Police Bhavan Kalaburagi

Police Bhavan Kalaburagi

Tuesday, March 19, 2013

GULBARGA DISTRICT REPORTED CRIME

ಕೊಲೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ:ಶ್ರೀ ಶಿವಶರಣಪ್ಪ ತಂದೆ ಶರಣಪ್ಪ ಹೀರೆನೂರ ವಯಾ:24 ಉ: ಕೂಲಿ ಕೆಲಸ ಸಾ|| 13 ನೇ ಕ್ರಾಸ ತಾರಫೈಲ ಗುಲಬರ್ಗಾ ರವರು ನಮ್ಮ ಮನೆಯ ಸಮೀಪ ಇರುವ ಬಸವರಾಜ ತಂದೆ ಸಾಯಿಬಣ್ಣ ಹೀರೆನೂರ ಇವರ ಮನೆಯ  ಹತ್ತಿರ ಚುನಾವಣೆಯಲ್ಲಿ ಗೆದ್ದ ಪ್ರಯುಕ್ತ ಊಟ ಹಂಚುವಾಗ ನಾನು ಮತ್ತು ನನ್ನ ಗೆಳೆಯ ಸ್ವಾಮಿದಾಸ ಕೂಡಿಕೊಂಡು ದಿನಾಂಕ:18-03-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಹೋದಾಗ ದುರ್ಗಪ್ಪ ತಂದೆ ಮರೆಪ್ಪ ನಿಂಗದಳ್ಳಿ, ದಿಗಂಬರ ತಂದೆ ಶರಣಪ್ಪ ಗೊಂದಡಗಿ, ಇವರು ನಮಗೆ ಊಟ ಇಲ್ಲಾ ಅಂತಾ ಹೆಳಿದರು ಆಗ ನಾನು ನಿಮ್ಮ ಊಟ ಯಾರಿಗೆ ಬೇಕಾಗಿದೆ ಅಂತಾ ಹೇಳಿದಾಗ ಅವರು ಅವಾಚ್ಯವಾಗಿ ಬೈದು ದುರ್ಗಪ್ಪ, ದಿಗಂಬರ ಹೊಡೆದರು ಅಷ್ಟರಲ್ಲಿ ಸ್ವಾಮಿದಾಸ ಮತ್ತು ರವಿ ಸಂಗೆಪಾನ ಇವರು ನನ್ನನ್ನು ಬಿಡಿಸಿಕೊಂಡು ಮನೆ ಕಡೆಗೆ ಹೋಗುತ್ತಿರುವಾಗ ನನ್ನ ತಂದೆ ಶರಣಪ್ಪ ತಂದೆ ಸಾಯಿಬಣ್ಣ ವಯಾ|| 60 ವರ್ಷ ಇವರು ಏನಾಯಿತು ಅಂತಾ ಬಂದು ಕೇಳುತ್ತಿರುವಾಗ ದುರ್ಗಪ್ಪ ತಂದೆ ಮರೆಪ್ಪ ನಿಂಗದಳ್ಳಿ, ದಿಗಂಬರ ತಂದೆ ಶರಣಪ್ಪ ಗೊಂದಡಗಿ, ಶಿವಶರಣ ತಂದೆ ಮರೆಪ್ಪ ನಿಂಗದಳ್ಳಿ, ತಿಮ್ಮಣ್ಣ ತಂದೆ ಮರೆಪ್ಪ ನಿಂಗದಳ್ಳಿ ರವರೆಲ್ಲರೂ ಕೂಡಿಕೊಂಡು ನನ್ನ ತಂದೆಗೆ ನೀನು ಯ್ಯಾಕೆ ಮಧ್ಯ ಬರುತ್ತಿ ಅಂತಾ ಬೈದು ನನ್ನ ತಂದೆಗೆ ದುರ್ಗಪ್ಪ ಇವನು ಎದೆಯ ಮೇಲೆ ಹೊಡೆದಾಗ ಕೇಳಗೆ ಬಿದ್ದನು. ಆತನಿಗೆ ಉಪಚಾರ ಕುರಿತು ಮೋಟರ ಸೈಕಲ್ ಮೇಲೆ ಖಾಸಗಿ ವೈದ್ಯಾಧಿಕಾರಿಯವರ ಹತ್ತಿರ ತೆಗೆದುಕೊಂಡು ಹೋಗಿ ತೋರಿಸಿದಾಗ ಅವರು ಮೃತ ಪಟ್ಟಿರುವದಾಗಿ ತಿಳಿಸಿದರು. ದುರ್ಗಪ್ಪ ಇವರ ಮಗಳಾದ ರೇಣುಕಾ ಇವಳ ಸಂಗಡ ನಾನು 4 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರಿಂದ ನಮ್ಮ ಸಂಗಡ ಜಗಳ ಮಾಡಿ ನನ್ನ ತಂದೆಗೆ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:54/2013 ಕಲಂ 323, 302, 504, ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

No comments: