Police Bhavan Kalaburagi

Police Bhavan Kalaburagi

Thursday, February 21, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸೂರ್ಯಕಾಂತ ತಂದೆ ಮಲ್ಲಪ್ಪ ಮದಾನೆ ವ:40 ವರ್ಷ ಉ: ಬಿ.ಇ.ಓ. ಬೀದರ ಜಾ: ಲಿಂಗಾಯತ ಸಾ: ಜವಳಿ (ಡಿ) ಗ್ರಾಮ ತಾ: ಆಳಂದ ಹಾ||ವ|| ನ್ಯೂ ರಾಘವೇಂದ್ರ ನಗರ ಗುಲಬರ್ಗಾ ರವರು ನನ್ನ ಆಧೀನದಲ್ಲಿ ಕರ್ತವ್ಯ ಮಾಡುವ ವೆಂಕಟ್ ತಂದೆ ಅಂಬಾರಾವ ಕುಲಕರ್ಣಿ :59 ವರ್ಷ : .ಸಿ.. ಬಿ... ಆಫೀಸ ಸಾ:ಎಲ್..ಜಿ. ಕಾಲನಿ ಬೀದರ ರವರು 15 ದಿವಸಗಳ ಹಿಂದೆ ನನ್ನ ಹೆಂಡತಿ ನಿರ್ಮಲಾ ಇವರಿಗೆ ಕುತ್ತಿಗೆ ಹತ್ತಿರ ಗಡ್ಡೆ ಆಗಿದ್ದರಿಂದ ಗುಲಬರ್ಗಾ ನಗರದ ಡಾ|| ಅರುಣ ಬಡಶೇಷಿವರ ಹತ್ತಿರ ಅಪರೇಶನ ಮಾಡಿಸಿರುತ್ತೆನೆ. ಅವರಿಗೆ ಕರೆದುಕೊಂಡು ಬರುವ ಕುರಿತು ವೆಂಕಟ ಕುಲಕರ್ಣಿ ಇವರ ಮಾರುತಿ ಅಲ್ಟೋ ಕೆಎ-05 ಎಂಜೆ-5068 ನೇದ್ದರಲ್ಲಿ  ಹೊರಟಾಗ ಮಧ್ಯಾಹ್ನ 4-30 ಗಂಟೆ ಹೊರಟಿದ್ದು, ಕಾರ ವೆಂಕಟ್ ಇವರು ನಡೆಸುತ್ತಿದ್ದವರು. ವೆಂಕಟ್  ಕುಲಕರ್ಣಿ ಇವರು ತಮ್ಮ ಕಾರು ಅತಿವೇಗ ಮತ್ತು ನಿಷ್ಕಾಳಿಜಿತ ನದಿಂದ ರೋಡಿನ ಮಧ್ಯದಲ್ಲಿ  ನಡೆಸುತ್ತಾ ಉಪಳಾಂವ ಕ್ರಾಸ ನಂತರ ಭವಾನಿ ಗುಡಿ ಎದುರಿನ ರೋಡಿನ ಮೇಲೆ ಬರುತ್ತಿರುವಾಗ ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರ ಚಾಲಕನು ಕೂಡಾ ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ರೋಡಿನ ಮಧ್ಯದಲ್ಲಿ  ನಡೆಸುತ್ತಾ ಹೊರಟಿದ್ದು ಇಬ್ಬರು ವಾಹನ ಚಾಲಕರು ಮುಖಾಮುಖಿ ಡಿಕ್ಕಿ ಹೊಡೆದರು. ಇದರಿಂದಾಗಿ  ನನಗೆ  ನನ್ನ ಬಲಗಾಲ ಮತ್ತು ಎಡಗಾಲ ಮೊಳಕಾಲ ಮೇಲೆ ಭಾರಿ ಗುಪ್ತಗಾಯವಾಗಿದ್ದು, ವೆಂಕಟ್  ಕುಲಕರ್ಣಿ ಇವರಿಗೆ ನೋಡಲಾಗಿ ಅವರು ಎಡ ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದರು. ನಮಗೆ ಡಿಕ್ಕಿ ಪಡಿಸಿದ ಕಾರ ನಂಬರ ನೋಡಲಾಗಿ ಕೆಎ-33 -5000 ನೇದ್ದರಲ್ಲಿರುವ ಜಮೀಲಖಾನ ಗುಲಬರ್ಗಾ ಇವರಿಗೆ ಮತ್ತು ಅವರ ಕಾರಿನಲ್ಲಿ ಕುಳಿತ ಇತರರಿಗೆ ಗುಪ್ತಗಾಯವಾಗಿರುತ್ತವೆ. ಟಾಟಾ ಇಂಡಿಕಾ ಕಾರ ಚಾಲಕ  ಹುಸೇನ  ಸಾ:ಸೀತನೂರ  ಹಾ::ಮುಸ್ಲಿಂ ಸಂಘ ಗುಲಬರ್ಗಾ ಇತನಿಗೆ ಬಾಯಿ ತುಟಿಗೆ ರಕ್ತಗಾಯವಾಗಿರುತ್ತವೆ. ಈ ಘಟನೆಗೆ ಇಬ್ಬರ ಕಾರ ಚಾಲಕರು ಕಾರಣವಾಗಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:100/2013 ಕಲಂ 279, 338 304 (ಎ) ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ಶ್ರೀ ಹರೀಶ್ಚಂದ್ರ ತಂದೆ ಸೋಮಲಾ ರಾಠೋಡ ಉ|| ತಾಜ ಸುಲ್ತಾನಪೂರದಲ್ಲಿ ಪ್ರಭಾರಿ ಪಿ.ಡಿ.ಓ ಸಾ:ಸಣ್ಣೂರ ಗ್ರಾಮ ಹಾ||ವ|| ಭಾಗ್ಯ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಮಕ್ಕಳು ಕೂಡಿಕೊಂಡು ನಮ್ಮೂರ ತಾಂಡಾದಲ್ಲಿ ದೇವರ ಕಾರ್ಯಕ್ರಮ ಇದ್ದುದ್ದರಿಂದ ದಿನಾಂಕ:19-02-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಭಾಗ್ಯ ನಗರದ ಬಾಡಿಗೆ ಮನೆಗೆ ಕೀಲಿ  ಹಾಕಿಕೊಂಡು ಸಣ್ಣೂರ ತಾಂಡಾಕ್ಕೆ ಹೋಗಿರುತ್ತೇವೆ. ಮರಳಿ ದಿನಾಂಕ:20-02-2013 ರಂದು 10-00 ಗಂಟೆಗೆ ಮನೆಗೆ  ಬಂದಾಗ,  ನಮ್ಮ ಮನೆಯ ಮುಖ್ಯ್ಯ ದ್ವಾರದ ಬಾಗಿಲು ಕೀಲಿ ಮುರಿದು ಆಲಮಾರಿಟ್ಟಿದ್ದ  ಬಂಗಾರದ ಆಭರಣ ಹಾಗೂ ನಗದು ಹಣ 20,000/-  ರೂಪಾಯಿಗಳು ಮತ್ತು ಒಂದು ಸಾಮಸಾಂಗ ಮೋಬೈಲ್ ಅ.ಕಿ-8,000/- ರೂ  ಹೀಗೆ ಒಟ್ಟು 40,000/- ರೂ ಬೆಲೆಯುಳ್ಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 56/2013  ಕಲಂ, 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: