Police Bhavan Kalaburagi

Police Bhavan Kalaburagi

Saturday, January 5, 2013

GULBARGA DISTRICT



-: ಪೊಲೀಸ್ ಪ್ರಕಟಣೆ:-

          ದಿನಾಂಕ:01-01-2013 ರಿಂದ 07-01-2013 ರವರಗೆ 24 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸುತ್ತಿದ್ದು, ಈ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ:07-01-2013 ರಂದು ಸೋಮವಾರ ಬೆಳಿಗ್ಗೆ 06-30 ಗಂಟೆಗೆ ಎಸ್.ವಿ.ಪಟೇಲ ವೃತ್ತದಿಂದ ಜಗತ್ ವೃತ್ತದವರೆಗೆ (1.5 ಕಿ.ಮಿ) ರಸ್ತೆ ಓಟದ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾಧಿಕಾರಿ ಗುಲಬರ್ಗಾರವರು ಚಾಲನೆ ನೀಡಲಿದ್ದಾರೆ. ಸದರಿ ರಸ್ತೆಯ ಓಟದ ಸ್ಪರ್ಧೆಯನ್ನು 18 ವರ್ಷ ಮೇಲ್ಪಟ್ಟ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಈ ರಸ್ತೆ ಓಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮದ್ವಿತೀಯತೃತೀಯ ಹಾಗೂ ಸಮಾಧಾನಕರ ಬಹುಮಾನಗಳು ನೀಡಲಾಗುವುದು. ಈ ಸ್ಪರ್ಧೆಗೆ  ಶಾಲಾ ಕಾಲೇಜ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಮೇಲ್ಕಂಡ ದಿನಾಂಕ ಹಾಗೂ ಸಮಯಕ್ಕೆ ಎಸ್.ವಿ ಪಟೇಲ ವೃತ್ತಕ್ಕೆ ಬಂದು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಅಂತ ಸಾರ್ವಜನಿಕರಲ್ಲಿ ಕೋರಲಾಗಿದೆ.                                                                                                                     
                            ಎಸ್.ಪಿ.ಗುಲಬರ್ಗಾರವರಿಂದ

No comments: