Police Bhavan Kalaburagi

Police Bhavan Kalaburagi

Monday, March 18, 2013

GULBARGA DISTRICT REPORTED CRIME


ಜೂಜಾಟ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ:ಮಹಾಗಾಂವ ಠಾಣೆಯ ವ್ಯಾಪ್ತಿಯ ನಾಗೂರು ಗ್ರಾಮದ ಹನುಮಾನ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಶ್ರೀ,ಎಸ್.ಎಸ ಹುಲ್ಲೂರು ಪೊಲೀಸ್ ಇನ್ಸಪೇಕ್ಟರ ಡಿ.ಸಿ.ಐ.ಬಿ ಘಟಕದ ಗುಲಬರ್ಗಾರವರು ಹಾಗೂ ಪಿ.ಎಸ್.ಐ ರವರಾದ ಮಹಾಂತೇಶ ಪಿ.ಎಸ್.ಐ ಡಿಸಿಆರ್.ಬಿ ಘಟಕ ಹಾಗೂ ಸಿಬ್ಬಂದಿಯವರಾದ ದತ್ತಾತ್ರೇಯ ಎ.ಎಸ್.ಐ, ಅಣ್ಣಾರಾವ ಅಣ್ಣಪ್ಪಬೆಳ್ಳಿ, ಶಿವಯೋಗಿ, ಪ್ರಕಾಶ, ವಿಜಯಕುಮಾರ, ಮಲ್ಲಣ್ಣ, ಸುರೇಶ,ಬಸವರಾಜ ಹೆಚ್.ಸಿ.ಗಳು ಹಾಗೂ ವೀರಣ್ಣ ಜೀಪ ಚಾಲಕ ಚಂದ್ರಕಾಂತ ಜೀಪ ಚಾಲಕ, ಹಾಗೂ ಮಹಾಗಾಂವ ಠಾಣೆಯ ಸಿಬ್ಬಂದಿಯವರಾದ ಯಶ್ವಂತ, ಖಂಡೇರಾವ ಪಿಸಿರವರು ದಿನಾಂಕ:17/03/2013 ರಂದು ಸಾಯಂಕಾಲ 4-20 ಗಂಟೆ ಸುಮಾರಿಗೆ  ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ರವಿ ತಂದೆ ದೇವಿಂದ್ರಪ್ಪ ಅಡವಿಕರ, ಶಂಕರ ತಂದೆ ಅಗ್ನು ಮೀನಗಾರ, ಮಹಾದೇವಪ್ಪ ತಂದೆ ಚನ್ನಪ್ಪ ಮಾಂಗ, ಹಮೀದ ತಂದೆ ಮಸ್ತಾನಸಾಬ ಮೋಮಿನ,ಬೀಮಶ್ಯಾ ತಂದೆ ನಾಗಪ್ಪ ಬೋವಿ, ದೇವಾ ತಂದೆ ಲಕ್ಷ್ಮಣ ಬಿರನವರ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 4750-00 ರೂಪಾಯಿಗಳು ಹಾಗೂ ಇಸ್ಪೇಟ್ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ:32/2013 ಕಲಂ: 87 ಕೆ.ಪಿ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: