ಅಪ್ರಾಪ್ತ ವಯಸ್ಸಿನ ಹುಡಗರಿಂದ ಹಣ ಮತ್ತು ಮೊಬಾಯಿಲ್ ದರೋಡೆ:
ಅಶೋಕ ನಗರ ಪೊಲೀಸ ಠಾಣೆ:ದಿನಾಂಕ:26/11/2012 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಗೋದುತಾಯಿ ನಗರದ ರೈಲ್ವೆ ಹಳೆಯ ಹತ್ತಿರ ಶ್ರೀ ಚೇತನ ತಂದೆ ಗುಂಡಪ್ಪ ಕೊಟಗಿ ಮತ್ತು ಶಫೀಮುಲ್ಲಾ ಇಬ್ಬರು ವಿದ್ಯಾರ್ಥಿಗಳು ನಿಸರ್ಗಾ ಕಾಲೇಜದಲ್ಲಿ ಟಿವಿಶನ್ ಮುಗಿಸಿಕೊಂಡು ರೈಲ್ವೆ ಹಳೆಯ ದಾಟಿ ಬರುತ್ತಿರುವಾಗ ಇಬ್ಬರು ಅಪರಿಚಿತ ಹುಡುಗರು ಬಂದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಂಭೀರ ಸ್ವರೂಪದ ಗಾಯಗೊಳಿಸಿ ಮೊಬೈಲ ಮತ್ತು ಹಣ ಕಸಿಕುಕೊಂಡು ಹೋಗಿರುತ್ತಾರೆ ಅಂತಾ ಚೇತನ ತಂದೆ ಗುಂಡಪ್ಪ ಕೊಟಗಿ ಸಾ||ಗೋದುತಾಯಿ ನಗರ ಗುಲಬರ್ಗಾ ರವರು ದೂರು ನೀಡಿದ್ದರಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 107/2012 ಕಲಂ 397 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಕೊಂಡ ಶ್ರೀ ಟಿ.ಹೆಚ್. ಕರೀಕಲ್ ಪಿ.ಐ ಅಶೋಕ ನಗರ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರಾದ ಸುರೇಶ, ರಫೀಕ, ಬಸವರಾಜ, ಉಮ್ಮಣ್ಣ ಪಿ.ಸಿ ರವರು ವೈಜ್ಞಾನಿಕ ತಂತ್ರಾಂಶದಿಂದ ಹಣ ಮತ್ತು ಮೊಬೈಲ ಕಸಿದುಕೊಂಡು ಹೋಗಿದ್ದ ಅಪ್ರಾಪ್ತ ವಯಸ್ಸಿನ ಆಪಾಧಿತರಾದ ಸಮೀರ ತಂದೆ ಸೈಯದ ಮಹೆಬೂಬ ಸಾ|| ವಿದ್ಯಾನಗರ ಗುಲಬರ್ಗಾ, ಶಫೀ @ ಮಹ್ಮದ ಶಫೀಯೊದ್ದಿನ್ ತಂದೆ ಮಹ್ಮದ ಇಮ್ತಿಯಾಜ ಸಾ|| ಶಾಂತಿನಗರ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿರುತ್ತಾರೆ.
No comments:
Post a Comment