Police Bhavan Kalaburagi

Police Bhavan Kalaburagi

Saturday, January 12, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ, ಮಲ್ಲಣ್ಣ ತಂದೆ ಬಿಚ್ಚಪ್ಪ ದೊಡ್ಮನಿ, ಸಾ:ಬಟಗೆರಾ (ಕೆ) ಗೇಟ್ ತಾ:ಸೇಡಂ ರವರು ನಮ್ಮ ತಂಗಿಯ ಮಗನಾದ ಮಹೇಶ ತಂದೆ ಕಾಶಣ್ಣ ಮ್ಯಾಗಿನಕೇರಿ ವಯ:18 ವರ್ಷ, ಸಾ:ಬಟಗೆರಾ (ಕೆ) ಗ್ರಾಮ, ತಾ:ಸೇಡಂ ಇತನು ದಿನಾಂಕ:11-01-2013 ರಂದು ಸಾಯಂಕಾಲ 17-15 ಗಂಟೆ ಸುಮಾರಿಗೆ ದನಗಳನ್ನು ಮೇಯಿಸುತ್ತಾ ಸೇಡಂ-ಕೊಡಂಗಲ್ ಮುಖ್ಯ ರಸ್ತೆಯ ರಂಜೋಳ ಕ್ರಾಸ್ ಹತ್ತಿರ ರೋಡ ದಾಟುವಾಗ ಬಸ್ ನಂ.ಎಪಿ-22.ಝಡ್-0058 ನೇದ್ದರ ಚಾಲಕನಾದ ವೆಂಕಟರೆಡ್ಡಿ ತಂದೆ ಜಮೂಲರೆಡ್ಡಿ ಮಲ್ಲು ಸಾ:ನಾರಾಯಣಪೇಟ್ ಬಸ್ ಡಿಪೋ (ಆಂದ್ರ ಪ್ರದೇಶ) ಇತನು ಬಸ್ಸ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಹೇಶ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಭಾರಿಗಾಯಗಳಾಗಿದ್ದು ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಯಿಂದ ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೇ ಸಾಯಂಕಾಲ 19-10 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ ಸದರಿ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-08/2013 ಕಲಂ-279, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:11/01/2013 ರಂದು ಸಾಯಂಕಾಲ ರಂದು ಗೋಳಾ [ಕೆ] ಗ್ರಾಮದ ಹನುಮಾನ ದೇವರ ಗುಡಿಯ ಎದರುಗಡೆ ಖುಲ್ಲಾ ಜಾಗೆಯಲ್ಲಿ ಜೂಜಾಟ ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಪಿಐ ಸಾಹೇಬ ಶಹಾಬಾದರವರ ನೇತೃತ್ವದಲ್ಲಿ  ಶ್ರೀ ರಘು.ಎನ್‌ ಪಿಎಸ್‌ಐ ಶಹಾಬಾದ ನಗರ ಠಾಣೆ, ಹಾಗು ಸಿಬ್ಬಂದಿಯವರಾದ ಗುಂಡಪ್ಪಾ, ಯೇಜಿಕಲ್‌,ಬಸವರಾಜ,ಬಸವಣಪ್ಪಾ,ಪರಶುರಾಮ,ಸುಭಾಸ,ರವರು ಶಹಾಬಾದದ ವ್ಯಾಪ್ತಿಯ ಗೋಳಾ [ಕೆ] ಗ್ರಾಮದ ಹನುಮಾನ ದೇವರ ಗುಡಿಯ ಎದರುಗಡೆ ಖುಲ್ಲಾ ಜಾಗೆಯಲ್ಲಿ ಜೂಜಾಟ ದಲ್ಲಿ ನಿರತರಾದ ನಿಂಗಪ್ಪಾ ತಂದೆ ಚಂದ್ರಾಮ ಕೋಬಾಳ ಸಂಗಡ ಇನ್ನೂ 8 ಜನರು ಸಾ:ಎಲ್ಲರೂ ಗೋಳಾ (ಕೆ) ಗ್ರಾಮದವರು ದಸ್ತಗಿರಿ ಮಾಡಿದ್ದು ಅದರಲ್ಲಿ  ರವಿ ತಂದೆ ಮಹಾದೇವಪ್ಪಾ ಸಣತಪ ವ:28 ಜಾ:ಕಬ್ಬಲಿಗ ಉ:ಕೂಲಿಕೆಲಸ ಸಾ:ಗೋಳಾ (ಕೆ) ಅನ್ನುವವನು ಓಡಿ ಹೋಗಿರುತ್ತಾನೆ. ಜೂಜಾಟದಲ್ಲಿ ಬಳಸಿದ ನಗದು ಹಣ 4370/- ರೂ ಹಾಗೂ ಇಸ್ಪೀಟ ಎಲೆಗಳನ್ನು ಜಪ್ತಿಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:04/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

No comments: