ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಾಚರಣೆ::
ಬಂಧಿತ ಆರೋಪಿತರಿಂದ ನಗದು ಹಣ 57,31,420/- ಹಾಗೂ ಮೋಟಾರ ಸೈಕಲ್, ಲ್ಯಾಪ್ ಟ್ಯಾಪ್ ಮತ್ತು ಸ್ಯಾಮಸಂಗ್ ಟ್ಯಾಬ್ ಜಪ್ತಿ:
ದಿನಾಂಕ:08/01/2013 ರ ರಾತ್ರಿ 10-00 ಗಂಟೆಯಿಂದ ದಿನಾಂಕ:09/01/2013 ರ ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ ಗುಲಬರ್ಗಾ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಶ್ರೀ.ರೇಣುಕಾಮಾತಾ ಮಲ್ಟಿ ಸ್ಟೇಟ ಕೋ-ಆಪರೇಟಿವ ಅರ್ಬನ ಕ್ರೇಡಿಟ್ ಸೋಸಾಯಿಟಿ ಸೂಪರ್ ಮಾರ್ಕೆಟ್ ಶಾಖೆ ಗುಲಬರ್ಗಾ ಪೈನಾನ್ಸ ಬ್ಯಾಂಕಿನಲ್ಲಿ ಕಳ್ಳತನವಾದ ನಗದು ಹಣ 58,00,000/- ರೂಪಾಯಿಗಳು ಕಳ್ಳತನವಾದ ಬಗ್ಗೆ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿತರ ಪತ್ತೆ ಕುರಿತು ಶ್ರೀ ಭೂಷಣ್ . ಜಿ. ಬೋರ್ಸೆ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು “ಎ” ಉಪ-ವಿಭಾಗ ಗುಲಬರ್ಗಾವರ ನೇತತ್ರತ್ವದಲ್ಲಿ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, 1 ಶ್ರೀ.ಎಸ್.ಎಸ್ ಹುಲ್ಲೂರ ಪೊಲೀಸ್ ಇನ್ಸಪೆಕ್ಟರ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ಹಾಗೂ ಸಿಬ್ಬಂದಿಯವರಾದ ಅಣ್ಣಾರಾವ ಹೆಚ್.ಸಿ, ಅಶೋಕ ಪಿ.ಸಿ ಮತ್ತು 2 ನೇ ತಂಡದಲ್ಲಿ ಶ್ರೀ.ಶರಣಬಸವೇಶ್ವರ.ಬಿ ಪಿ.ಐ ಬ್ರಹ್ಮಪೂರ ಪೊಲೀಸ ಠಾಣೆ ಮತ್ತು ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ರಫೀಕ, ಶಿವಪ್ರಕಾಶ, ದೇವಿಂದ್ರಪ್ಪ,ರಾಮು ಪವಾರ ಒಳಗೊಂಡ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ತನಿಖೆಯ ಕಾಲಕ್ಕೆ ವಿವಿಧ ಮೂಲಗಳಿಂದ ಹಾಗೂ ವೈಜ್ಞಾನಿಕ ತಂತ್ರಾಂಶದಿಂದ ಮಾಹಿತಿಯನ್ನು ಸಂಗ್ರಹಿಸಿ, ಮಹಾರಾಷ್ಟ್ರ ರಾಜ್ಯದ ನಾಸಿಕ ಹಾಗೂ ಪೂಣಾ ಜಿಲ್ಲೆಗಳಲ್ಲಿ ಹೋಗಿ ಆರೋಪಿತರ ಚಲನವಲನಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಅರೋಪಿತರಾದ 1) ಇಂದ್ರಕುಮಾರ@ರೋಹಿತ ತಂದೆ ಶಿವಾಜಿ ಚವ್ಹಾಣ, ವಯಾ||23, ಸಾ|| ಮಾಲಗಾಂವ, ತಾ|| ಸುರಗಾನಾ, ಜಿ|| ನಾಸಿಕ್ (ಮಹಾರಾಷ್ಟ್ರ), 2)ಸುನೀಲ ತಂದೆ ಪೋಪಟ್, ವಯಾ|| 22, ಸಾ|| ಚಿಲ್ಲಾರಪಾಡಾ, ತಾ|| ಸುರಗಾನಾ, ಜಿ|| ನಾಸಿಕ್ (ಮಹಾರಾಷ್ಟ್ರ) ಇವರನ್ನು ಮಹಾರಾಷ್ಟ್ರ ಪೊಲೀಸ್ ರ ಸಹಕಾರದೊಂದಿಗೆ ನಂದೂರ ಸಿಂಘೋಟಾ ದಲ್ಲಿ ಬಂಧಿಸಿ. ಬಂಧಿತರಿಂದ ನಗದು ಹಣ 57,31,420/- ಹಾಗೂ 90 ಸಾವಿರ ಮೌಲ್ಯದ ಕರಿಶ್ಮಾ ಮೋಟಾರ ಸೈಕಲ್ ನ್ನು ಜಪ್ತಿ ಪಡಿಸಿಕೊಂಡಿದ್ದು ಇನ್ನೋಬ್ಬ ಆರೋಪಿತನಾದ 3)ಮನೋಜ ತಂದೆ ಓಂಪ್ರಕಾಶ ಸೌದಾಗರ, ವಯ|| 38, ಸಾ|| ಮೇಹತ್ತರಗಲ್ಲಿ ಗಾಜೀಪೂರ ಗುಲಬರ್ಗಾ ಇತನನ್ನು ಬಂಧಿಸಿ, ಇತನಿಂದ 1,98,000/- ರೂಪಾಯಿ ನಗದು ಹಣ, ಒಂದು ಸೋನಿ ಕಂಪನಿ ಲ್ಯಾಪಟ್ಯಾಪ ಅ||ಕಿ|| 40,000/- ಹಾಗೂ ಒಂದು ಸ್ಯಾಮಸಂಗ ಟ್ಯಾಬ್ ಅ||ಕಿ|| 15,000/- ವಶಪಡಿಸಿಕೊಳ್ಳಲಾಗಿದೆ. ಒಟ್ಟು ನಗದು ಹಣ 57,31,420/- ಹಾಗು 1,45,000/- ಗಳ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ಒಟ್ಟು 58,76,420/- ನಗದು ಹಣ ಸಾಮಾನುಗಳನ್ನು ಬಂಧಿತ ಆರೋಪಿತರಿಂದ ಜಪ್ತಿ ಪಡಿಸಿಕೊಳ್ಳಲಾಗಿದೆ.
No comments:
Post a Comment