಹತ್ತಿರ ಗುಲಬರ್ಗಾ ಕಡೆಗೆ ಬರುವಾಗ ಅದೇ ವೇಳೆಗೆ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಕಾರ ನಂ ಕೆ.ಎ -28 ಎನ್-0803 ನೇದ್ದರ ಚಾಲಕ ಮಡಿವಾಳಯ್ಯಾ ತಂದೆ ಮಳ್ಳಸಿದ್ದಯ್ಯಾ ಇಂಡಿಮಠ ಸಾ:ದೇವರ ಹಿಪ್ಪರಗಿ ಇತನು ಕುಡಿದ ಅಮಲಿನಲ್ಲಿ ತನ್ನ ಕಾರನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಅಡ್ಡಾ ತಿಡ್ಡಿಯಾಗಿ ನಡೆಸಿಕೊಂಡು ಬಂದು ನಮ್ಮ ಟಂಟಂ ಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಟಂ ಟಂ ಗೂಡ್ಸ ರೋಡಿನ ಪಕಕ್ಕೆ ಇರುವ ತಗ್ಗಿನಲ್ಲಿ ಹೋಗಿ ಪಲ್ಟಿ ಆಗಿದ್ದು ಟಂಟಂ ಗೂಡ್ಸದ ಬಾಡಿ ಬಡಿದು ನೀಲಮ್ಮ ಇವಳು ಸ್ದಳದಲ್ಲಿಯೇ ಮೃತಪಟ್ಟಿದ್ದು ನನಗೆ ಹಾಗು ಟಂಟಂ ಗೂಡ್ಸದಲ್ಲಿ ಕುಳಿತವರಿಗೆ ಭಾರಿ ರಕ್ತಗಾಯ ಹಾಗು ಸಾದಾ ಗುಪ್ತಗಾಯವಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:53/2013 ಕಲಂ 279 ,337,338,304[ಎ] ಐಪಿಸಿ ಸಂ 185 ಐಎಮ್‌ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ ಶಾಬ್ದುಲ್ ತಂದೆ ಬಾಲಪ್ಪ ಮೇತ್ರೆ ಸಾ||ಲೋಹಾಡ ಗ್ರಾಮ, ತಾ||ಸೇಡಂ, ಜಿಲ್ಲಾ|| ಗುಲಬರ್ಗಾರವರು ನಾನು ದಿನಾಂಕ:23-01-2013 ರಂದು ಬೆಳಿಗ್ಗೆ 08-00 ಗಂಟೆಗೆ ಹಾಬಾಳ(ಟಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೆ ಇರುವ ಕಿರಾಣಿ ಡಬ್ಬಿ ಹತ್ತಿರ ಇದ್ದಾಗ ನನ್ನ ಹಿಂದಿನಿಂದ ಒಮ್ಮೆಲೆ ಹಾಬಾಳ(ಟಿ) ಗ್ರಾಮದ ಅಂಜಲಪ್ಪ ತಂದೆ ರಾಯಪ್ಪ ತಳವಾರ, ಶಾಮು ತಂದೆ ಅಂಜಲಪ್ಪ ತಳವಾರ ಕೂಡಿಕೊಂಡು ಬಂದವರೇ ಅವರಲ್ಲಿ ಅಂಜಲಪ್ಪ ಇತನು ಅವಾಚ್ಯವಾಗಿ ಜಾತಿ ಎತ್ತಿ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗಣ್ಣು ಹುಬ್ಬಿಗೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದನು. ಅವನ ಮಗ ಶಾಮು ತಂದೆ ಅಂಜಲಪ್ಪ ತಳವಾರ ಇವನು ತನ್ನ ತಂದೆಯ ಕೈಯಿಂದ ಬಡಿಗೆ ಕಸಿದುಕೊಂಡು ನನ್ನ ಎಡಗಾಲಿನ ತೊಡೆಗೆ ಮತ್ತು ಎಡ ಎದೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ನಾನು ಅಲ್ಲಿಂದ ಓಡುತ್ತಾ ಶಿವಕುಮಾರ ದೇಶಮುಖ ಇವರ ಮನೆಯ ಕಡೆಗೆ ಓಡಿ ಅವರ ಮನೆಯ ಮುಂದೆ ನಿಂತಾಗ ಅಲ್ಲಿಯೂ ಸಹಾ ಅಂಜಲಪ್ಪ ಮತ್ತು ಶಾಮು ತಳವಾರ ರವರು ನನಗೆ ಹೊಡೆಯಲು ಬೆನ್ನುಹತ್ತಿ ಬಂದಿದ್ದು ನನಗೆ ಹೊಡೆಯುವಷ್ಟರಲ್ಲಿ ‘ಶಿವಕುಮಾರ ದೇಶಮುಖ’ ರವರು ಮನೆಯ ಹೊರಗೆ ಬಂದು ಬಿಡಿಸಿಕೊಂಡಿರುತ್ತಾರೆ. ಕಾರಣ ನನಗೆ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿ ಅವಮಾನ ಮಾಡಿ ಬಡಿಗೆಯಿಂದ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:17/2013 ಕಲಂ-324, 504 ಸಂಗಡ 34 ಐಪಿಸಿ ಮತ್ತು 3(I) (X) SC/ST P.A. Act 1989. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ: ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಜಗಧೀಶ ಶೆಟ್ಟರ ರವರು ಗುಲಬರ್ಗಾದಲ್ಲಿ ಪ್ರವಾಸ ಕೈಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಂಡಿತ ರಂಗ ಮಂದಿರದಲ್ಲಿ ಸಂಚಾರಿ ಪಶು ವೈದ್ಯಕೀಯ ಚಿಕಿತ್ಸೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗ ಕೆ.ಜಿ.ಪಿ ಪಕ್ಷದ ಕಾರ್ಯಕರ್ತರಾದ ಸುಭಾಷ ತಂದೆ ಶಂಕ್ರಪ್ಪ ಬಿರಾದಾರ, ಮತ್ತು ಆತನ ಸಂಗಡ ಶರಣಬಸಪ್ಪ ಕಾಡಾದಿ, ವಿವೇಕಾನಂದ ಕಟ್ಟಿಮನಿ, ಮಲ್ಲಿಕಾರ್ಜುನ, ನಾವದಗಿ ಹಾಗೂ ಇತರರು ಗುಲಬರ್ಗಾ ಮತ್ತು ಜೇವರ್ಗಿ ತಾಲೂಕಿನಾದ್ಯಂತ ಯಾವುದೇ ತರಹದ ಪ್ರತಿಭಟನೆಗಳು, ಧರಣಿಗಳು, ಮೆರವಣಿಗೆಗಳು, ಮತ್ತು ರಸ್ತೆ ತಡೆ ಇತ್ಯಾದಿ ಚಳುವಳಿಗಳು ನಡೆಸದಂತೆ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು ಸಹ ಕೆ.ಪಿ.ಪಿ ಕಾರ್ಯಕರ್ತರು ಮಾನ್ಯ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡೆತಡೆ ಮಾಡಿ ಹಾಗು ಪೊಲೀಸ್ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಅಂತಾ ಪಿ.ಎಸ.ಐ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ: 143, 147, 188, 186, 341 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment