ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಶೇಖ್ ಖಾಜಾಮೀಯಾ ಹುಸೇನ ತಂದೆ ಶೇಖ್ ಮಗ್ದುಮ್ ಹುಸೆನ ಮೀಣಜಗಿ ಸಾ: ಮದಿನಾ ಕಾಲೊನಿ ಎಮ್‌ಎಸ್‌ಕೆ ಮಿಲ್ ಜಿಲಾನಾಬಾದ ಗುಲಬರ್ಗಾರವರು ನನ್ನ ಮೂರನೆಯ ಮಗನಾದ ಶೇಖ್ ವಾಸೀಂ ಹುಸೇನ್ ಇತನು ಫಿರೋಜಾಬಾದದಲ್ಲಿರುವ ಮಹಿಬೂಬ ಪಾಷಾ ತಂದೆ ಸುಲೈಮಾನಸಾಬ ಹೆರವಾಲೆ ಸಾ|| ಫಿರೋಜಾಬಾದ ಇವರ ಹತ್ತಿರ ಹೋಗಿ ಬಹಳ ದಿವಸವಾಯಿತು ನಾನು ಹೋಗಿ ಬರುತ್ತೆನೆ ಅಂತಾ ದಿನಾಂಕ:25-02-2013 ರಂದು 7-00 ಪಿ.ಎಮ ಸುಮಾರಿಗೆ ತನ್ನ ಹೀರೋ ಹೊಂಡಾ ಸಿಡಿ-100 ಮೋಟರ ಸೈಕಲ್ ನಂ. ಕೆಎ-32 ಆರ್-2942 ನೇದ್ದರ ಮೇಲೆ ಹೋಗಿದ್ದು, ರಾತ್ರಿ 9-00 ಗಂಟೆಯ ನನ್ನ ಎರಡನೆಯ ಮಗನಾದ ಶೇಖ್ ಹಾಬಿದ ಹುಸೇನ್ ಇತನು ಅಣ್ಣನಾದ ಶೇಖ್ ವಾಸೀಂ ಹುಸೇನ ಇತನ ಮೋಬೈಲ್ ಫೊನ್‌ನಿಂದ ಯಾರೋ ಪೊನ್ ಮಾಡಿ ಸರಡಗಿ ಕ್ರಾಸ್ ಸಮೀಪ ಯಾವೂದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಮೋಟರ್ ಸೈಕಲ್ ನಂ:ಕೆಎ-32 ಆರ್- 2942 ನೇದ್ದಕ್ಕೆ ಡಿಕ್ಕಿ ಪಡಿಸಿ ನಿಲ್ಲಿದೆ ಹಾಗೆಯೆ ಓಡಿಸಿಕೊಂಡು ಹೋಗಿರುತ್ತಾರೆ. ಆತನಿಗೆ ಭಾರಿಗಾಯಗಳಾಗಿದ್ದರಿಂದ ಉಪಚಾರ ಕುರಿತು 108 ಅಂಬ್ಯುಲೆನ್ಸನಲ್ಲಿ ಗುಲಬರ್ಗಾಕ್ಕೆ ಕಳಿಸುತಿದ್ದೆವೆ ಅಂತಾ ತಿಳಿಸಿದ ಮೇರೆಗೆ ನಾವು ಹೋಗಿ ನೋಡಲಾಗಿ ದೇಹದ ಹಲವು ಕಡೆ ಭಾರಿ ರಕ್ತಗಾಯವಾಗಿ ಮಾತನಾಡುತ್ತಿಲ್ಲ. ನನ್ನ ಮಗ ಶೇಖ್ ವಾಸೀಂ ಹುಸೇನ್ ಇತನ ಮೋಟರ ಸೈಕಲ್ ಕ್ಕೆ ಡಿಕ್ಕಿ ಪಡಿಸಿದ ಚಾಲಕ ಮತ್ತು ವಾಹನವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶೇಖ್ ಖಾಜಾಮೀಯಾ ಹುಸೇನ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 25/2013 ಕಲಂ,279,338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
No comments:
Post a Comment