Police Bhavan Kalaburagi

Police Bhavan Kalaburagi

Sunday, March 17, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಸುಭಾಶ ತಂದೆ ಯಲ್ಲಪ್ಪಾ ಮಕ್ಕಳಕರ ಸಾ:ಕುನ್ನಿ ದೌಡ್ಡಿ ಮರಗಮ್ಮಾನ ಗುಡಿಯ ಹತ್ತಿರ ಶಹಾ ಬಜಾರ ಗುಲಬರ್ಗಾರವರು ನನ್ನ ತಮ್ಮ ನಾಗರಾಜ ಇತನು ದಿನಾಂಕ:16-03-2013 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ರಾಣೋಜಿ ಪೀರ ದರ್ಗಾದ ಹತ್ತಿರ ಸಿದ್ರಾಮಯ್ಯ ಸ್ವಾಮಿ ಮನೆಯ ಕಟ್ಟಡ ಕೆಲಸಕ್ಕೆ ಹೋಗಿದ್ದು, ಆತನ ಸಂಗಡ ಕೆಲಸ ಮಾಡುವ ಗಿರೀಶ ತಂದೆ  ಭೀಮಣ್ಣ ಇತನು ಫೊನ ಮಾಡಿ, ನಿಮ್ಮ ತಮ್ಮನಾದ ನಾಗರಾಜ  ಇತನು ಸಿದ್ರಾಮಯ್ಯ ಸ್ವಾಮಿ ಮನೆಯ ಪ್ಲಾಸ್ಟರ ಕೆಲಸ ಮಾಡುತ್ತಿದ್ದಾಗ ಕಟ್ಟಿಗೆ ಪ್ರಾಂಚಿ ಮುರಿದು ಮೇಲಿಂದ ಕೆಳಗೆ ಬಿದ್ದುದ್ದರಿಂದ  ನಾಗರಾಜ ಇತನಿಗೆ ತಲೆ ಹಿಂಭಾಗಕ್ಕೆ ಮನೆಯ ಬೇಸ್ ಮೆಂಟ ಬಡೆದು ಭಾರಿರಕ್ತಗಾಯವಾಗಿದೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರಗೆ ಸೇರಿಕೆ ಮಾಡಿರುತ್ತೆವೆ ನೀವು ಕೂಡಲೆ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾವು ಹೋಗಿ ನೋಡಲು ನಾಗರಾಜ ಇತನಿಗೆ ತಲೆಗೆ ಭಾರಿರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು , ಉಪಚಾರ ಫಲಕಾತಿಯಾಗದೇ ಮಧ್ಯಾಹ್ನ 3-45 ಗಂಟೆ ಸುಮಾರಿಗೆ ನಾಗರಾಜ ಇತನು ಮೃತ ಪಟ್ಟಿರುತ್ತಾನೆ. ಮನೆಯ ಮಾಲಿಕ ಸರಿಯಾದ ಕಟ್ಟಿಗೆ ಪ್ರಾಂಚಿ ಕೊಡದೆ ಇರುವದರಿಂದ ನನ್ನ ತಮ್ಮ ಮೃತ ಪಟ್ಟಿರುತ್ತಾನೆ ಅಂತಾ ಆತನ ಆಣ್ಣನಾದ ಸುಭಾಶ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 137/2013 ಕಲಂ, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:16-03-2013 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಗುಲಬರ್ಗಾ – ಹುಮನಾಬಾದ ಮುಖ್ಯ ರಸ್ತೆಯ ಮಾಸಾಬ್ತಿ ದರ್ಗಾದ ಹತ್ತಿರ ಕೆಲವು ಜನರು ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಶ್ರೀ,ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾರವರುಶ್ರೀ ಮಹಾಂತೇಶ ಪಿ.ಎಸ.ಐ ಡಿಸಿಐಬಿ  ಘಟಕ, ಶ್ರೀ ವಿಜಯಕುಮಾರ ಪಿ.ಎಸ.ಐ ಸ್ಟೇಶನ ಬಜಾರ, ಶ್ರೀ ವಿಜಯಕುಮಾರ ಪಿ.ಎಸ.ಐ ಡಿಎಸಬಿ ಘಟಕ ರವರು ಹಾಗೂ ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ ನಿಂಗಪ್ಪಾ, ದತ್ತಾತ್ರಯ, ಬಸವರಾಜ, ಮುಖ್ಯ ಪೇದೆಗಳಾದ ಶಿವಯೋಗಿ, ಪ್ರಕಾಶ, ಅಣ್ಣಾರಾವ, ಅಣ್ಣೆಪ್ಪಾ ಬೆಳ್ಳಿ , ಮಲ್ಲಣ್ಣಾ, ಮತ್ತು ಗ್ರಾಮೀಣ ಠಾಣೆಯ ಎ.ಎಸ.ಐ ರವರಾದ ಅಣ್ಣರಾಯ ಮತ್ತು ಹಣಮಂತ, ಸಂಜೀವ ರೆಡ್ಡಿ, ಮಲ್ಲಿಕಾರ್ಜುನ ಪೊಲೀಸ್ ಪೇದೆ ರವರು  ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ 11 ಜನ ಆರೋಪಿತರಾದ 1) ಶ್ರೀ, ನಂದು ತಂದೆ ಪುಂಡಲೀಕಪ್ಪ ಮೇತ್ರಿ ಸಾಹುಮನಾಬಾದ  ಹಾ:ಕೆ.ಕೆನಗರ ಗುಲಬರ್ಗಾ, ಬಾಬಾ ತಂದೆ ಬಾಬುಮಿಯ್ಯಾ ಬೇಕರಿ ಕೆಲಸ ಸಾರಫೀಕ ಚೌಕ ಗುಲಬರ್ಗಾ , ಶಿವಶರಣಪ್ಪ ತಂದೆ ಶ್ರೀಮಂತ ವಾಡಿ :ಹೋಟಲ ಕೆಲಸ ಸಾಕಪನೂರ, ಫಯಾಜ ತಂದೆ ಲಿಯಾಖತ ಅಲಿ  ಆಟೋ ಚಾಲಕ  ಸಾ ಉಮರ ಕಾಲನಿ ರಿಂಗ ರೋಡ ಗುಲಬರ್ಗಾ, ಹಿರಗಪ್ಪ ತಂದೆ ಸಾಯಬಣ್ಣಾ ಕಪನೂರ,  ಅಕ್ಬರ ತಂದೆ  ಅಲ್ಲಾವುದ್ದೀನ ಸಾರಫೀಕ ಚೌಕ ಗುಲಬರ್ಗಾ,  ಮಹ್ಮದ ಜಾನಿ  ತಂದೆ ಅಬ್ದುಲ ರಹೀಮ ಖುರೇಷಿ ಸಾ:ಖಾಜಾ ಕಾಲೋನಿ ಗುಲಬರ್ಗಾ, ಸಲೀಮ ತಂದೆ ಅಬ್ದುಲ ರಸೂಲ್ ಸಾ:ಫಾತೀಮಾ ಶಾಲೆ ಹತ್ತಿರ ಗುಲಬರ್ಗಾ,  ಮುಜೀಬ ತಂದೆ ವಲಿವುದ್ದಿನ ಅಂಕಲ್ ಸಾರಫೀಕ ಚೌಕ ಗುಲಬರ್ಗಾ,  ಶೇಖರ ತಂದೆ ಶಿವರಾಜ  ಸಾಕಪನೂರ,  ಪ್ರಭುಲಿಂಗ ತಂದೆ ಶ್ರೀಮಂತ ವಾಡಿ ಸಾಕಪನೂರ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 3055-00 ರೂಪಾಯಿಗಳು, 6 ಮೋಬೈಲ್, ಎರಡು ಮೋಟಾರ ಸೈಕಲ್ ಗಳು  ಮತ್ತು ಜೂಜಾಟಕ್ಕೆ ಬಳಸಿದ  ಎಲೆಗಳು  ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 138/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ; ದಿನಾಂಕ: 15-03-2013 ರಂದು ರಾತ್ರಿ ನಾವು ಮನೆಯ ಬಾಗಿಲ ಕೀಲಿ ಹಾಕಿ ಮನೆಯ ಹೊರಗಡೆ ಮಲಗಿಕೊಂಡಾಗ ಮಧ್ಯರಾತ್ರಿ ಯಾರೋ ಕಳ್ಳರು ಮನೆಯ ಭಾಗಿಲ ಕೀಲಿ ಮುರಿದು ಬಂಗಾರದ ಆಭರಣಗಳು, ಬೆಳ್ಳಿಯ ಸಾಮಾನುಗಳು, ಮತ್ತು ಹೊಸ್ಸ ಬಟ್ಟೆ ಹೀಗೆ ಒಟ್ಟು 90,000 ರೂಪಾಯಿ ಮೌಲ್ಯಗಳದ್ದು ಯಾರೋ ಮಧ್ಯರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಣಪ್ಪ ತಂದೆ  ಬಸವರಾಜ ಹೋಳಕರ ಸಾ:ಬಬಲಾದ ಐ.ಕೆ  ತಾ: ಗುಲ್ಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ:ನನ್ನ ಮಗನಾದ ಚೆನ್ನವೀರ ಇತನು ದಿನಾಂಕ:13-03-2013 ರಂದು ಈಶ್ವರ, ಗುಂಡಪ್ಫಾ ರವರ ಸಂಗಡ ಶಂಕ್ರೆಪ್ಫಾ ಕೋಟನೂರ ರವರ ಟ್ರಾಕ್ಟರ ರವರ ಪರ್ಸಿ ತುಂಬು ಕೆಲಸಕ್ಕೆ ಹೋಗಿದ್ದು, ಕಗ್ಗನಮಡ್ಡಿ ಗ್ರಾಮದಿಂದ ಪರ್ಸಿ ಕಲ್ಲುಗಳನ್ನು ಕೆಎ-39/ಟಿ-2526 ನೇದ್ದರ ಟ್ರ್ಯಾಕ್ಟರನಲ್ಲಿ  ತುಂಬಿಕೊಂಡು ಮರಳಿ ರಾತ್ರಿ 11-30 ಗಂಟೆಗೆ ಮಹಾಗಾಂವ ಕ್ರಾಸಿಗೆ ಬಂದಾಗ ಟ್ರಾಕ್ಟರ ಚಾಲಕನಾದ ರಾಜಕುಮಾರ ತಂದೆ ಶಂಕ್ರಪ್ಪಾ ಕೋಟನೂರ ಇತನು ತನ್ನ ವಶದಲ್ಲಿದ್ದ ಟ್ರಾಕ್ಟರ ಅತೀವೇಗ ಮತ್ತು ಅಲಕ್ಷನದಿಂದ ನಡೆಯಿಸಿ ಒಮ್ಮೇಲೆ ಕಟ್ಟ ಮಾಡಿದ್ದರಿಂದ ಚಾಲಕನ ಪಕ್ಕದಲ್ಲಿ ಕುಳಿತ ಚೆನ್ನವೀರ ಇತನು ಕೆಳಗೆ ಬಿದ್ದಿದ್ದರಿಂದ ಆತನ ಬಲಗಾಳು ಮುರಿದು ಸೊಂಟಕ್ಕೆ ಮತ್ತು ಹೊಟ್ಟಿಗೆ ಭಾರಿ ತರಚಿದ ರಕ್ತಗಾಯಗಳಾಗಿ ರಕ್ತ ಹೆಪ್ಪುಗಟ್ಟಿದಂತೆ ಆಗಿರುತ್ತದೆ ಚನ್ನವೀರನಿಗೆ ಇತನಿಗೆ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ಸೋಲಾಪೂರ ಜಿಲ್ಲೆಯ ಆಸ್ಪತ್ರೆಗೆ ಉಪಚಾರ ಕುರಿತು ಸೇರಕೆ ಮಾಡಲಾಗಿದೆ.  ಟ್ರಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಂಗೀತಾ ಗಂಡ ಜಗನಾಥ ಸಾ|| ಹರಕಂಚಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2013 ಕಲಂ, 279, 338 ಐಪಿಸಿ ಮತ್ತು 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಾವು ಕಡಿದು ಸಾವು:
ಮಹಾಗಾಂವ ಪೊಲೀಸ್ ಠಾಣೆ;ಶ್ರೀ, ಶಿವಶರಣಪ್ಪ ತಂದೆ ದ್ಯಾವಪ್ಪ ಬೀರನವರ ಸಾ|| ನಾಗೂರ ರವರು ತನಗೆ 5 ಜನ ಗಂಡು ಮಕ್ಕಳಿದ್ದು ಸುನೀಲ ಅಂತಾ ಕೊನೆಯವನು 18 ವರ್ಷದವನಾಗಿದ್ದು ತನ್ನ ಸಂಗಡ ಒಕ್ಕಲುತನ ಕೆಲಸ ಮಾಡುತ್ತಿದ್ದು ತಮ್ಮ ಎತ್ತುಗಳ ಸಲುವಾಗಿ ಮನೆಯ ಪಕ್ಕದಲ್ಲಿಯೆ ಕಣಕಿ ಹಾಕಿರುತ್ತೇವೆಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಮಗನಾದ ಸುನೀಲ ಇತನು ಎತ್ತುಗಳಿಗೆ ಮೇವು ಹಾಕುವ ಸಂಬಂಧ ಕಣಕಿ ತೆಗೆದುಕೊಳ್ಳುವಾಗ ಚರ್  ಅಂತಾ ಚೀರಿ ತನ್ನಗೆ ಹಾವು ಕಡಿಯಿತು ಅಂತಾ ಹೇಳಿದನು, ಆಗ ಆ ಹಾವು ಕೂಡಾ ಹೊರಗೆ ಬಂದಾಗ ತಾನು ಮತ್ತು ತನ್ನ ತಮ್ಮ ಹೊಡೆದು ಹಾಕಿ ನನ್ನ ಮಗನಿಗೆ ನೋಡಲಾಗಿ ಅವನ ಬಲಗೈಯ ಉಂಗುರು ಬೆರಳಿಗೆ ಹಾವು ಕಚ್ಚಿದ್ದು ರಕ್ತ ಸೊರುತ್ತಿತ್ತು ಆಗ ಊರಲ್ಲಿ ಅಲ್ಲಲ್ಲಿ ಆರ್ಯವೇದಿಕ ಔಷದ ಕೊಡಿಸಿ ಗುಲಬರ್ಗಾದ ಸರಕಾರಿ ಆಸ್ಪತ್ರೆ ಸೇರಿಕೆ ಮಾಡಿದಾಗ ಸಾಯಂಕಾಲ 4-45 ನನ್ನ ಮಗ ಮೃತಪಟ್ಟಿರುತ್ತಾನೆ.  ಅಂತಾ ಶಿವಶರಣಪ್ಫಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ನಾನು ಗೋವಿಂದ ಎ,ಎಸ್,ಐ ಮಹಾಗಾಂವ ಠಾಣೆ ಯು,ಡಿ,ಅರ್,ನಂ:01/2013 ಕಲಂ 174 ಸಿ,ಅರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ, 

No comments: