ಕೊಲೆ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀ ಶಾಂತಪ್ಪ ತಂದೆ ಅಂಬಣ್ಣ ಬಜಂತ್ರಿ ಸಾ||ಜೋಗುರ ತಾ|ಜಿ|ಗುಲಬರ್ಗಾರವರು ನನಗೆ 5 ಜನ ಮಕ್ಕಳಿದ್ದು ಲಕ್ಷ್ಮಣ ಇತನು ಬ್ಯಾಂಡ ಬಾರಿಸುವ ಕೆಲಸ ಮಾಡುತ್ತಾ ಗುಲಬರ್ಗಾದಲ್ಲಿ ವಾಸವಿರುತ್ತಾನೆ. ಲಕ್ಷ್ಮಣ ಇತನು ರಾಜು ಇತನಿಗೆ ಕೊಡಬೇಕಾದ 300 ರೂ. ಹಣ ಕೊಡುವ ವಿಷಯದಲ್ಲಿ ಓಣಿಯ ಹುಡುಗರಾದ ರಾಜು ಇತನ ಸಂಗಡ ಸಿದ್ದು @ ಸಿದ್ಯಾ ಮತ್ತು ಲಕ್ಷ್ಮಣ ರವರು ಕೂಡಿ ಲಕ್ಷ್ಮಣ ಇತನಿಗೆ ಗುಲಬರ್ಗಾದ ಶೇಟ್ಟಿ ಕಾಂಪ್ಲೇಕ್ಸ ಎದುರುಗಡೆ ಇರುವ ವೆಂಕಟೇಶ್ವರ ಬೆಂಗಳೂರ ಬೇಕರಿ ಪಕ್ಕದಲ್ಲಿ ಕರೆದುಕೊಂಡು ಹೋಗಿ 300 ರೂ. ಕೊಟ್ಟಿರುವದಿಲ್ಲ ಅಂತ ಬೈದು, ಸಿದ್ದು ಮತ್ತು ಲಕ್ಷ್ಮಣ ರವರು ಕೂಡಿ ಬಡಿಗೆಯಿಂದ ಹೊಡೆಬಡೆ ಮಾಡಿ ನಂತರ ಅಲ್ಲೆ ಪಕ್ಕದಲ್ಲಿ ಮುಚ್ಚಿರುವ ಪೆಟ್ರೋಲ ಪಂಪದ ಕಂಪೌಂಡದ ಹಿಂದುಗಡೆ ಇರುವ ಸರಕಾರಿ ಜಾಲಿ ಕಂಟಿಯಲ್ಲಿ 3 ಜನರು ಕೂಡಿ ಎತ್ತಿಕೊಂಡು ಹೋಗಿ ಲಕ್ಷ್ಮಣ ಇತನಿಗೆ ರಾಜು ಮತ್ತು ಲಕ್ಷ್ಮಣ ರವರು ಕೂಡಿ ಬಡಿಗೆಯಿಂದ ಹೊಡೆದಾಗ ಆತನು ನೆಲಕ್ಕೆ ಬಿದ್ದಾಗ ಸಿದ್ದು ಇತನು ಅಲ್ಲೆ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ತಲೆಯ ಮೇಲೆ ಎತ್ತಿಹಾಕಿದ್ದರಿಂದ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 07/2013 ಕಲಂ 341,504,302 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ಚೌಕ ಪೊಲೀಸ್ ಠಾಣೆ:ಶ್ರೀ ಅರವಿಂದ ತಂದೆ ಶಂಕರರಾವ ಚಿಕ್ಕನಾಗಾಂವ ಸಾ||ಸಂತೋಷ ಕಾಲೋನಿ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ ರವರು ನನ್ನ ತಂದೆಯಾದ ಶಂಕರರಾವ ಇವರು ಮೋಟಾರ ಸೈಕಲ ನಂ. ಕೆಎ-32-ವಿ-7260 ನೇದ್ದರ ಮೇಲೆ ಹೊರಟಾಗ ಸಂತೋಷ ಕಾಲೋನಿಯ ಕ್ರಾಸ ಹತ್ತಿರ ರಸ್ತೆಯ ಮೇಲೆ ಸಮಯ ರಾತ್ರಿ 11.30 ಗಂಟೆಗೆ ಯಾರೋ ಅಪರಿಚಿತ 3 ಜನರು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಕುತ್ತಿಗೆಗೆ, ಹೊಟ್ಟೆಗೆ ಹೋಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 08/2013 ಕಲಂ 341,307 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment